ಮೂರು ಕ್ಷೇತ್ರದಲ್ಲಿ ಅರಳಿದ ಕಮಲ . ಪನವತಿ ಯಾರು ಎನ್ವುವುದು ದೇಶಕ್ಕೆ ಗೊತ್ತು .. ವಿಜಯೋತ್ಸವ ಆಚರಿಸಿದ ಶಾಸಕ ಅಭಯ ಪಾಟೀಲ. ಬಿಜೆಪಿ ನಗರಸೇವಕರು ಭಾಗಿ. ಛತ್ತೀಸಗಡ ಅನುಭವ ಬಿಚ್ಚಿಟ್ಟ ಅಭಯ. ಜೈ ಶ್ರೀರಾಮ jai Hindu ಘೋಷಣೆ
ಬೆಳಗಾವಿ .
ನಾಲ್ಕು ರಾಜ್ಯಗಳ ಪೈಕಿ ಇವತ್ತು ಮೂರು ಕಡೆಗೆ ಭಾರತೀಯ ಜನತಾಪಕ್ಷ ಜಯಭೇರಿ ಬಾರಿಸಿದ್ದನ್ನು ಗಮನಿಸಿದರೆ ದೇಶಕ್ಕೆ ‘ಪನವತಿ’ ಯಾರು ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಈ ಗೆಲುವು ಪ್ರಧಾನಿ ನರೇಂದ್ರ ಮೋದಿ ಗೆಲುವು. ಹೀಗಾಗಿ ಈ ಇಡೀ ದೇಶಕ್ಕೆ ಕಾಂಗ್ರೆಸ್ ಪನವತಿ. ಅಷ್ಟೇ ಅಲ್ಲ ನಮಗೆ ಯಾರು ಪನವತಿ ಎನ್ನುತ್ತಿದ್ದರೋ ಅವರೇ ಪನವತಿ ಎಂದು ಶಾಸಕ ಅಭಯ ಪಾಟೀಲ ಹೇಳಿದರು.

ಚುನಾವಣೆಗೂ ಮುನ್ನ ಕಾಂಗ್ರೆಸ್ ದವರು ಮಧ್ಯಪ್ರದೇಶ, ಛತ್ತೀಸಗಡ ಮತ್ತು ರಾಜಸ್ಥಾನ ದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಹೇಳಿದ್ದರು.

ಆಸರೆ ಈಗ ಎಲ್ಲೆಡೆ ಬಿಜೆಪಿ ಗೆದ್ದಿದೆ. ಹೀಗಾಗಿ ದೇಶದಲ್ಲಿ ಇನ್ನೂ ಮೀದಿ ವರ್ಚಸ್ಸು ಕಡಿಮೆಯಾಗಿಲ್ಲ ಎನ್ನುವುದಕ್ಕೆ ಇದೊಂದು ಉದಾಹರಣೆ ಎಂದು ಅಭಯ ಪಾಟೀಲ ಹೇಳಿದರು.

ಛತ್ತೀಸಗಡ ಅನುಭವ..
ಪಕ್ಷದ ಹೈಕಮಾಂಡ್ ಆದೇಶದ ಮೇರೆಗೆ ನಾನು ಛತ್ತೀಸಗಡ ಉಸ್ತುವಾರಿ ವಹಿಸಿಕೊಂಡಿದ್ದೆ. ಅಲ್ಲಿ ಸತತ ಒಂದು ತಿಂಗಳಿಗಿಂತ ಹೆಚ್ಚು ಕಾಲ ಓಡಾಟ ಮಾಡಿದ್ದೇನೆ. ಹೀಗಾಗಿ ಜನ ಈ ಬಾರಿ ಜನ ಬಿಜೆಪಿಗೆ ಆಶೀರ್ವಾದ ಮಾಡ್ತಾರೆ ಎನ್ನುವ ನಿರೀಕ್ಷೆ ಇತ್ತು. ಅದು ಹುಸಿಯಾಗಲಿಲ್ಲ ಎಂದರು.

