ಪ್ರತಿಪಕ್ಷದ ನಾಯಕರಾಗಿ ಆಶೋಕ ಆಯ್ಕೆ

ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಆರ್​. ಅಶೋಕ್​ಗೆ ಪ್ರತಿಪಕ್ಷ ನಾಯಕನ ಸ್ಥಾನ ಒಲಿದಿದೆ. ಹೈಕಮಾಂಡ್ ಕಳುಹಿಸಿದ್ದ ವೀಕ್ಷಕರ ಸಮ್ಮುಖದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರತಿಪಕ್ಷ ನಾಯಕನಾಗಿ ಅಶೋಕ್​ ಅವರನ್ನು ಘೋಷಣೆ ಮಾಡಲಾಗಿದೆ.

ಏಳು ಬಾರಿ ಬಿಜೆಪಿ ಶಾಸಕರಾಗಿರುವ ಅಶೋಕ್ ಅವರು ಜುಲೈ 2012 ರಿಂದ ಮೇ 2013 ರವರೆಗೆ ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆಗಿದ್ದರು. ಅಲ್ಲದೆ, ಸಂಪುಟ ಸದಸ್ಯರಾಗಿ ಐವರು ಮುಖ್ಯಮಂತ್ರಿಗಳೊಂದಿಗೆ ಕೆಲಸ ಮಾಡುವ ಅವಕಾಶ ಅಶೋಕ್​ಗೆ ಸಿಕ್ಕಿತ್ತು. ಸಚಿವರಾಗಿ ಗೃಹ, ಕಂದಾಯ, ಪೌರಾಡಳಿತ, ಸಾರಿಗೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮುಂತಾದ ವಿವಿಧ ಖಾತೆಗಳನ್ನು ನಿರ್ವಹಿಸಿದ್ದಾರೆ.

.

Leave a Reply

Your email address will not be published. Required fields are marked *

error: Content is protected !!