ಇದು ವೈದ್ಯರಿಲ್ಲದ ಆಸ್ಪತ್ರೆ..!

ಬೆಳಗಾವಿ ಪಾಲಿಕೆ ತುಂಬ
ಅಪರೇಶನ್' ಮಾತು..!

ಇಲ್ಲಿ ಆಪರೇಶ್ ಮಾಡಲು ವೈದ್ಯರೇ ಬರ್ತಿಲ್ಲ.

ಆದರೂ 9 ರೋಗಿಗಳು ಬೆಡ್ ಮೇಲೆ ಮಲಗಿದ್ದಾರೆ.

ಒಬ್ಬ ರೋಗಿಯಿಂದಲೇ ಉಳಿದವರ ಆರೋಗ್ಯದ ಮೇಲೆ ದುಷ್ಪರಿಣಾಮ..

ಈಗ MLA ABHAY PATIL ರು Dr Abhay patil ಆಗಬೇಕಿದೆ.

ಇವರು ರೋಗಿಗೆ ಹೈ ಡೋಸ್ ಗುಳಿಗೆ ಕೊಡದೇ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿದೆ.

ಇ ಬೆಳಗಾವಿ ವಿಶೇಷ

ಬೆಳಗಾವಿ. ಇಲ್ಲಿ ರೋಗಿಗಳು ಒಂದಿಷ್ಟು ಬೇಸರ ಮಾಡಿಕೊಂಡು ಬೆಡ್ ಮೇಲೆ ಮಲಗಿದ್ದಾರೆ. ಆದರೆ ಅವರನ್ನು ಯಾರೂ ಏನಾಗಿದೆ ಎಂದು ಕೇಳುತ್ತಿಲ್ಲ.

ಆಪರೇಶನ್’ ಮಾಡಬೇಕಾದ ವೈದ್ಯರು ರೋಗಿ ಆರೋಗ್ಯ ಇನ್ನಷ್ಟು ಕ್ಷೀಣಿಸಬಹುದು’ ಎಂದು ದೂರವೇ ನಿಂತು ನೋಡುತ್ತಿದ್ದಾರೆ,

ಹೀಗಾಗಿ ಎಲ್ಲೆಡೆ ಬರೀ ಆಪರೇಶನ್ ಮಾಡಲು ವೈದ್ಯರು ಮುಹೂರ್ತ ಯಾವಾಗ ಫಿಕ್ಸ ಮಾಡಬಹುದು ಎನ್ನುವ ಕುತೂಹಲ ಎಲ್ಲರಲ್ಲಿದೆ.

ರಾಜ್ಯ ಸರ್ಕಾರಕ್ಕೆ ಆಪರೇಶನ್ ಮಾಡುವಷ್ಟು ಪ್ರಭಲರಾಗಿರುವವರು ಬಿಜೆಪಿ ಹಿಡಿತದಲ್ಲಿರುವ ಬೆಳಗಾವಿ ಪಾಲಿಕೆಗೆ ಆಪರೇಶನ್ ಮಾಡುವ ಮನಸ್ಸು ಮಾಡುತ್ತಿಲ್ಲ. ಯಾಕೆಂದರೆ ಅದು ಅಷ್ಟು ಸಲೀಸು ಅಲ್ಲ

ಗಡಿನಾಡ ಬೆಳಗಾವಿ ಪಾಲಿಕೆಯಲ್ಲಿ ಕೇಳಿಬರುತ್ತಿರುವ ಆಪರೇಶನ್ ಮಾತು ಕೆಲವರ ನಿದ್ದೆಗೆಡಿಸಿದ್ದಂತೂ ಸುಳ್ಳಲ್ಲ. ಹಾಗೆ ನೋಡಿದರೆ ಕಳೆದ ಎರಡು ದಿನದ ಹಿಂದೆ ಪಾಲಿಕೆಯಲ್ಲಿ ಉತ್ತರ ಕ್ಷೇತ್ರದ 7 ಜನ ಮತ್ತು ದಕ್ಷಿಣ ಕ್ಷೇತ್ರದ ಇಬ್ಬರು ಕೂಡಿಕೊಂಡು ಒಂದೆಡೆ ತಮ್ಮಲ್ಲಿರುವ ಅಸಮಾಧಾನದ ಬಗ್ಗೆ ಮುಕ್ತ ಚರ್ಚೆ ನಡೆಸಿದ್ದಾರೆ, ಪ್ರತಿಯೊಂದಕ್ಕೂ ಅವರದ್ದೇ’ ಹಸ್ತಕ್ಷೇಪ ಆದರೆ ಹೇಗೆ ಎನ್ನುವ ಮಾತುಗಳು ಅಲ್ಲಿ ಸಹಜವಾಗಿ ಹೊರಹೊಮ್ಮಿವೆ,.

