ಗಡಿನಾಡ ಬೆಳಗಾವಿಯಲ್ಲಿ ಬಾರ್ ರೆಸ್ಟೋರೆಂಟ್, ವೈನ್ ಶಾಪ್ ಗಳು ಹೇಳಿದಂತೆ ಅಬಕಾರಿ ಮತ್ತು ಪೊಲೀಸ್ ಇಲಾಖೆಯವರು ಕೇಳುತ್ತಾರೋ ಅಥವಾ ಇವರು ಹೇಳಿದಂತೆ ಅವರು ಕೇಳುತ್ತಾರೋ?
ಸಹಜವಾಗಿ ಇಂತಹುದೊಂದು ಪ್ರಶ್ನೆ ಬೆಳಗಾವಿಗರನ್ನು ಅಷ್ಟೇ ಅಲ್ಲ ರಾಜ್ಯದ ಜನರನ್ನು ಕಾಡುತ್ತಿದೆ.ಆದರೆ ಇದಕ್ಕೆಲ್ಲ ಸ್ಪಷ್ಟ ಉತ್ತರ ಕೊಡಬೇಕಾದವರು ಜಾಣ ಕಿವುಡತನ ತೋರಿದ್ದು ಪರಿಸ್ಥಿಗೆ ಹಿಡಿದ ಕೈಗನ್ನಡಿ.
ಬೆಳಗಾವಿಯ ವಾಸ್ತವತೆಯನ್ನು ಗಮನಿಸಿದರೆ, ಇಲ್ಲಿ ಮದ್ಯದ ಅಂಗಡಿಗಳು, ರೆಸ್ಟೋರೆಂಟ್ ಗಳು ಹೇಳಿದಂತೆ ಅದರ ಮೇಲೆ ನಿಯಂತ್ರಣ ಹೊಂದಿದ ಅಬಕಾರಿ ಮತ್ತು ಪೊಲೀಸ್ ಇಲಾಖೆಯವರು ತಮ್ಮ ಅಸ್ತಿತ ಕಳೆದುಕೊಂಡಂತೆ ವರ್ತಿಸುತ್ತಿದ್ದಾರೆ .
ಅಂದರೆ ಈ ಬಾರ್ ಗಳಿಗೆ ಹೇಳೋರು, ಕೇಳೋರು ಇಲ್ಲವೇ ಇಲ್ಲ. . ಅವುಗಳನ್ನು ಹದ್ದು ಬಸ್ತಿನಲ್ಲಿಡಬೇಕಾದವರೇ ಅವರ ಹದ್ದಿನೊಳಗೆ ಪ್ರವೇಶ ಮಾಡಿ ಪ್ರಶ್ನ. ಮಾಡದಿರುವುದು ಹಲವು ಅನುಮಾನಕ್ಕೆ ಕಾರಣ. .
.ಬೆಳಗಾವಿಯಲ್ಲಿ ಸಿಎಲ್ 2 ಇದ್ದರೆ ಅವುಗಳು ರಾತ್ರಿ 10.30 ಕ್ಕೆ ಮತ್ತು ಬಾರ್ ಮತ್ತು ರೆಸ್ಟೋರೆಂಟ್ ಇದ್ದರೆ ರಾತ್ತಿ 11 ಕ್ಕೆ ಬಂದ್ ಆಗಬೇಕು, ಇನ್ನುಳಿದ ದೊಡ್ಡ ದೊಡ್ಡ ಹೊಟೇಲುಗಳಲ್ಲಿರುವ ಬಾರ್ ಗಳು 11.30 ಕ್ಕೆ ಬಂದ್ ಆಗಲೇಬೇಕು,
ಇದು ಅಬಕಾರಿ ಇಲಾಖೆ ಹೊರಡಿಸಿದ ನಿಯಮ. ಇಲ್ಲಿ ಈ ನಿಯಮಗಳನ್ನು ಉಲ್ಲಂಘಿಸಿದವರ ಲೈಸನ್ಸ್ ರದ್ದುಮಾಡಬಹುದು. ಅಥವಾ ದೊಡ್ಡ ಮೊತ್ತದ ದಂಡವಿಧಿಸಬಹುದು.
ಆದರೆ ಇಲ್ಲಿ ವೈನ್ ಶಾಪಗಳಿಗೆ, ರೆಸ್ಟೋರೆಂಟ್ ಗಳಿಗೆ ದಂಡವೇನೊ ಹಾಕಲಾಗುತ್ತದೆ. ಆದರೆ ಆ ದಂಡ ಸರ್ಕಾರದ ಖಾತೆಗೆ ಜಮಾ ಆಗಲ್ಲ ಅಷ್ಟೇ.! ಇನ್ನುಳಿದಿದ್ದನ್ನು ನೀವೇ ಊಹಿಸಿಕೊಳ್ಳಬಹುದು.
