ಒಗ್ಗಟ್ಟಿನ ಸಂದೇಶ ಕೊಟ್ಟ ವಿಜಯೇಂದ್ರ.

ಬೆಳಗಾವಿ. ಮಹಾನಗರ ಪಾಲಿಕೆಯ ಬಿಜೆಪಿ ನಗರಸೇವಕರ ಸಮ್ಮುಖದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.

ಶುಕ್ರವಾರ ಬೆಳಿಗ್ಗೆ ಶಾಸಕ ಅಭಯ ಪಾಟೀಲರ ಮನೆಯಲ್ಲಿ ರಾಜ್ಯಾಧ್ಯಕ್ಷರ ಜತೆ ಮಹತ್ವದ ಸಭೆ ನಡೆಯಲಿದೆ ಎಂದು e belagavi ಡಾಟ್ ಕಾಮ್ ವರದಿ ಮಾಡಿತ್ತು.

ನಿರೀಕ್ಷೆಯಂತೆ ವಿಜಯೇಂದ್ರ ಅವರು ಶಾಸಕರ ಮನೆಗೆ ಆಗಮಿಸಿದಾಗ ಅವರನ್ನು ಸ್ವಾಗತಿಸಲಾಯಿತು.. ನಂತರ ಕೆಲ ಹೊತ್ತು ಶಾಸಕರು ಮತ್ತು ಪ್ರಮುಖರೊಂದಿಗೆ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಅವರು ಮಾತುಕತೆ ನಡೆಸಿದರು.

ಆಭಯ ಪಾಟೀಲರು ಛತ್ತೀಸಗಡ ಚುನಾವಣೆಯ ಅನುಭವವನ್ನು ಕೆಲ ಹೊತ್ತು ವಿವರಿಸಿದರು. ನಂತರ ಹಾಜರಿದ್ದ ನಗರಸೇವಕರಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯಾವ ರೀತಿ ಸಂಘಟನಾತ್ಮಕವಾಗಿ ಕೆಲಸ ಮಾಡಬೇಕು ಎನ್ನುವ ಸಲಹೆ ನೀಡಿದರು ಎಂದು ಗೊತ್ತಾಗಿದೆ.

ಈ ಸಂದರ್ಭದಲ್ಲಿ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರು, ನಗರಸೇವಕರು, ಕಾರ್ಯಕರ್ತರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!