ಅಷ್ಟೇ ಅಲ್ಲ ಇದರ ಬಗ್ಗೆ ಮಾಜಿ ಶಾಸಕ ಅನಿಲ ಬೆನಕೆ ಮೂಲಕ ಅಭಯ ಪಾಟೀಲರ ಗಮನಕ್ಕೂ ಈ ಎಲ್ಲ ಅಸಮಾಧಾನದ ಮಾತುಗಳು ಹೋಗಿವೆ.
ಆದರೂ ಅವರು ಶಸ್ತ್ರ ಚಿಕಿತ್ಸೆಗೆ ಯಾಕೆ ಮುಂದಾಗುತ್ತಿಲ್ಲ ಎನ್ನುವ ಬಹುದೊಡ್ಡ ಪ್ರಶ್ನೆ ಆ ನಗರಸೇವಕರಲ್ಲಿ ಬಂದಿದೆ,


ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ನಗರ ಸೇವಕರಿಂದ ಕೇಳಿ ಬರುತ್ತಿರುವ ಅಸಮಾಧಾನದ ಮಾತುಗಳಿಗೆ ಕಾರಣಕರ್ತರಾದವರಿಗೆ ಶಾಸಕ ಅಭಯ ಪಾಟೀಲರು ಮಾತ್ರ ಶಸ್ತ್ರ ಚಿಕಿತ್ಸೆ ಮಾಡುವ ಯುಕ್ತಿ, ಶಕ್ತಿ ಹೊಂದಿದ್ದಾರೆ, ಆದರೆ ಅವರು ಕೇವಲ ಹೈ ಡೋಸ್ ಗುಳಿಗೆ ಕೊಟ್ಟು ಕಳಿಸುವ ಕೆಲಸ ಮಾಡಿದ್ದಾರೆ, ಹೀಗಾಗಿ ಅವರಿಗಂಟಿದ ಅ ರೋಗ ದೂರವಾಗುತ್ತಿಲ್ಲ ಎನ್ನಲಾಗುತ್ತಿದೆ,

ಅಸಮಾಧಾನ ಸಹಜ.
ರಾಜಕಾರಣದಲ್ಲಿ ಅಸಮಾಧಾನ ಸಹಜ. ಇಲ್ಲಿ ನಗರಸೇವಕರಿಂದ ಆಂತಹ ಮಾತುಗಳು ಬಂದಾಗ ತಕ್ಷಣ ಅದನ್ನು ಹೋಗಲಾಡಿಸುವ ಕೆಲಸ ಮಾಡಬೇಕು.
ಆದರೆ ಇಲ್ಲಿ ಏನಾಗಿದೆ ಎಂದರೆ, ಅಭಯ ಪಾಟೀಲರಿಗೆ ಬಿಜೆಪಿ ಹೈಕಮಾಂಡ ಛತ್ತೀಸಗಡ ಚುನಾವಣೆ ಉಸ್ತುವಾರಿ ಹೊರೆಸಿದೆ, ಹೀಗಾಗಿ ಅವರ ಗಮನ ಎಲ್ಲವೂ ಆ ನಿಟ್ಟಿನಲ್ಲಿ ಕೇಂದ್ರೀಕೃತವಾಗಿದೆ, ಹೀಗಾಗಿ ಕೆಲವರ ವರ್ತನೆಯಿಂದ ಅಸಮಾಧಾನ ಹೆಚ್ಚಾಗಲು ಕಾರಣವಾಯಿತು ಎನ್ನಬಹುದು,

ಈ ನಿಟ್ಡಿನಲ್ಲಿ ಅಭಯ ಪಾಟೀಲರು ಡಾಕ್ಟರ್ ಆಗಿ ಯಾವಾಗ ಶಸ್ತ್ರ ಚಿಕಿತ್ಸೆಗೆ ಮುಂದಾಗುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

Leave a Reply

Your email address will not be published. Required fields are marked *

error: Content is protected !!