ಸುಮ್ಮನೆ ಬೆಳಗಾವಿಯಲ್ಲಿ ಒಂದು ಸುತ್ತು ಹಾಕಿ ಬಂದರೆ ಅಬಕಾರಿ ಮತ್ತು ಪೊಲೀಸ್ ಆದೇಶವನ್ನು ಯಾವ ಪ್ರಮಾಣದಲ್ಲಿ ಗಾಳಿಗೆ ತೂರಲಾಗಿದೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ಬೆಳಗಾವಿಯಲ್ಲಿ ಒಂದು ಸುತ್ತು ಹಾಕಿ ಬಂದರೆ ಈ ನಿಯಮಗಳನ್ನು ಗಾಳಿಗೆ ತೂರಿ ಎಲ್ಲವೂ ನಡೆಯುತ್ತಿರುವುದು ಕಂಡು ಬರುತ್ತದೆ.
ಹಾಗೆ ನೋಡಿದರೆ, ಅಬಕಾರಿ ಇಲಾಖೆಗೆ ಅಬಕಾರಿ ಅಕ್ರಮ ತಡೆಗಟ್ಟುವುದನ್ನು ಬಿಟ್ಟು ಬೇರೊಂದು ಕೆಲವೇ ಇಲ್ಲ. ಯಾವ ಬಾರ್ ಗಳು ನಿಯಮ ಪಾಲನೆ ಮಾಡುತ್ತವೆ ಎನ್ನುವುದು ಸೇರಿದಂತೆ ಎಲ್ಲವನ್ನು ಆ ಇಲಾಖೆ ಗಮನಿಸುತ್ತಿರಬೇಕು, ಆದಕ್ಕಾಗಿಯೇ ಸಿಬ್ಬಂದಿ ಕೂಡ ಇದ್ದಾರೆ, ಆದರೆ ಅವರು ಯಾರು ಇದೆಲ್ಲವನ್ನು ಗಮನಿಸುತ್ತಲೇ ಇಲ್ಲ. ಬಹುತೇಕ ಕಡೆಗೆ ಒಳಒಪ್ಪಂದದ ಮೇಲೆಯೇ ಎಲ್ಲವೂ ನಡೆದುಕೊಂಡು ಹೋಗುತ್ತಿದೆ ಎನ್ನುವ ಹಾಗಾಗಿದೆ
ಎಲ್ಲಿದೆ ನಿಯಮ? ಬೆಳಗಾವಿಯ ಕೆಲವೊಂದು ಬಾರ್ ಗಳು ತಮ್ಮದೇ ನಿಯಮವನ್ನು ಹಾಕಿಕೊಂಡಿವೆ. ಅವುಗಳನ್ನು ಪ್ರಶ್ನಿಸಬೇಕಾದವರು ತಿಂಗಳಿಗೊಮ್ಮೆ ಅಲ್ಲಿಗೆ ಹೋಗಿ ಬರುತ್ತಾರೆ, ಆದರೆ ನಿಯಮ ಉಲ್ಲಂಘನೆ ಬಗ್ಗೆ ಮಾತೇ ಆಡಲ್ಲ ಎನ್ನುವ ಮಾತಿದೆ, ಹಾಗಿದ್ದರೆ ಅವರು ಯಾಕಾಗಿ ಹೋಗಿ ಬರುತ್ತಾರೆ ಎನ್ನುವ ಊಹೆ ತಮಗೆ ಬಿಟ್ಟಿದ್ದು,
Teenage rebellion? Hands of young female tear up the word Rules.
ಶಹಾಪುರ, ವಡಗಾವಿ, ಖಾಸಬಾಗ, ರಾಣಿ ಚನ್ನಮ್ಮನಗರ, ಸಾವಗಾಂವ ರಸ್ತೆ ಸೇರಿದಂತೆ ಕೆಲ ಪ್ರದೇಶಗಳಿಗೆ ಹೋದರೆ ಅಲ್ಲಿ ಅಕ್ರಮ ಬಾರ್ ಗಳ ಸಾಮ್ರಾಜ್ಯವೇ ತೆರೆದುಕೊಳ್ಳುತ್ತದೆ.
ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಹೊರಗೆ ಗೇಟ್ ಬಾಗಿಲು ಹಾಕಿ ಒಳಗೆ ಮದ್ಯ ಸೇವನೆಗೆ ಅನುಮತಿ ನೀಡುವ ಕೆಲಸ ಯಥೇಚ್ಚವಾಗಿ ನಡೆದಿದೆ. ಶಹಾಪುರ ಪ್ರದೇಶದ ಗೋವಾವೇಸ್ ವೃತ್ತದ ಬಳಿ ಹೋದರೂ ಕೂಡ ಖುಲ್ಲಂ ಖುಲ್ಲಾಗಿ ಅಕ್ರಮ ಬಾರ್ ಗಳು ಕಾಣಸಿಗುತ್ತವೆ.
ಇನ್ನು ಹಳೆ ಬೆಳಗಾವಿಯ ಬಿಎಸ್ ಯಡಿಯೂರಪ್ಪ ಮಾರ್ಗವು ಒಂದು ರೀತಿಯ ಗೋವಾ ಬೀಚ್ ತರಹ ಆಗಿ ಬಿಟ್ಟಿದೆ, ಅಲ್ಲಿ ರಸ್ತೆ ಪಕ್ಕಕ್ಕೆ ಕುಳಿತು ಆರಾಮವಾಗಿ ಮದ್ಯ ಸೇವನೆ ಮಾಡುತ್ತಿರುವುದು ಕಂಡು ಬರುತ್ತಿದೆ. ಈ ಹಿಂದೆ ಶಾಸಕ ಅಭಯ ಪಾಟೀಲರು ಅಲ್ಲಿನ ಪರಿಸ್ಥಿತಿ ಬಗ್ಗೆ ಪ್ರಸ್ತಾಪ ಮಾಡಿದ್ದರು, ಆಗ ಪಾಲಿಕೆ ಅಧಿಕಾರಿಗಳು ನೋಟೀಸ್ ಕೊಟ್ಟಂತೆ ಮಾಡಿ ಮೌನಕ್ಕೆ ಜಾರಿದರು,
ಬಾರ್ ಮುಂದೆಯೇ ಗಲಾಟೆ ಗಡಿನಾಡ ಬೆಳಗಾವಿಯಲ್ಲಿ ನಿತ್ಯ ಒಂದಿಲ್ಲೊಂದು ಅಹಿತಕರ ಘಟನೆಗಳು ಸವರ್ೇಸಾಮಾನ್ಯ ಎನ್ನುವಂತಾಗಿವೆ. ಗಮನಿಸಬೇಕಾದ ಸಂಗತಿ ಎಂದರೆ ಅವೆಲ್ಲವೂ ಬಹುತೇಕವಾಗಿ ಬಾರ್ ಗಳ ಮುಂದೆಯೇ ನಡೆದಿವೆ.
ಈ ಹಿಂದೆ ಬೆಳಗಾವಿಯ ಉದ್ಯಮಬಾಗ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಂಗವಿಕಲನ ಮೇಲೆ ಪೊಲೀಸರೇ ಹಲ್ಲೆ ನಡೆದಿದ್ದು ಬಾರ್ ಮುಂದೆಯೇ. ಕಳೆದ ಎರಡು ದಿನದ ಹಿಂದೆ ಕ್ಯಾಂಪ್ ಪೊಲೀಸ್ ಠಾಣೆ ವ್ಯಾಪ್ತಿಯ ಗಣೇಶಪುರದಲ್ಲಿ ಸೈನಿಕನ ಮೇಲೆ ಹಲ್ಲೆ ನಡೆದಿದ್ದು ಕೂಡ ಬಾರ್ ಮುಂದೆಯೇ ಎನ್ನುವುದು ಇಲ್ಲಿ ಉಲ್ಲೇಖನೀಯ.
ಇಲ್ಲಿ ತಪ್ಪು ಯಾರದ್ದು ಎನ್ನುವುದಕ್ಕಿಂತ ನಿಯಮ ಮೀರಿ ಅಂಗಡಿ ಬಾಗಿಲು ತೆರೆದವರ ಮೇಲೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುವ ಕೆಲಸವನ್ನು ಇಲಾಖೆ ಯವರು ಮಾಡಬೇಕಿದೆ.. ಆದರೆ ಈ ಎರಡೂ ಇಲಾಖೆಯವರು BAR and RESTORENT ಅಂದರೆ ಅಬಕಾರಿ, ಪೊಲೀಸರು ಬಾರಾಕೂನ್ ಮಾಫ್ ಎನ್ನುವಂತೆ ಇರುವುದು ಇದಕ್ಕೆಲ್ಲ ಕಾರಣ.