ಬೆಳಗಾವಿ, ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ನಡೆದ ಮಹಿಳೆಯ ವಿವಸ್ತ್ರ ಪ್ರಕರಣವಬ್ನು ಬಿಜೆಪಿ ಹೈಕಮಾಂಡ ಗಂಭೀರವಾಗಿ ಪರಿಗಣಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಈ ಹಿನ್ನೆಲೆಯಲ್ಲಿ ಬಿಜೆಪಿ ಮಹಿಳಾ ಸಂಸದರ ನಿಯೋಗ ನಾಳೆಯೇ ಭೇಟಿ ನೀಡಲಿದೆ.ಐವರು ಸಂಸದರು ದೆಹಲಿಯಿಂದ ಆಗಮಿಸಲಿದ್ದಾರೆ ಅಪರಾಜಿತ್ ಸಾರಂಗಿ ಸುನಿತಾ ದುಗ್ಗಲ್ ರಂಜಿತಾ ಕೂಲಿ ರಾಕೆಟ್ ಚಟರ್ಜಿ ಹಾಗೂ ಆಶಾಲಾಕಡ ಬೆಳಗಾವಿಗೆ ಆಗಮಿಸಲಿದ್ದಾರೆ ಬೆಳಗಾವಿಯಲ್ಲಿ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳಲಿದ್ದಾರೆ ಎಂದರು.

ಬೆಳಗಾವಿ ಜಿಲ್ಲೆಯ ವಂಟಮೂರಿಯಲ್ಲಿ ನಡೆದ ಘಟನೆ ಸಾಕಷ್ಟು ಚರ್ಚೆಯಾಗಿದೆ. ಮಹಿಳೆಯನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ.ಅಧಿವೇಶನ ನಡೆಯುವ ಸಂದರ್ಭದಲ್ಲಿ ಈ ಘಟನೆ ಜರುಗಿದೆ.ನಾನು ಕೂಡ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿ ಬಂದಿದ್ದೇನೆ ಎಂದರು.

.ನಿನ್ನೆ ಹೈಕೋರ್ಟ್ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಚಾಟಿ ಬೀಸಿದೆ. ಅಂತಹ ಘಟನೆ ನಡೆಯಲು ಸರ್ಕಾರ ಯಾಕೆ ಅವಕಾಶ ಕೊಟ್ಟಿತು ಪೊಲೀಸ್ ಗಷ್ಟು ಯಾಕೆ ಇರಲಿಲ್ಲ ಅಂತ ಹೈಕೋರ್ಟ್ ಪ್ರಶ್ನಿಸಿದೆ ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ ಅಂತ ಪ್ರಶ್ನೆ ಮಾಡಿದೆ ಎಂದು ಹೇಳಿದರು.
ಬೆಳಗಾವಿ ತಾಲೂಕಿನ ವಂಟಮೂರು ಗ್ರಾಮಕ್ಕೆ ಬಿಜೆಪಿ ಮಹಿಳಾ ಆಯೋಗ ಭೇಟಿ ನೀಡಲಿದೆ. ಹೈಕಮಾಂಡ್ ಸೂಚನೆ ಮೇರೆಗೆ ನಾವ್ ಪ್ರತಿಭಟನೆ ಮಾಡುತ್ತಿಲ್ಲ ಮಹಿಳೆ ವಿವಸ್ತ್ರಗೊಳಿಸಿದ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಕಾರ್ಕಳ ಶಾಸಕ ಸುನಿಲ್ ಕುಮಾರ್ ಕೂಡ ಈ ಘಟನೆ ಕುರಿತಂತೆ ಚರ್ಚೆ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದಾಗ ಕಾನೂನು ಸುವ್ಯವಸ್ಥೆ ಹಲೆಗೆಡುತ್ತಿದೆ ಪೊಲೀಸರ ಬಗ್ಗೆ ಯಾರಿಗೂ ಭಯ ಇಲ್ಲದಂತಾಗಿದೆ. ಜವಾಬ್ದಾರಿಯುತ ಸಚಿವರ ತವರು ಕ್ಷೇತ್ರದಲ್ಲಿ ಘಟನೆ ನಡೆದಿದೆ ಇದನ್ನು ನಾವು ರಾಜಕೀಯವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಬಿ ವೈ ವಿಜಯೇಂದ್ರ ