ತಪ್ಪಿನ ಮೇಲೆ ತಪ್ಪುಗಳು..!

2018 ರ ಘಟನೆ ಮರುಕಳಿಸುವ ಸಾಧ್ಯತೆ, ಆಗ ದೂರುದಾರರ ಸಹಿ ಇಲ್ಲದೆ ಅಪಹರಣ ಪ್ರಕರಣ‌ ದಾಖಲು ಮಾಡಿದ್ದ ಸಿಪಿಐ‌ ಅಮಾನತ್.

ಈಗ 2023 ರಲ್ಲಿ ಕಾನೂನು ಪ್ರಕಾರ ಡಿಸ್ಚಾರ್ಜ ಇಲ್ಲದೇ ನಗರಸೇವಕರನ್ನು ಬಂಧಿಸಿದ ಟಿಳಕವಾಡಿ ಸಿಪಿಐ. ಕ್ರಮಕ್ಕೆ ಪಟ್ಡು ಹಿಡಿದ ಬಿಜೆಪಿ ಶಾಸಕ ಅಭಯ ಪಾಟೀಲ.

ಪೊಲೀಸರ ಒತ್ತಾಯ ಪೂರ್ವಕ ಬಂಧನದ ದಾಖಲೆ ಇಟ್ಡುಕೊಂಡು ಕುಳಿತ ಬಿಜೆಪಿ.

ಅಭಯ ಪಾಟೀಲರ ಬಳಿ ಇರುವ ಮತ್ತೊಂದು‌ ಆ ದಾಖಲೆ ಯಾವುದು ಗೊತ್ತಾ?

ಬೆಳಗಾವಿ. ನಗರಸೇವಕ ಅಭಿಜಿತ್ ಜವಳಕರ ಬಂಧನ‌ ಪ್ರಕರಣದಲ್ಲಿ ಯಾರು ಏನೇ ಹೇಳಿದರೂ ಕೂಡ ಬಿಜೆಪಿ ಟಿಳಕವಾಡಿ ಪೊಲೀಸರ ಅತಿರೇಕದ ಬಗ್ಗೆ ಬಲವಾದ ದಾಖಲೆಗಳನ್ನು‌ ಮುಂದಿಟ್ಟುಕೊಙಡಿದೆ.

ಇಲ್ಲಿ ಟಿಳಕವಾಡಿ ಪೊಲೀಸರು ನಾವು ಎಲ್ಲವನ್ನು ನ್ಯಾಯ ಸಮ್ಮತವಾಗಿಯೇ ಮಾಡಿದ್ದೇವೆ ಎಂದು ಎಷ್ಟೇ ‌ಹೇಳಿಕೊಂಡರೂ ಕೂಡ ಶಾಸಕರ ಬಳಿಯಿರುವ ಆ ದಾಖಲೆಗಳ ಮುಂದೆ ಎಲ್ಲವೂ‌ ಝಿರೋ.!

ಅಂದರೆ ಬಿಜೆಪಿ‌ ಶಾಸಕರ ಮುಂದೆ‌ ಅಷ್ಟೊಂದು ಬಲವಾದ ಸಾಕ್ಷಿಗಳು ಇವೆ ಎನ್ನುವುದು ಸ್ಪಷ್ಟ. ಇಲ್ಲಿ ಟಿಳಕವಾಡಿ ಪೊಲೀಸರು ಬಹಳ ಒತ್ತಡಕ್ಕೊಳಗಾಗಿ ನಗರಸೇವಕರನ್ನು ಬಂಧಿಸುವ ಕೆಲಸ ಮಾಡಿದ್ದಾರೆ ಎನ್ನಲಾಗುತ್ತಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಈಗ ಅದರ ಬಗ್ಗೆ ಮಾನವ ಹಕ್ಕುಗಳ ಆಯೋಗ, ರಾಜ್ಯ ಪಾಲರು ಮತ್ತು ರಾಷ್ಟ್ರಪತಿಗೂ ಕೂಡ ಸಾಕ್ಷಿ ಸಮೇತ ದೂರು ನೀಡುವ ಚಿಂತನೆ ನಡೆಸಿದೆ.

ಇಲ್ಲಿ ಪೊಲೀಸರು ಜವಳಕರ ಅವರ‌ ಡಿಸ್ಚಾರ್ಜ‌ ಸಮರಿ ಕಥೆಯನ್ನೇ ಆಧಾರವಾಗಿಟ್ಡುಕೊಂಡುಬಹೊರಟರೆ ಒಂದಿಷ್ಡು ಅನುಮಾನಗಳು ಸಹಜವಾಗಿ ಬರುತ್ತವೆ.

ಪೊಲೀಸರ ಪ್ರಕಾರ ಆಸ್ಪತ್ರೆಯವರು 12 ಕ್ಕೆ ಜವಳಕರ ಅವರನ್ನು‌ಡಿಸ್ಚಾರ್ಜ ಮಾಡಿದ್ದರೆ. ಸಂಜೆ 6.30 ರವರೆಗೆ ಅಲ್ಲಿ ಅವರು ಕುಳಿತುಕೊಳ್ಳುವ ಪ್ರಶ್ನೆ ಎಲ್ಲಿಂದ ಬರುತ್ತದೆ. ಮೇಲಾಗಿ ಅಲ್ಲಿ ಕುಳಿತುಕೊಳ್ಳಲು ದೇವಸ್ಥಾನ ಏನಲ್ಲ. ಮೇಲಾಗಿ‌ ಡಿಸ್ಚಾರ್ಜ‌ ಸಮರಿಯನ್ನು ಆಸ್ಪತ್ರೆಗೆ ಯವರು ರೋಗಿಯ ಹತ್ತಿರ ಕೊಡಬೇಕು. ಶಗ ಅವರು ಬಿಲ್ ತುಂಬುತ್ತಾರೆ. ಆದರೆ‌ ಇಲ್ಲಿ ಬಿಲ್ ತುಂಬಿಸಿಕೊಳ್ಳದೇ ಜವಳಕರ ಅವರನ್ನು ಡಿಸ್ಚಾರ್ಜ ಮಾಡಿದರಾ? ಎನ್ನುವ ಪ್ರಶ್ನೆ ಸಹಜವಾಗಿ ಕೇಳಿ ಬರುತ್ತದೆ. ಇಲ್ಲಿಬಪೊಲೀಸರೇ ಒತ್ತಾಯ ಪೂರ್ವಕವಾಗಿ ಡಿಸ್ಚಾರ್ಜ ಮಾಡಿಸಿ ಬಿಲ್ ನಾವೇ ತುಂಬುವುದಾಗಿ ಹೇಳಿ ಜವಳಕರ ಅವರನ್ನು ಕರೆದುಕೊಂಡು ಹೋದರು ಎನ್ನಲಾಗಿದೆ. ಈ ಬಗ್ಗೆ ಏನೆಲ್ಲ ಸಾಕ್ಷಿಗಳು ಬೇಕೊ ಅವೆಲ್ಲವೂ‌ ಬಿಜೆಪಿ ಶಾಸಕರ ಬಳಿ ಇವೆ.

ಆದರೆ ಈಗ ತಪ್ಪು ಮಾಡಿದ‌ ಪೊಲೀಸ್ ಅಧಿಕಾರಿಗಳ ಹಿನ್ನೆಲೆ, ಮುನ್ನೆಲೆ ಕೆದಕುವ ಕೆಲಸಕ್ಕೆ ಬಿಜೆಪಿ‌ ಎಲ್ಲ ಸಿದ್ಧತೆ ಮಾಡಿಕೊಂಡಿದೆ.

Leave a Reply

Your email address will not be published. Required fields are marked *

error: Content is protected !!