ಮೊದಲ ಹಂತದಲ್ಲೇ ಮುಗ್ಗರಿಸಿದ ಕಾಂಗ್ರೆಸ್. ಮೇಯರ್ ವಿತುದ್ಧ ಕೇಸ್ ಆಗಲ್ಲ ಎಂದ ಪೊಲೀಸ್..
ಮಧ್ಯರಾತ್ರಿ ವರೆಗೆ ನಡೆದಿತ್ತು ಪ್ರಯತ್ನ. ಕೇಸ್ ದಾಖಲಿಸಲು ಬೆಂಗಳೂರಿನಿಂದಲೇ ಬಂದಿತ್ತು ನಿರ್ದೇಶನ.
ಆದರೆ 138 pk ಕೇಸ್ ಉರುಳಾಗುವ ಸಾಧ್ಯತೆ. ಈ ಬಗ್ಗೆ ಜಿಲ್ಲಾಮಂತ್ರಿ ಜೊತೆ ಮಾತಾಡಲು ಹೋಗಿದ್ದ ಆ ‘ಶ್ಯಾಣ್ಯಾ’ ಯಾರು?
ಪಿಕೆ ಭಾನಗಡಿ ಅಭಯ ಸಹ ಗರಂ. ತನಿಖೆಗೆ ಸೈ ಅಂದಿದ್ದ ಅಭಯ.
ಬೆಳಗಾವಿ.
ಮಹಾನಗರ ಪಾಲಿಕೆಯ ಕೌನ್ಸಿಲ್ ಕಾರ್ಯದರ್ಶಿ ಮೂಲಕವೇ ಮೇಯರ್ ಶೋಭಾ ಸೋಮನ್ನಾಚೆ ವಿರುದ್ಧ ಕೇಸ್ ಕೊಡಿಸುವ ಕಾಂಗ್ರೆಸ್ ವ್ರಯತ್ನಕ್ಕೆ ಹಿನ್ನೆಡೆ ಆಗಿದೆ.
ಕಡತ ನಾಪತ್ತೆ ಪ್ರಕರಣದಲ್ಲಿ ಕೌನ್ಸಿಲ್ ಕಾರ್ಯದರ್ಶಿ ಮೇಲೆ ಬೆಂಗಳೂರಿನಿಂದಲೇ ಒತ್ತಡ ಹೇರಿಸಿ ಮೇಯರ್ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡುವ ಭಾರೀ ಕಸರತ್ತು ನಡೆದಿತ್ತು.

ಕಳೆದ ದಿನ ಮಧ್ಯರಾತ್ರಿವರೆಗೆ ಕೌನ್ಸಿಲ್ ಕಾರ್ಯದರ್ಶಿ ಯವರನ್ನು ಠಾಣೆಯಲ್ಲಿ ಕುಳ್ಳಿರಿಸಿಕೊಂಡು ಕೇಸ್ ಕೊಡಿಸುವ ಬಗ್ಗೆ ಸ್ಕೆಚ್ ನಡೆದಿತ್ತು.
ಇದಕ್ಕಾಗಿ ನಗರಾಭಿವೃದ್ಧಿ ಇಲಾಖೆ ಸಚಿವರೂ ಸೇರಿದಂತೆ ಇನ್ನೂ ಕೆಲವರು ಕೇಸ್ ದಾಖಲಾಗುವ ಬಗ್ಗೆ ಸೂಚನೆ ನೀಡಿದ್ದರು.
ಆದರೆ ಇಂತಹ ಸೂಕ್ಷ್ಮ ವಿಷಯದಲ್ಲಿ ಅವಸರಕ್ಕೆ ಬೀಳದ ಮಾರ್ಕೆಟ್ ಠಾಣೆಯ ಅಧಿಕಾರಿಗಳು ಮಧ್ಯರಾತ್ರಿ 12.45 ಕ್ಕೆ ಕಾನೂನು ಪುಸ್ಜಕ ತೆಗೆದುಕೊಂಡು ಹಿರಿಯ ಅಧಿಕಾರಿಗಳ ಮನೆಗೆ ಧಾವಿಸಿದ್ದರು.
ಕೊನೆಗೆ ಈಗ ಕೊಟ್ಟ ಕಡತ ನಾಪತ್ತೆ ಬಗ್ಗೆ ಮೇಯರ್ ವಿರುದ್ಧ ದೂರು ದಾಖಲು ಮಾಡಲು ಆಗಲ್ಲ ಎನ್ನುವ ತೀರ್ಮಾನಕ್ಕೆ ಪೊಲೀಸರು ಬಂದರು ಎನ್ನಲಾಗಿದೆ.
ಇದರಿಂದ ಕಾಂಗ್ರೆಸ್ ನ ಒಂದು ಪ್ರಯತ್ನ ಮುಗ್ಗರಿಸಿತು ಎಂದು ಹೇಳಬಹುದು. ಇನ್ನು 138 ಪಿಕೆಗಳ ನೇಮಕಾತಿ ಹಗರಣದ ಬಗ್ಗೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರ ಮೂಲಕ ತನಿಖೆಗೆ ಅಸ್ತು ಸಿಕ್ಕಿದೆ ಎನ್ನಲಾಗಿದೆ.