*ಒಳಮೀಸಲಾತಿಜಾರಿನಮಗೆಬದ್ದತೆಇದೆ : ಕಾಂಗ್ರೆಸ್ನಿಂದಪಾಠಕಲಿಯಬೇಕಿಲ್ಲ: ಬಸವರಾಜ ಬೊಮ್ಮಾಯಿ*

*ಕಾಂಗ್ರೆಸ್ ಶಾಸಕರು ಸಚಿವರ ನಡುವೆ ಸಮನ್ವಯತೆ ಇಲ್ಲ: ಬಸವರಾಜ ಬೊಮ್ಮಾಯಿ*

ಹಾವೇರಿ:

ಕಾಂಗ್ರೆಸ್ಮೊದಲಿನಿಂದಲೂ ಒಳ ಮೀಸಲಾತಿ ವಿರೋಧಿಯಾಗಿದೆ. ನಾವು ಸಂವಿಧಾನಕ್ಕೆ ತಿದ್ದುಪಡಿ ತಂದು ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೇವೆ. ನಮಗೆ ಬದ್ದತೆ ಇದೆ. ಕಾಂಗ್ರೆಸ್ ನವರಿಂದ ಪಾಠ ಕಲಿಯಬೇಕಿಲ್ಲ  ಒಳ ಮೀಸಲಾತಿ ವಿರೋಧಿಸುವ ಕಾಂಗ್ರೆಸ್ ನವರ  ಬಣ್ಣ ಬಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು

ಒಳ ಮೀಸಲಾತಿ ಅವಕಾಶ  ವಿಚಾರದಲ್ಲಿ ಕಾಂಗ್ರೆಸ್ಸದಾ ಗೊಂದಲ ಸೃಷ್ಟಿಸುತ್ತ ಬಂದಿದೆ‌. ಹಿಂದಿನ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿ ಕೈಬಿಟ್ಟರು, ಒಳಮೀಸಲಾತಿ ಪರ ಬಂದವರಿಗೆ ಜಾರಿ ಮಾಡುತ್ತೇವೆ ಎನ್ನುವುದು, ಅದನ್ನು ವಿರೋಧಿಸುವವರು ಬಂದಾಗ ಜಾರಿ ಮಾಡುವುದಿಲ್ಲ ಎನ್ನುವುದು ಎಲ್ಲವೂ ಬಹಿರಂಗವಾಗಿದೆ. ಅವರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದರು.

ಕೇಂದ್ರ ಸಚಿವ ಸಚಿವ ನಾರಾಯಣಸ್ವಾಮಿ ಅವರು ಪ್ರಸ್ತುತ ಒಳ ಮೀಸಲಾತಿಗೆ ಅವಕಾಶ ಇಲ್ಲ ಅಂತ ಹೇಳಿದ್ದಾರೆ. ನಾವೂ ಕೂಡ ಸಂವಿಧಾನದ ಆರ್ಟಿಕಲ್ 140 ಗೆ ಕ್ಲಸ್ 2 ಹಾಕಿ ತಿದ್ದುಪಡಿ ಮಾಡಿ ಒಳ ಮೀಸಲಾತಿ ಜಾರಿಗೊಳಿಸುವಂತೆ ರಾಜ್ಯ ಪಾಲರ ಮೂಲಕ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೇವೆ.

Leave a Reply

Your email address will not be published. Required fields are marked *

error: Content is protected !!