ಹೊಸಗಾಳಿ ತಂದ ಉಪ ಆಯುಕ್ತ
ಪಾಲಿಕೆ ಸಿಬ್ಬಂದಿಗಳಿಗೆ ಪ್ರಮಾಣ ವಚನ ಬೋಧನೆ
ಬೆಳಗಾವಿ.
ಇತ್ತೀಚಿನ ಬೆಳವಣಿಗೆಯಿಂದ ಸಕರ್ಾರಕ್ಕೆ ತಲೆನೋವಾಗಿರುವ ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇಂದು ಹೊಸ ಗಾಳಿ ಬೀಸತೊಡಗಿದೆ,
138 ಪೌರ ಕಾಮರ್ಿಕರ ನೇಮಕದಲ್ಲಿ ವ್ಯಾಪಕ ಬ್ರಷ್ಟಾಚಾರ ಆಗಿದೆ ಎನ್ನುವ ಸುದ್ದಿ ನಡುವೆ ಪಾಲಿಕೆಯ ಉಪ ಆಯುಕ್ತ (ಆಡಳಿತ) ಉದಯಕುಮಾರ ತಳವಾರ ಅವರು ಎಲ್ಲ ಸಿಬ್ಬಂದಿಗಳಿಗೆ ಪ್ರಮಾಣ ವಚನ ಬೋಧಿಸಿದರು,
ಇದರಿಂದ ಪಾಲಿಕೆಯಲ್ಲಿ ಹೊಸ ಗಾಳಿ ಬೀಸಿದಂತಾಗಿದೆ.

ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಾಮಾಣಿಕತೆ ಮತ್ತು ಕಾನೂನಿನ ನಿಯಮಗಳನ್ನು ಅನುಸರಿಸುತ್ತೇನೆ, ಲಂಚವನ್ನು ಪಡೆಯುವುದಿಲ್ಲ ಹಾಗೂ ನೀಡುವುದೂ ಇಲ್ಲ. ಎಲ್ಲಾ ಕಾರ್ಯಗಳನ್ನು ಪ್ರಾಮಾಣಿಕ ಮತ್ತು ಪಾರದರ್ಶಕ ರೀತಿಯಲ್ಲಿ ನಿರ್ವಹಿಸುತ್ತೇನೆ.

ಸಾರ್ವಜನಿಕ ಹಿತಾಸಕ್ತಿಯಲ್ಲಿ ಕಾರ್ಯನಿರ್ವಹಿಸುತ್ತೇನೆ ಮತ್ತು
ವೈಯಕ್ತಿಕ ನಡವಳಿಕೆಯಲ್ಲಿ ನಿಷ್ಠೆ ಪ್ರದಶರ್ಿಸುವ ಮೂಲಕ ಮಾದರಿಯಾಗಿರುತ್ತೇನೆ ಎಂದು ಉದಯಕುಮಾರ ಅವರು ಪ್ರಮಾಣ ವಚನ ಬೋಧಿಸಿದರು,