ಸತೀಶ್ ಶುಗರ್ಸ್ -ಬೆಳಗಾಂ ಶುಗರ್ಸ್:
ಪ್ರತಿ ಟನ್ ಕಬ್ಬಿಗೆ 3 ಸಾವಿರ ದರ ಘೋಷಣೆ
ಬೆಳಗಾವಿ: ಸತೀಶ್ ಶುಗರ್ಸ್ ಕಾರ್ಖಾನೆ ಹಾಗೂ ಬೆಳಗಾಂ ಶುಗರ್ಸ್ ಕಾರ್ಖಾನೆಗಳಿಗೆ ಪ್ರಸಕ್ತ 2023-24ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನಲ್ಲಿ ಪೂರೈಸುವ ಪ್ರತಿ ಟನ್ ಕಬ್ಬಿಗೆ 3 ಸಾವಿರ ರೂ ದರ ನೀಡಲಾಗುವುದು ಎಂದು ಸತೀಶ್ ಶುಗರ್ಸ್ ಹಾಗೂ ಬೆಳಗಾಂ ಶುಗರ್ಸ್ ಕಾರ್ಖಾನೆ ಚೇರಮನ್ ಮತ್ತು ಸಿ.ಎಫ್.ಓ ಪ್ರದೀಪಕುಮಾರ ಇಂಡಿ ಘೋಷಿಸಿದ್ದಾರೆ.
ಈ ಎರಡು ಕಾರ್ಖಾನೆಗಳಿಂದ ಪ್ರಸಕ್ತ ಹಂಗಾಮಿನಲ್ಲಿ ಪ್ರತಿ ಟನ್ ಕಬ್ಬಿಗೆ ಮೂರು ಸಾವಿರ ರೂ ದರ ಪಾವತಿಸಲು ಆಡಳಿತ ಮಂಡಳಿಗಳು ನಿರ್ಧರಿಸಿವೆ ಎಂದು ಪ್ರಕಟಿಸಿದರು.

ತಾಲೂಕಿನ ರೈತರ ಆರ್ಥಿಕ ಅಭ್ಯುದಯಕ್ಕೆ ಈ ಎರಡು ಕಾರ್ಖಾನೆಗಳು ಶ್ರಮಿಸುತ್ತಿವೆ. ಇಲ್ಲಿಯವರೆಗೆ ಆಡಳಿತ ಮಂಡಳಿ ಪ್ರತಿ ವರ್ಷ ಘೋಷಿಸಿದ ದರ ನೀಡುತ್ತ ಬಂದಿದ್ದು ರೈತರೂ ಸಹ ತಾವು ಬೆಳೆದ ಕಬ್ಬನ್ನು ಈ ಕಾರ್ಖಾನೆಗಳಿಗೆ ಪೂರೈಸಿದ್ದಾರೆ. ಪ್ರಸಕ್ತ ವರ್ಷ ಮಳೆ ಕೊರತೆಯಿಂದ ನೀರಿಕ್ಷಿಸಿದಷ್ಟು ಕಬ್ಬು ಬೆಳೆ ಬಂದಿಲ್ಲ. ಆದಾಗ್ಯೂ ಈ ವರ್ಷ ಸಹ ಎಂದಿನಂತೆ ನಿಗದಿತ ಪ್ರಮಾಣದಲ್ಲಿ ಕಬ್ಬು ನುರಿಸಿ ಸಕ್ಕರೆ ಉತ್ಪಾದಿಸುವ ಸಂಕಲ್ಪ ಆಡಳಿತ ಮಂಡಳಿಯವರದ್ದಾಗಿದೆ ಎಂದು ಅವರು ತಿಳಿಸಿದರು