ಸುವರ್ಣ ವಿಧಾನಸೌಧ.
ರಿಪಬ್ಲಿಕ್ ಬೆಳಗಾವಿ ಮಾಡಲು ಹೊರಟಿದ್ದಾರೆ: ಬಸನಗೌಡ ಯತ್ನಾಳ್,
ಬೆಳಗಾವಿಯಲ್ಲಿ ಗೂಂಡಾಗಿರಿ ಪ್ರಾರಂಭವಾಗಿದೆ. ಅಧಿವೇಶನದ ಸಂದರ್ಭದಲ್ಲಿ ಎರಡು ಘಟನೆ ಆಗಿದೆ. ಇದು ಬಿಹಾರವೋ? ಇಲ್ಲಿ ಕಾನೂನು ಸುವ್ಯವಸ್ಥೆ ಉಳಿದಿಲ್ಲ. ಗೃಹ ಸಚಿವರು ಯಾವ ಒತ್ತಡದಿಂದ ಕೆಲಸ ಮಾಡುತ್ತಿದ್ದಾರೆ?. ಬೆಳಗಾವಿಯನ್ನು ಇಬ್ಬರಿಗೆ ಬಿಟ್ಟಿದ್ದೇವೆ. ಅವರು ಏನು ಬೇಕಾದರೂ ಮಾಡಲಿ ಎಂದೇನಾದರೂ ಇದ್ಯಾ?. ಬಳಿಕ ಪೃಥ್ವಿ ಸಿಂಗ್ ಪ್ರಕರಣದಲ್ಲಿನ ಸರ್ಕಾರದ ಉತ್ತರದಿಂದ ಸಮಾಧಾನಗೊಳ್ಳದೇ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. . ಪೃಥ್ವಿ ಸಿಂಗ್ ಪ್ರಕರಣ ಮತ್ತು ಅಭಿಜಿತ್ ಜವಳಕರ್ ಪ್ರಕರಣ ಮೇಲೆ ಚೆರ್ಚೆ ನಡೆಸಿ ಧರಣಿ ನಡೆಸಲು ವಿಜಯೇಂದ್ರ ಮತ್ತು ಇತರ ಶಾಸಕರು ತೀರ್ಮಾನಿಸಿದ್ದರು.
ಅಷ್ಟರಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಏಕಾಏಕಿ ಸಭಾತ್ಯಾಗ ಎಂದು ಪ್ರಕಟಿಸಿ ಸಭೆಯಿಂದ ಹೊರ ನಡೆದರು.
ಈ ವೇಳೆ ಸಭೆಯಿಂದ ಹೊರಬಾರದ ಅಭಯ ಪಾಟೀಲ್ ಧರಣಿಗೆ ಮುಂದಾದರು. ಸಭಾತ್ಯಾಗವೋ ಅಥವಾ ಧರಣಿಯೋ ಎಂಬ ಗೊಂದಲ ಉಂಟಾಗಿ ಒಂದಿಷ್ಟು ಬಿಜೆಪಿ ಶಾಸಕರು ಸದನದಲ್ಲೇ ನಿಂತು ಮಾತುಕತೆ ನಡೆಸಿದರು. ಇತ್ತ ಆರ್.ಅಶೋಕ್ ನಿರ್ಧಾರದಿಂದ ಗಲಿಬಿಲಿಗೊಂಡು ಕೆಲವೊಂದಷ್ಟು ಶಾಸಕರು ಸಭೆಯಿಂದ ಹೊರನಡೆದರು.ವಿಜಯೇಂದ್ರ, ಎಸ್.ಆರ್.ವಿಶ್ವನಾಥ್, ಸತೀಶ್ ರೆಡ್ಡಿ, ಮಂಗಳೂರಿನ ಶಾಸಕರು ಧರಣಿಗೆ ಮುಂದಾದರು. ಸ್ವಲ್ಪ ಕಾಲ ಸದನದಲ್ಲೇ ಗಲಿಬಿಲಿಗೊಂಡು ಪರಸ್ಪರ ಮಾತುಕತೆ ನಡೆಸಿ ಬಳಿಕ ಕಲಾಪದಿಂದ ಹೊರನಡೆದರು. ಬಾವಿಗಿಳಿದು ಧರಣಿಗೆ ಮುಂದಾಗಿದ್ದ ಅಭಯ್ ಪಾಟೀಲರನ್ನು ಇತರೆ ಶಾಸಕರು ಕರೆತಂದರು.
ಬಳಿಕ ಸಭಾತ್ಯಾಗ-ಧರಣಿ ಗೊಂದಲದಿಂದ ಸಿಟ್ಟಾದ ಎಸ್.ಆರ್.ವಿಶ್ವನಾಥ್, ಅಭಯ ಪಾಟೀಲ್ ಪ್ರತಿಪಕ್ಷ ನಾಯಕನ ಕೊಠಡಿಗೆ ತೆರಳಿದರು. ಆರ್.ಅಶೋಕ್, ವಿಜಯೇಂದ್ರ ಮತ್ತು ಯತ್ನಾಳ್ ಅಸಮಾಧಾನಿತರನ್ನು ಸಮಾಧಾನಪಡಿಸಿದರು.