ಬಿಜೆಪಿ (ಅಭಿ) ‘ಜೀತ್’

ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ನಡೆದ ರಾಜಕೀಯ ಜೈಲಿನ ಚದುರಂಗದಾಟದಲ್ಲಿ ಬಿಜೆಪಿ ಗೆಲುವಿನ‌ ನಗೆ ಬೀರಿದೆ. ಸತ್ಯಮೇವ ಜಯತೇ!

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಬಿಜೆಪಿ ನಗರಸೇವಕರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡುವ ಕಸರತ್ತನ್ನು ವಿರೋಧಿಗಳು ನಡೆಸಿದ್ದು ಈ ಎಲ್ಲಕ್ಕೂ ಕಾರಣವಾಗಿದೆ

ವಾರ್ಡ ನಂಬರ 42 ರ‌ ನಗರಸೇವಕ ಅಭಿಜಿತ್ ಜವಳಕರ ಅವರನ್ನು “ಅಕ್ರಮ ಟವರ್” ಅಳವಡಿಕೆಗೆ ವಿರೋಧ ವ್ಯಕ್ತಪಡಿಸಿದ ನಡೆದ ಗಲಾಟೆ ಪ್ರಕರಣದಲ್ಲಿ ಟಿಳಕವಾಡಿ ಪೊಲೀಸರು ಅರೆಸ್ಟ್ ಮಾಡಿದ್ದರು.

ಇಲ್ಲಿ ಪೊಲೀಸರು ಉಳಿದ ಪ್ರಕರಣದಂತೆ ಇದರಲ್ಲೂ ನಡೆದುಕೊಂಡಿದ್ದರೆ ಯಾರೂ ಪೊಲೀಸರ ಕಾರ್ಯದ ಬಗ್ಗೆ ಅನುಮಾನ ಪಡುವ ಪ್ರಶ್ನೆಯೇ ಬರುತ್ತಿರಲಿಲ್ಲ. ಆದರೆ ಇಲ್ಲಿ ಪ್ರತಿಯೊಂದು ಹಂತದಲ್ಲೂ ಅನುಮಾನ ಬರುವ ಹಾಗೆ ನಡೆದುಕೊಂಡಿದ್ದನ್ನು ಗಮನಿಸಿದರೆ ಇದರ ಹಿಂದೆ ಕಾಣದ ಕೈ ಒತ್ತಡ ಇರಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಜೈಲಿನಿಂದ ಜಾಮೀನು ಮೇಲೆ ಬಿಡುಗಡೆಗೊಂಡ‌ ನಗರಸೇವಕ ಅಭಿಜಿತ್ ಜವಳಕರ ಅವರನ್ನು ಹೂವಿನ‌ಹಾರ ಹಾಕಿ ಸ್ವಾಗತಿಸಲಾಯಿತು.


ಮೂಲಗಳ ಪ್ರಕಾರ ಪೊಲೀಸರೂ ಕೂಡ ಈ ವುಷಯದಲ್ಲಿ ಒತ್ತಡದಲ್ಲಿಯೇ ಕೆಲಸ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿತ್ತು ಎನ್ನಲಾಗಿದೆ

ಗೊಂಬೆ ಆಡಿಸೋನು ಮ್ಯಾಲೆ ಕುಂತವ್ನೆ ಎನ್ನುವಂತೆ ಅವರು ಆಡಿಸಿದಂತೆ ಪೊಲೀಸರು ಆಟವಾಡತೊಡಗಿದರು ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ

ಇಲ್ಲಿ ಜವಳಕರ ಬಂಧನ ಪ್ರಕರಣದಲ್ಲಿ ಹಿನ್ನೆಲೆ ಮುನ್ನೆಲೆಯನ್ನು ಸೂಕ್ಷ್ಮವಾಗಿ‌ ಗಮನಿಸಿದರೆ ಹತ್ತು ಹಲವು ಮಾತುಗಳು ಕೇಳಿ ಬರುತ್ತಿವೆ.

ಗಣೇಶ ಮಂಡಳಕ್ಕೆ ದೇಣಿಗೆ ಕೊಡುವ ವಿಚಾರದಲ್ಲಿ ರಮೇಶ ಪಾಟೀಲ ಮತ್ತು ಅಭಿಜಿತ್ ಜವಳಕರ ನಡುವೆ ಸಣ್ಣದೊಂದು ಗ್ಯಾಪ ಆಗಿತ್ತು. ಆ ಗ್ಯಾಪಗೆ ಬಿಜೆಪಿಯ ಶಕ್ತಿ ಕೇಂದ್ರದ ಪ್ರಮುಖರೊಬ್ಬರು ಕಾರಣರು. ಆ ಎಲ್ಲವೂ ಕೂಡಿಕೊಂಡು‌ಈ ರೀತಿ ಸ್ಪೋಟವಾಯಿತು ಎನ್ನುವ ಮಾತುಗಳು ಕೇಳಿ ಬರುತ್ತಿವೆ

ದೂರು ನೀಡಿದ್ದ ಸಾರ್ವಜನಿಕರು

ಸಾರ್ವಜನಿಕರು ಲಿಖಿತವಾಗಿ ಅಕ್ರಮ ಟವರ್ ಬಗ್ಗೆ ನಗರಸೇವಕರಿಗೆ ದೂರು ನೀಡಿದ್ದರು. ಅದಕ್ಕೆ ಸ್ಪಂದನೆ ಮಾಡುವ ಕೆಲಸ ಪ್ರತಿಯೊಬ್ಬ ನಗರಸೇವಕರದ್ದು. ಆ ಕೆಲಸವನ್ನು ಜವಳಕರ ಇಲ್ಲಿ ಮಾಡಿದರು…

ಈ ಟವರ್ ಬಗ್ಗೆ ಜನ ಪೊಲೀಸ್ ಠಾಣೆಗೆ ದೂರು ನೀಡಿದಾಗ. ರಮೇಶ ಪಾಟೀಲರನ್ನು ಕರೆದು ಅದರ ಬಗ್ಗೆ ದಾಖಲೆ ಹಾಜರುಪಡಿಸುವಂತೆ ಸೂಚನೆ ನೀಡಿದ್ದರು..

ಇಲ್ಲಿ ರಮೇಶ ಪಾಟೀಲ ಪೊಲೀಸ್ ರನ್ನು ಭೆಟ್ಟಿ ಮಾಡಿ ವಾಪಸ್ಸು ಹೋಗುವ ದಾರಿ ಮಧ್ಯದಲ್ಲಿ ನಗರಸೇವಕ ಜವಳಕರ ಭೆಟ್ಟಿಯಾಗಿರಬಹುದು. ಆಗ ರಮೇಶ ಪಾಟೀಲ‌ ಮತ್ತು‌ ಜವಳಕರ ನಡುವೆ ವಾದ ವಿವಾದ ಆಗಿದೆ. ಮೂಲಗಳ ಪ್ರಕಾರ ಇಲ್ಲಿ ರಮೇಶ ಪಾಟೀಲರು ಕೆಟ್ಡ ಶಬ್ದಗಳಿಂದ ಜವಳಕರ ಅವರನ್ನು‌ನಿಂದಿಸಿದರಂತೆ. ಎನ್ಗ‌ನಲಾಗಿದೆ . ಮಾತಿಗೆ ಮಾತು ಬೆಳೆದಿದೆ. ಆಗ.ವಾಹನದ ಮೇಲೆ ಕುಳಿತಿದ್ದ ರಮೇಶ ಪಾಟೀಲರನ್ನು ತಳ್ಳಿದಾಗ ಅವರು ಕೆಳಗೆ ಬಿದ್ದರೆಂದು ಹೇಳಲಾಗಿದೆ. ಆಗ ಹತ್ತಾರು ಜನ ಬದು ಜವಳಕರ ಮೇಲೆ ಹಲ್ಲೆ ಮಾಡಿದರು ಎನ್ನುವ ಮಾತಿದೆ. ಈ ಸಂದರ್ಭದಲ್ಲಿ ‌ ಕೆಲವರು ರಾಡ್ ನಿಂದ ಹೊಡೆದರು ಎಂದೂ ಹೇಳಲಾಗುತ್ತಿದೆ

ಬಿಜೆಪಿ ಪ್ರತಿಭಟನೆ ಏಕಾಯಿತು?

ಈ ಎಲ್ಲ ಸುದ್ದಿ ತಿಳಿಯುತ್ತಿದ್ದಂತೆಯೇ ಇನ್ನುಳಿದ ಬಿಜೆಪಿ ನಗರಸೇವಕರು ಟಿಳಕವಾಡಿ ಪೊಲೀಸ್ ಠಾಣೆಯ‌ ಮುಂದೆ ಜಮಾಯಿಸಿದರು. ಆಗ ಹಲ್ಲೆ ಆರೋಪ ಹೊತ್ತ ರಮೇಶ ಪಾಟೀಲರು ಪೊಲೀಸ್ ಠಾಣೆಯಲ್ಲಿಯೇ ಇದ್ದರು. ಆದರೂ ಕೂಡ ಪೊಲೀಸರು ಅವರನ್ನು ಏನೂ ಪ್ರಶ್ನೆ ಮಾಡದೇ ಅವರಿಂದಲೇ ದೂರು ಪಡೆದುಕೊಳ್ಳುವ ಕೆಲಸ ಮಾಡುತ್ತಿದ್ದರು ಎನ್ನುವುದು ಬಿಜೆಪಿ‌ ಕೆಲ ನಗರಸೇವಕರ ಆರೋಪ. ಇದರಿಂದ ಆಕ್ರೋಶಿತಗೊಂಡ ಬಿಹೆಪಿ ನಗರಸೇವಕರು ಪ್ರತಿಭಟನೆ ನಡೆಸಬೇಕಾಯಿತು ಎಂದು ಹೇಳಲಾಗಿದೆ

ಗೌಪ್ಯತೆ ಏಕೆ?

