ಚಿನ್ನಾ ಮತ್ತು ಮೇಘಾ ರೆಡ್ಡಿ ಸಂಧಾನ ಯಶಸ್ವಿ.ತೆಲಂಗಾಣದಲ್ಲಿಯೇ ಬೀಡು ಬಿಟ್ಟ ಚನ್ನರಾಜ. ಚಿನ್ನಾ ರೆಡ್ಡಿ ಮತ್ತು ನೇಘಾ ರೆಡ್ಡಿ ಮನವೊಲಿಕೆ ಯಶಸ್ವಿ
ತೆಲಂಗಾಣ-
ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವ ಡಾ, ಎಂ,ಸಿ, ಸುಧಾಕರ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಏಐಸಿಸಿ ನಿದೇರ್ಶನದ ಪ್ರಕಾರ ತೆಲಂಗಾಣ ಭಾಗದಲ್ಲಿ ಭರ್ಜರಿ ಮತಬೇಟೆ ಶುರುವಿಟ್ಟುಕೊಂಡಿದ್ದಾರೆ,

ಕಳೆದ ದಿ, 16 ರಂದು ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ ಸುಧಾಕರ್, ತೆಲಂಗಾಣದ ಭಾಗದ ಎಐಸಿಸಿ ಉಸ್ತುವಾರಿ ವನಪರ್ತಿಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಚಿನ್ನಾ ರೆಡ್ಡಿ ಮತ್ತು ಮೇಘಾ ರೆಡ್ಡಿ ಅವರೊಂದಿಗೆ ಪ್ರತ್ಯೇಕ ಸಭೆ ಕೂಡ ನಡೆಸಿ ಗೊಂದಲವನ್ನು ನಿವಾರಣೆ ಮಾಡುವ;ಲ್ಲಿ ಇವರಿಬ್ಬರು ಯಶಸ್ವಿಯಾದರು,

ಚುನಾವಣೆ ರಣತಂತ್ರದ ಬಗ್ಗೆ ಡಾ ಎಂಸಿ ಸುಧಾಕರ್ ಮೂಲಕ ಎಐಸಿಸಿ ಸಂದೇಶ ರವಾನಿಸಿತ್ತು. ಪಕ್ಷದ ಅಭ್ಯರ್ಥಿಯೊಂದಿಗೆ ಕೈಜೋಡಿಸಲು ಚಿನ್ನಾ ರೆಡ್ಡಿ ಮತ್ತು ಮೇಘಾ ರೆಡ್ಡಿಯವರನ್ನು ಮನವೊಲಿಸುವಲ್ಲಿ ಸಚಿವ ಸುಧಾಕರ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಯಶಸ್ವಿಯಾಗಿದರು.,

ಆರಂಭದಲ್ಲಿ ಚಿನ್ನಾ ರೆಡ್ಡಿ ಅವರು ಕೆಲವು ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಅದನ್ನು ಪರಿಹರಿಸಲಾಗುವುದು ಎಂದು ಈ ಸಂದರ್ಭದಲ್ಲಿ ಇಬ್ಬರೂ ನಾಯಕರು ಭರವಸೆ ನೀಡಿದರು