Headlines

ಇತಿಹಾಸ ಸೃಷ್ಟಿಸಿದ ಬೆಳಗಾವಿ ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವ- ಬೆಚ್ಚಿಬಿದ್ದ ಎಂಇಎಸ್
`ಉತ್ಸವ ಆಚರಣೆಯಲ್ಲಿ ಬೆಳಗಾವಿನೇ ನಂ 1…’ ಡಿಸಿ ನಿತೇಶ್ ಪಾಟೀಲ, ಪಾಲಿಕೆ ಆಯುಕ್ತ ಅಶೋಕ ದುಡಗುಂಟೆ ಶ್ರಮ ಸಾರ್ಥಕ. ಮೆರಗು ತಂದ ಬಿಜೆಪಿ ಮೇಯರ್ ಭಾಗಿ

ಬೆಳಗಾವಿ.
ಸಹಜವಾಗಿ ದಸರಾ ಬಂದರೆ ಮೈಸೂರು, ಗಣಪತಿ ಹಬ್ಬ ಬಂದರೆ ಮುಂಬಯಿ ಇನ್ನು. ಹೊಸ ವರ್ಷ ಬಂದರೆ ಗೋವಾ ಕಡೆಗೆ ಜನ ಮುಖ ಮಾಡುವುದು ಸಹಜ,.


ಆದರೆ ಕಳೆದ ದಿನ ನಡೆದ ರಾಜ್ಯೋತ್ಸವ ಇಡೀ ಕರ್ನಾಟಕ ಅಷ್ಟೇ ಅಲ್ಲ ಪಕ್ಕದ ಮಹಾರಾಷ್ಟ್ರದವರೂ ಸಹ ಗಡಿನಾಡ ಬೆಳಗಾವಿಯತ್ತ ತಿರುಗಿ ನೋಡುವಂತಾಯಿತು,
ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳ ಶ್ರಮ ಇದಕ್ಕೆಲ್ಲ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಮತ್ತು ಉಪ ಆಯುಕ್ತ ಉದಯಕುಮಾರ ತಳವಾರ ಮತ್ತು ಇನ್ನಿತರರು ಪಟ್ಟ ಶ್ರಮ ಹೇಳತೀರದು,
ಹೀಗಾಗಿ ಇತಿಹಾಸದಲ್ಲಿ ಮೊಟ್ಟ ಮೊದಲು ಬಾರಿಗೆ ರಾಜ್ಯೋತ್ಸವಕ್ಕೆ ಒಂದು ದಿನ ಮುಂಚಿತವಾಗಿ ಚನ್ನಮ್ಮ ವೃತ್ತದಲ್ಲಿ ಸಾವಿರಾರು ಜನ ಸೇರುವಂತಾಯಿತು.

ಬೆಳಗಾವಿ ರಾಜ್ಯೋತ್ಸವ ವೈಭವ

https://youtu.be/xvm3Kpk1mpM?si=Das5DE3914n1wAEL


ಬಹಳ ವರ್ಷದ ಹಿಂದಿನ ಮಾತು,
ಆಗ ರಾಜ್ಯೋತ್ಸವ ಎಂದರೆ, ಅಲ್ಲಿ ಕೇವಲ ಸರ್ಕಾರಿ ರೂಪಕಗಳೇ ಕಾಣಸಿಗುತ್ತಿದ್ದವು,. ಆಗ ಕನ್ನಡ ಮುಖಂಡರೆನಿಸಿಕೊಂಡವರು ಬಂದು ಕಿತ್ತೂರು ಚನ್ನಮ್ಮ ಪ್ರತಿಮೆಗೆ ಹೂವಿನ ಹಾರ ಹಾಕಿ ಜೈ ಎಂದರೆ ರಾಜ್ಯೋತ್ಸವ ಅರ್ಧ ಮುಗಿದಂತಾಗುತ್ತಿತ್ತು,
ಇನ್ನು ಪೊಲೀಸರು ಎಲ್ಲವೂ ಸುರುಳಿತವಾಗಿ ಮುಗಿದರೆ ಸಾಕು ಎಂದು ನಿಟ್ಟುಸಿರು ಬಿಡುತ್ತಿದ್ದರು., ಅಷ್ಟೇ ಅಲ್ಲ ಆಗ ಮೆರವಣಿಗೆ ಶನಿವಾರ ಕೂಟ, ಗಣಪತಿ ಗಲ್ಲಿ ಪ್ರವೇಶ ಆದಾಗ ಎಲ್ಲಿಂದಲೋ ಕಲ್ಲು ಬಂದು ಬೀಳುತ್ತಿತ್ತು. ಕೊನೆಗೆ ಅದು ಕನ್ನಡ, ಮರಾಠಿ ಜಗಳಕ್ಕೆ ಕಾರಣವಾಗುತ್ತಿತ್ತು,

