ಸದನದಲ್ಲೂ ಅಭಯ ಅಬ್ಬರ,
ಟಿಳಕವಾಡಿ ಸಿಪಿಐ ಅಮಾನತ್ ಗೆ ಪಟ್ಟು.
ಶಾಸಕ ಆಸೀಫ್ ಶೇಠಗೆ ಮಾತನಾಡಲು ಅವಕಾಶ ನೀಡದ ಸಭಾಧ್ಯಕ್ಷ ಖಾದರ್.
ಬೆಳಗಾವಿ. ವಿಧಾನ ಸಭೆಯಲ್ಲಿ ಶಾಸಕ ಅಭಯ ಪಾಟೀಲರು ಟಿಳಕವಾಡಿ ಪೊಲೀಸರ ವರ್ತನೆ ಬಗ್ಗೆ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಪೊಲೀಸ್ ಕ್ರಮವನ್ನು ಸಮರ್ಥಿಸಿಕೊಳ್ಳಲು ಶಾಸಕ ಆಸೀಫ್ ಶೇಠ ಎದ್ದು ನಿಂತರು.

ಆದರೆ ಇದನ್ಬು ಗಮನಿಸಿದ ಸಭಾಧ್ಯಕ್ಷ ಯು.ಟಿ ಖಾದರ್ ಅವರು, ನೀವು ಅದರ ಬಗ್ಗೆ ಸ್ಪಷ್ಟನೆ ಕೊಡುವ ಅಗತ್ಯವಿಲ್ಲ. ಗೃಹ ಮಂತ್ರಿಗಳು ಉತ್ತರ ಕೊಡ್ತಾರೆ.ನೀವು ಬೇಡ ಎಂದು ಹೇಳಿ ಅವರಿಗೆ ಮಾತಾಡಲು ಅವಕಾಶವನ್ನೇ ಕೊಡಲಿಲ್ಲ.

ಒಂದು ಹಂತದಲ್ಲಿ ಅಭಯ ಪಾಟೀಲರು ಮಾತನಾಡುತ್ತಿರುವಾಗ ಸಭಾಧ್ಯಕ್ಷರು ಬೇರೆ ಏನೋ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ಅಭಯ ಪಾಟೀಲರು, ಇದು ಗಂಭೀರವಾದ ವಿಷಯ. ಮೊದಲು ನಿಮ್ಮ ಮಾತು ಮುಗಿಸಿ ಎಂದುಹೇಳಿ ಕುಳಿತು ಬಿಟ್ಟರು. ಆದರೆ ಸಭಾಧ್ಯಕ್ಷರು ಅನುಮತಿನೀಡಿದಾಗ ಅಭಯ ಎದ್ದು ನಿಂತಾಗ ಮಾತು ಬೇಗ ಮುಗಿಸಿ ಎಂದು ಅವಸರ ಮಾಡಿದರು.

ಇದರಿಂದ ಕೆರಳಿದ ಅಭಯ ಪಾಟೀಲರು, ಬೆಳಗಾವಿಯಲ್ಲಿ ಅಧಿವೇಶನ ನಡೆಸುತ್ತಿದ್ದೀರಿ .ಆದರೆ ನಮಗೆ ಮಾತಾಡಲು ಅವಕಾಶ ಇಲ್ಲ ಎಂದ ಮೇಲೆ ಯಾಕೆ ಮಾಡ್ತೀರಿ. ಬಂದ್ ಮಾಡಕೊಂಡ ಹೋಗಿ ಎಂದು ಆಕ್ರೋಶಗೊಂಡರು. ಕೊನೆಗೆ ಶಾಸಕ ಅಭಯ ಪಾಟೀಲರಿಗೆ ಮಾತನಾಡಲು ಅವಕಾಶ ನೀಡಿದರು
ಅಭಯ ಮಾತಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬೆಂಬಲಿಸಿದರು.