,ಸಿಎಂ ಸಿದ್ಧರಾಮಯ್ಯರಿಗಿಂತ ಯುಡಿ ಮಿನಿಸ್ಟರ್ ಪಾವರ್ ಫುಲ್.
ವರ್ಗಾವಣೆಗೆ ಪತ್ರಕ್ಕೆ ಸಿಎಂ ಸಮ್ಮತಿ ಕೊಟ್ಟರೂ ಯುಡಿ ಮಿನಿಸ್ಟರ್ ತಡೆ.. ಬೆಳಗಾವಿ ಪಾಲಿಕೆ ಕಿರಿಯ ಅಧಿಕಾರಿಯೊಬ್ಬರ ವರ್ಗಾವಣೆ ವಿವಾದ. ಮುನಿಸಿಕೊಂಡ ಸತೀಶ್ ಜಾರಕಿಹೊಳಿ.
ಬೆಳಗಾವಿ.
ಗಡಿನಾಡ ಬೆಳಗಾವಿ ಜಿಲ್ಲೆಗೆ ಸಿಎಂ ಸಿದ್ಧರಾಮಯ್ಯ ಅವರ ಪರಮಾಪ್ತ ಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಮಂತ್ರಿ..
ಆದರೆ ಒಬ್ನ ಪಾಲಿಕೆ ಕಿರಿಯ ಅಧಿಕಾರಿ ವರ್ಗಾವಣೆಗೆ ಸತೀಶ ಜಾರಕಿಹೊಳಿ ಅಷ್ಟೇ ಅಲ್ಲ ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಮ್ಮತಿ ಕೊಟ್ಟರೂ ನಗರಾಭಿವೃದ್ಧಿ ಸಚಿವರು ಅದನ್ನು ಕಣ್ಣೆತ್ತಿ ಸಹ ನೋಡಿಲ್ಲ.

ಇದು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಷ್ಟೇ ಅಲ್ಲ ಇನ್ನಿತರ ಇಲಾಖೆಯಲ್ಲೂ ಅದೇ ಸ್ಥಿತಿ ಮುಂದು ವರೆದಿದೆ.
ಇದರ ಜೊತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷರ ಬದಲಾವಣೆ ಸುದ್ದಿ ಹಬ್ಬಿದೆ. ಈಗ ಎಲ್ಲವನ್ನು ಸೇರಿಸಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಲು ಮೈಸೂರು ದಸರಾ ಪ್ರವಾಸದ ನೆಪ ಮಾಡಿದ್ದರು ಎನ್ನಲಾಗಿದೆ.
ಈಗ 18 ರಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬೆಳಗಾವಿಗೆ ಬರುವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಗೈರಾಗುತ್ತಿರುವುದು ಚರ್ಚೆಗೆ ಕಾರಣವಾಗಿದೆ.
ಸಿಂಪಲ್ ಆಗಿ ಉದಾಹರಣೆ ಸಮೇತ ಹೇಳಬೇಕೆಂದರೆ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಒಬ್ಬದ ವರ್ಗಾವಣೆಗೆ ಸತೀಶ ಜಾರಕಿಹೊಳಿ ಅಷ್ಟೇ ಅಲ್ಲ ಸ್ವತ: ಮುಖ್ಯಮಂತ್ರಿಗಳೂ ಸಮ್ಮತಿ ಸೂಚಿಸಿದ್ದರು. ಪತ್ರವನ್ನು ನೀಡಿದ್ದರಂತೆ.

ಆದರೆ ಅದಕ್ಕೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಅವರು ಸತೀಶ ಮತ್ತು ಸಿದ್ಧರಾಮಯ್ಯ ಮಾತಿಗೆ ಮನ್ನಣೆ ನೀಡಿಲ್ಲ.
ಈ ಕೋಪ ಸಹಜವಾಗಿ ಸತೀಶ ಜಾರಕಿಹೊಳಿಯಲ್ಲಿದೆ. ಇದರ ಜೊತೆಗೆ ಇನ್ನೂ ಕೆಲವರ ವರ್ಗಾವಣೆ ಯಲ್ಲೂ ಕೂಡ ಸತೀಶ ಅಸಮಾಧಾನ ಗೊಂಡಿದ್ದಾರೆ, ಹೀಗಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಈ ಪ್ರವಾಸ ಹಮ್ಮಿಕೊಂಡಿದ್ದರು ಎನ್ನಲಾಗುತ್ತಿದೆ.
ಡಿಕೆ ಬೆಳಗಾವಿಗೆ.
ಸತೀಶ ಬೆಂಗಳೂರಿಗೆ

ಸಚಿವ ಸತೀಶ ಜಾರಕಿಹೊಳಿ ಗೈರು ಹಾಜರಿ ನಡುವೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬೆಳಗಾವಿಗೆ ಆಗಮಿಸುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚಗೆ ಗ್ರಾಸವಾಗಿದೆ.
ನಾಳೆ ದಿ. 18 ರಂದು ಬೆಳಿಗ್ಗೆ 10.55 ಕ್ಕೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಶಿವಕುಮಾರ ಆಗಮಿಸಿ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸುವರು, ನಂತರ 2.30 ರವರೆಗೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ರಸ್ತೆ ಮೂಲಕ 3.30 ಕ್ಕೆ ಹುಕ್ಕೇರಿಯತ್ತ ಪ್ರಯಾಣ ಮಾಡುವರು. ಸಂಜೆ 4 ಗಂಟೆಗೆ ಹುಕ್ಕೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿ ಸಂಜೆ 6 ಕ್ಕೆ ಹುಕ್ಕೇರಿ ಹಿರೇಮಠದಲ್ಲಿ ನಡೆಯಲಿರುವ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ನಾಳೆ ರಾತ್ರಿ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಲಿರುವ ಡಿ.ಕೆ.ಶಿವಕುಮಾರ ಅವರು ನಾಡಿದ್ದು ಬೆಳಗ್ಗೆ 11.15 ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿನತ್ತ ಪ್ರಯಾಣ ಬೆಳೆಸುವರು.