ಆದರೆ ಈಗ ಅಂತಹುದಕ್ಕೆ ಅವಕಾಶವೇ ಇರಲಿಲ್ಲ. ಎಂಇಎಸ್ ಪುಂಡರು ಬಾಲ ಬಿಚ್ಚುವ ಸ್ಥಿತಿಯಲ್ಲಿ ಇರಲಿಲ್ಲ. ಅವರು ತಮ್ಮನ್ನು ಸುಮ್ಮನೆ ಬಿಟ್ಟರೆ ಸಾಕು ಎನ್ನುವ ಹಾಗೆ ಪೊಲೀಸರು ಬಿಸಿ ಮುಟ್ಟಿಸಿದ್ದರು.

ಮೇಲಾಗಿ ಲಕ್ಷ ಲಕ್ಷ ಜನ ಸೇರಿದ್ದರೂ ಕೂಡ ಕೇವಲ‌ ಸಾವಿರಾರು ಜನ ಸೇರಿದ್ದ ಬೆಳಗಾವಿ ಪೊಲೀಸರು ಎಲ್ಲವನ್ನು ಸರಿಯಾಗಿ ನಿಭಾಯಿಸಿದರು. ಪೊಲೀಸ್ ಆಯುಕ್ತ ಸಿದ್ರಾಮಪ್ಪ ಅವರು ಪಾದರಸದಂತೆ‌ ಓಡಾಡಿದರು.

ಹೀಗಾಗಿ ಕನ್ನಡ ಮರಾಠಿ ಜಗಳಕ್ಕೆ ಪೂರ್ಣ ವಿರಾಮ ಹಾಕಲಾಗಿತ್ತು, ಇಲ್ಲಿ ಎಲ್ಲಕ್ಕಿಂತಲೂ ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ, ಸದಾ ಗಡಿ ವಿಷಯದ ಬಗ್ಗೆ ಕ್ಯಾತೆ ತೆಗೆಯುವ ಸ್ಥಳೀಯ ಎಂಇಎಸ್ ಕಿಡಿಗೇಡಿಗಳು ರಾಜ್ಯೋತ್ಸವದ ಜನಸಾಗರ ಕಂಡು ಬೆಚ್ಚಿ ಬಿದ್ದಿದ್ದರು

ಕಾಲಿಡಲು ಜಾಗವಿಲ್ಲ
ಈ ಬಾರಿ ಬೆಳಗಾವಿ ರಾಜ್ಯೋತ್ಸವದ ಸಂಭ್ರಮಕ್ಕೆ ಸುಮಾರು 5 ಲಕ್ಷಕ್ಕೂ ಅಧಿಕ ಮಂದಿ ಸಾಕ್ಷಿಯಾಗಿ ಹೊಸ ಇತಿಹಾಸ ನಿರ್ಮಿಸಿದರು.
ಸಾಮಾಜಿಕ ಜಾಲತಾಣದಲ್ಲಿ ರಾಜ್ಯೋತ್ಸವದ ಅದ್ದೂರಿ ಮೆರವಣಿಗೆ ದೃಶ್ಯಗಳು ಹರಿದಾಡುತ್ತಿವೆ, .
ಮಂಗಳವಾರ ರಾತ್ರಿಯಿಂದಲೇ ಆರಂಭವಾಗಿದ್ದ ರಾಜ್ಯೋತ್ಸವ ಬುಧವಾರ ರಾತ್ರಿ 10.30 ರ ವರೆಗೂ ನಡೆಯಿತು. ರಾಣಿ ಚನ್ನಮ್ಮ ವೃತ್ತದಲ್ಲಿ ಕಿಕ್ಕಿರಿದು ಸೇರಿದ್ದ ಕನ್ನಡ ಯುವ ಮನಸುಗಳು ಕನ್ನಡ ನಾಡು-ನುಡಿ, ಜಾನಪದ, ಡಿಜೆ ಹಾಡುಗಳಿಗೆ ಹುಚ್ಚೆದ್ದು ಕುಣಿದರು.