ಗಮನಿಸಬೇಕಾದ ಸಂಗತಿ ಎಂದರೆ, ಪೊಲೀಸರು ಯಾರೇ ಯಾರದೇ ವಿರುದ್ಧ ದೂರು ಬಂದರೆ ಅದನ್ನು ಸ್ವೀಕರಿಸಲೇಬೇಕು. ಆದರೆ ದೂರಿನ ಸತ್ಯಾಸತ್ಯತೆ ಬಗ್ಗೆ ವಿಚಾರಣೆ ನಡೆಸಬೇಕು. ನಂತರ ಮುಂದಿನ ಕಾನೂನು ಕ್ರಮ ಅನಿವಾರ್ಯವಾಗಿ ಜರುಗಿಸಬೇಕು.

ಮೇಲಾಗಿ ಜವಳಕರ ಪ್ರಕರಣದಲ್ಲಿ ಪೊಲೀಸರು ಜವಳಕರ ಅವರನ್ನು ಬಂಧಿಸಿದ್ದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲೇ ಇಲ್ಲ. ಆದರೆ ಆಸ್ಪತ್ರೆ ಯಲ್ಲಿ ಚಿಕಿತ್ಸೆ .ಪಡೆಯುತ್ತಿದ್ದಾಗ ಅವರನ್ನು ವೈದ್ಯರ ಮೇಲೆ ಒತ್ತಡ ಹಾಕಿ ಡಿಸ್ಚಾರ್ಜ ಮಾಡಿಸಿದ್ದರ ಬಗ್ಗೆ ಆಕ್ಷೇಪದ ಮಾತು ಕೇಳಿ ಬರುತ್ತಿವೆ. ಅಷ್ಟೇ ಅಲ್ಲ ಇಲ್ಲಿ ಪೊಲೀಸರು ಹೇಳುವ ಪ್ರಕಾರ ಮಧ್ಯಾಹ್ನ 12 ಕ್ಕೆ ಆಸ್ಪತ್ರೆ ಯವರು‌ ಡಿಸ್ಚಾರ್ಜ ಮಾಡಿಸಿದ್ದರೆ ಅವರು ಸಂಜೆಯವರೆಗೆ ಅಲ್ಲಿಯೇ ಏಕೆ ಇರುತ್ತಿದ್ದರು? ಇದರ ಜೊತೆಗೆ ಬಿಲ್ಲ ಸಹ ಕಟ್ಟದೇ ಇದ್ದರೂ ಕೂಡ ಆಸ್ಪತ್ರೆ ಯವರು ಹೇಗೆ ಡಿಸ್ಚಾರ್ಜ ಕೊಟ್ಟರು ಎನ್ನುವುದು ಮುಂದೆ ನಡೆಯುವ ತನಿಖೆಯಿಂದ ಗೊತ್ತಾಗಬೇಕಿದೆ. ಇಷ್ಟೆಲ್ಲ ಘಟನೆ ನಡೆಯುವ ಮುನ್ನ ಆಸ್ಪತ್ರೆಗೆ ಹೋಗಿದ್ದ ಪೊಲೀಸರು ಜವಳಕರ ಅವರ ಪೋನ್ ನ್ನು ವಶಕ್ಕೆ ಪಡೆದುಕೊಂಡರು. ಅವರುಬತಮ್ಮ ಕುಟುಂಬದವರಿಗೆ ಕಾಲ್ ಮಾಡಲೂ ಸಹ ಅವಕಾಶ ಕೊಡಲಿಲ್ಲ ಎಂದು ಹೇಳಲಾಗಿದೆ.

ಜಾಮೀನು ಸಿಕ್ಕಿತು!!

ನ್ಯಾಯವಾದಿ ರವಿರಾಜ ಪಾಟೀಲರ ಸಮರ್ಥ ವಾದವನ್ನು ಗಮನಿಸಿ ಸೋಮವಾರ ಸಂಜೆ ಜವಳಕರ ಅವರಿಗೆ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿತು

ಹೀಗಾಗಿ ಸಂಜೆ ಹಿಙಡಲಗಾ ಜೈಲಿನ ಮುಂದೆ ಸೇರಿದ್ದ ಬಿಜೆಪಿ ನಗರಸೇವಕರು‌ ಮತ್ತು ಕಾರ್ಯಕರ್ತರು ಹೋಗಿ ಜವಳಕರ ಅವರನ್ನು ಸ್ವಾಗತಿಸಿದರು.

Leave a Reply

Your email address will not be published. Required fields are marked *

error: Content is protected !!