ನಗರಸೇವಕರ ನೇತೃತ್ವದಲ್ಲಿ ಸಿಪಿಐಗೆ ಮನವಿ
ಭಾಗ್ಯನಗರಕ್ಕೆ ವಿಶೇಷ ರಕ್ಷಣೆ ಕೊಡಿ.
ಬೆಳಗಾವಿ.
ಮಹಾನಗರ ಪಾಲಿಕೆಯ ಬಿಜೆಪಿ ನಗರಸೇವಕ ಅಭಿಜಿತ್ ಜವಳಕರ ಮೇಲೆ ನಡೆದ ಹಲ್ಲೆಯಿಂದ ಭಯ ಭೀತಗೊಂಡಿರುವ 9 ನೇ ಕ್ರಾಸ್ ನ ಭಾಗ್ಯನಗರ ನಿವಾಸಿಗಳು ರಕ್ಷಣೆ ಕೋರಿ ಶನಿವಾರ ಪೊಲೀಸ್ ಅಧಿಕಾರಿಗೆ ಮನವಿ ಪತ್ರ ಅಪರ್ಿಸಿದರು.
ಪಾಲಿಕೆಯ ಅನುಮತಿ ಇಲ್ಲದೇ ಕಾನೂನು ಬಾಹಿರವಾಗಿ ಅಲ್ಲಿನ ನಿವಾಸಿ ರಮೇಶ ಪಾಟೀಲ ಎಂಬುವರು ತಮ್ಮ ಮನೆಯ ಮೇಲೆ ಮೊಬೈಲ್ ಟಾವರ್ ಕೂಡಿಸುತ್ತಿದ್ದರು.

ಈ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳ ದೂರಿನ ಹಿನ್ನೆಲೆಯಲ್ಲಿ ನಗರಸೇವಕ ಜವಳಕರ ಅವರು ಅದಕ್ಕೆ ತಡೆಯೊಡಿದ್ದರು.
ಈ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ರಮೇಶ ಪಾಟೀಲ ಮತ್ತು ಅವರ ಪುತ್ರನ ನೇತೃತ್ವದಲ್ಲಿ ಸುಮಾರು 10 ಜನರ ಗುಂಪು ನಗರಸೇವಕ ಅಭಿಜಿತ್ ಜವಳಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು.
ಘಟನೆಗೆ ಸಂಬಂಧಿಸಿದಂತೆ ನಗರಸೇವಕ ಅಭಿಜಿತ್ ಜವಳಕರ ಕೊಟ್ಟ ದೂರಿನ ಹಿನ್ನೆಲೆಯಲ್ಲಿ ಕೇವಲ ರಮೇಶ ಪಾಟೀಲರನ್ನು ಮಾತ್ರ ಬಂಧಿಸಲಾಗಿದೆ. ಇನ್ನೂ ಕೆಲವರು ಹೊರಗೆ ತಿರುಗಾಡುತ್ತಿದ್ದಾರೆ.

ಇದರಿಂದ ನಾವು ಭಯಭೀತರಾಗಿದ್ದೇವೆ ಎಂದು ನಿವಾಸಿಗಳು ಸಿಪಿಐ ಪೂಜಾರಿ ಅವರಿಗೆ ತಿಳಿಸಿದರು,
ನಮಗೆ ರಮೇಶ ಪಾಟೀಲ ಮತ್ತು ಆತನ ಗ್ಯಾಂಗ್ ನಿಂದ ಬೆದರಿಕೆ ಇದೆ. ಏಕೆಂದರೆ ನಾವೆಲ್ಲರೂ ಟವರ್ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿ ಆತನ ವಿರುದ್ಧ ದೂರು ನೀಡಿದ್ದೇವೆ. ಇದಲ್ಲದೆ ಹಗಲು ಮತ್ತು ರಾತ್ರಿ ಎನ್ನದೇ ಅವರು ಮೈಕ್ ಹಚ್ಚುತ್ತಿದ್ದಾರೆ. ಇದು ಇಡೀ ಕಾಲೋನಿಯ ಶಾಂತಿ ಮತ್ತು ಸಂತೋಷವನ್ನು ಹಾಳು ಮಾಡಿದೆ ಎಂದು ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ,
ಆದ್ದರಿಂದ ನಮ್ಮ ಪ್ರದೇಶಕ್ಕೆ ವಿಶೇಷ ರಕ್ಷಣೆಯನ್ನು ಒದಗಿಸಬೇಕು ಎಂದು ನಿವಾಸಿಗಳು ಮನವಿ ಮಾಡಿಕೊಂಡಿದ್ದಾರೆ, ಅಷ್ಟೇ ಅಲ್ಲ ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಅವರು ಕೋರಿದ್ದಾರೆ,
ಮಹಾನಗರ ಪಾಲಿಕೆಯ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ಜೋಶಿ, ನಗರಸೇವಕ ಗಿರೀಶ ಧೋಂಗಡಿ, ಶ್ರೀಶೈಲ್ ಕಾಂಬಳೆ ಸೇರಿದಂತೆ ಭಾಗ್ಯನಗರ ನಿವಾಸಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.