ಇಮ್ಮಡಿ ಪುಲಿಕೇಶಿ ಮಹಾರಾಜರು, ವೀರರಾಣಿ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಸಾಲುಮರದ ತಿಮ್ಮಕ್ಕ ಸೇರಿದಂತೆ ಮತ್ತಿತರ ರೂಪಕಗಳು ಗಮನ ಸೆಳೆದವು. ಮೆರವಣಿಗೆಯುದ್ದಕ್ಕೂ ಕನ್ನಡ ಬಾವುಟ, ಕನರ್ಾಟಕ ರತ್ನ ಡಾ. ಪುನೀತ್ ರಾಜಕುಮಾರ ಅವರ ಭಾವಚಿತ್ರ ಹಿಡಿದು ಜನರು ಸಂಭ್ರಮಿಸಿದರು.

ಅದ್ಭುತ ಅಲಂಕಾರ…!
ಈ ಬಾರಿ ಎಲ್ಲರ ಗಮನ ಸೆಳೆದಿದ್ದು ಚನ್ನಮ್ಮ ವೃತ್ತ ಸೇರಿದಂತೆ ಸುತ್ತ ಮುತ್ತಲೂ ಮಾಡಿದ ಅಲಂಕಾರ. ಅದನ್ನು ನೋಡಲು ಎರಡು ಕಣ್ಣು ಸಾಲದು ಎನ್ನುವಂತಿತ್ತು,

ಚನ್ನಮ್ಮ ವೃತ್ತ ಸೇರುವ ನಾಲ್ಕು ದಿಕ್ಕುಗಳಲ್ಲಿ ಮಾಡಿದ ಅಲಂಕಾರ ಜನಸೂರೆಗೊಂಡವು, ಇನ್ನು ಚನ್ನಮ್ಮ ವೃತ್ತದಿಂದ ಕಾಕತಿವೇಸ್ ಕಡೆಗೆ ಹೋಗುವ ದಾರಿ ಮಧ್ಯದಲ್ಲಿ ಕನ್ನಡ ಸಂಘಟನೆಗಳು ವೇದಿಕೆ ನಿಮರ್ಿಸಿ ಸಂಭ್ರಮಿಸುತ್ತಿರುವ ಪರಿ ಹೇಳತೀರದು, ಮೆರವಣಿಗೆಯಲ್ಲಿ ಸಾಗುವ ಪ್ರತಿಯೊಂದು ರೂಪಕದಲ್ಲಿದ್ದವರನ್ನು ಕರೆದು ಸನ್ಮಾನಿಸಿ ಪ್ರೋತ್ಸಾಹಿಸುವ ಕೆಲಸವೂ ನಡೆಯುತ್ತಿತ್ತು,

ಮೇಯರ್ ಬಂದರು…!
ಬೆಳಗಾವಿ ರಾಜ್ಯೋತ್ಸವ ಅಂದರೆ ಮೊದಲು ಎಲ್ಲರ ಚಿತ್ತ ಪಾಲಿಕೆಯತ್ತ ಹೋಗುತ್ತಿತ್ತು,

ಮರಾಠಾ ಮೇಯರ್ ಬರುತ್ತಾರೋ ಅಥವಾ ಇಲ್ಲವೋ ಎನ್ನುವುದು ಸೇರಿದಂತೆ ಭುವನೇಶ್ವರಿ ದೇವಿಗೆ ನಮಸ್ಕರಿಸುತ್ತಾರೋ ಎನ್ನುವ ಚರ್ಚೆ ಹೆಚ್ಚಿಗೆ ನಡೆಯುತ್ತಿತ್ತು,
ಆದರೆ ಬೆಳಗಾವಿ ಪಾಲಿಕೆಯಲ್ಲಿ ಬಿಜೆಪಿಯ ಮರಾಠಾ ಮೇಯರ್ ಮತ್ತು ಉಪ ಮೇಯರ್ ಸೇರಿದಂತೆ ಕೆಲವೇ ಕೆಲ ನಗರಸೇವಕರನ್ನು ಹೊರತುಪಡಿಸಿ ಉಳಿದವರೆಲ್ಲರ ಹಾಜರಾದರು..
ಇಲ್ಲಿ ಮೇಯರ್ ಬರದಿದ್ದರೆ ಅದನ್ನೇ ಒಂದು ದೊಡ್ಡ ವಿವಾದ ಮಾಡುವ ಯೋಜನೆಯನ್ನು ವಿರೋಧ ಪಕ್ಷಗಳು ಮಾಡಿಕೊಂಡಿದ್ದವು, ಅದು ಈಗ ಠುಸ್ ಆಯಿತು,

Leave a Reply

Your email address will not be published. Required fields are marked *

error: Content is protected !!