ಬೆಳಗಾವಿ.
ಮಹಾನಗರ ಪಾಲಿಕೆ ಬಿಜೆಪಿ ನಗರಸೇವಕ ರಾಜು ಭಾತಖಾಂಡೆ ಅವರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 18 ಜನರ ವಿರುದ್ಧ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಬೆಳಗಿನ ಜಾವ 3.10 ಕ್ಕೆ ಪ್ರಕರಣ ದಾಖಲಾಗಿದೆ. ಪಾಲಿಕೆ ಎದುರು ನಡೆಯುತ್ತಿದ್ದ ಪ್ರತಿಭಟನೆ ಸಂದರ್ಭದಲ್ಲಿ ರಮಾಕಾಂತ ಕೊಂಡುಸ್ಕರ ಅವರು ಬಿಜೆಪಿ ಶಾಸಕ ಅಭಯ ಪಾಟೀಲ ವಿರುದ್ಧ ಹೇಳಿಕೆ ನೀಡಿದ್ದರು.ಇದಕ್ಕೆ ಪ್ರತಿಯಾಗಿ ಬೂಡಾ ಮಾಜಿ ಅಧ್ಯಕ್ಷ ಸಂಜಯ ಬೆಳಗಾಂವಕರ ಮತ್ತು ನಗರಸೇವಕ ರಾಜು ಭಾತಖಾಂಡೆ ಪ್ರತಿ ಹೇಳಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ರಮಾಕಾಂತ ಕೊಂಡುಸ್ಕರ ಅವರು ಭಾತಖಾಂಡೆ ಅವರಿಗೆ ಬೆದರಿಕೆ ಹಾಕಿದ್ದರು. ಅಷ್ಟೆ ಅಲ್ಲ 300 ರಿಂದ 400 ಜನ ಭಾತಕಾಂಡೆ ಮನೆ ಹತ್ತಿರ ಹೋಗಿ ಬೈದಾಡಿದ್ದರು

ಈ ಹಿನ್ನೆಲೆಯಲ್ಲಿ ರಮಾಕಾಂತ ಕೊಂಡುಸ್ಕರ ಸೇರಿದಂತೆ ನರೇಶ ನಿಲಜಕರ, ರೋಹಿತ ನಾವಗೆಕರ, ನವೀನ ಹಂಚಿನಮನಿ, ರೋಹಿತ ಜಾಂಬಳೆ, ಸುಭಾಷ ಚೌಗಲೆ, ಆದಿತ್ಯ ಜಾಧವ, ಕಪೀಲ್ ಭೋಸಲೆ, ಜಯೇಶ ಭಾತಖಾಂಡೆ,ಬಳವಂತ ಸಿಂಧೋಳಕರ, ಜಯಶೀಲ ಮುರಕುಟೆ, ಚೇತನ ಕನ್ನೂರಕರ,ಪ್ರದೀಪ ಜಕನೆ, ವಿಜಯ ಪಾಟೀಲ, ಅನಿಲ ಅಷ್ಟೇಕರ, ಅಣ್ಷಾ ಫಲವನ್ನಾಚೆ, ಆದರ್ಶ ಮಾನೆ ಮತ್ತು ವಿಕಾಸ ಬೇಕನೆ ವಿರುದ್ಧ ಪ್ರಕರಣ ದಾಖಲಾಗಿದೆ.
ಐಪಿಸಿ 1860. ಸಹಕಲಂ 143, 504, 506, 249 ರಡಿ ಕೇಸ್ ದಾಖಲಾಗಿದೆ.