ಬೆಳಗಾವಿ.
ಬೈ;ಲಹೊಂಗಲದಲ್ಲಿ ರಾಜಾರೋಷವಾಗಿ ನಡೆಸುತ್ತಿದ್ದ ಜೂಜು ಅಡ್ಡೆ ಮೇಲೆ ದಾಳಿ ಮಾಡಿದ ಸಿಇಎನ್ ಪೊಲೀಸ್ ತಂಡವು 72 ಜನರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದೆ.

ಬೈಲಹೊಂಗಲ ಪಟ್ಟಣದ ರಿಕ್ರಿಯೇಶನ್ ಪಕ್ಕದಲ್ಲಿರುವ ಕೊಠಡಿಯಲ್ಲಿ ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಭಾನುವಾರ ರಾತ್ರಿ ಸಿಇಎನ್ ಇನ್ಸ್ಪೆಕ್ಟರ್ ಬಿ.ಆರ್.ಗಡ್ಡೇಕರ ನೇತೃತ್ವದ ತಂಡವು ದಾಳಿ ಮಾಡಿತ್ತು,

ಆರೋಪಿಗಳಿಂದ 2,20,190 ರೂ ನಗದು, 4 ಲಕ್ಷ 69 ಸಾವಿರ ರೂ ಮೌಲ್ಯದ 62 ಮೊಬೈಲ್ಗಳನ್ನು ಪೊಲೀಸರು ಈ ಸಂದರ್ಭದಲ್ಲಿ ಪೊಲಿಸರು ಜಪ್ತಿ ಮಾಡಿಕೊಂಡಿದ್ದಾರೆ.

ನಂತರ ಪೊಲೀಸರು ಎರಡು ಬಸ್ನಲ್ಲಿ ಜೂಜುಕೋರರನ್ನು ಬಂಧಿಸಿ ಬೆಳಗಾವಿಗೆ ಪೊಲೀಸರು ಕರೆ ತಂದರು, ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿಯಲ್ಲಿ 10 ಮಂದಿ ಸಿಇಎನ್ ಸಿಬ್ಬಂದಿ ಮತ್ತು ಅಧಿಕಾರಿಗಳು ಭಾಗಿಯಾಗಿದ್ದರು. 72 ಜನರನ್ನು ಬಂಧಿಸಿರುವ ಸಿಇಎನ್ ತಂಡದ ಕಾರ್ಯಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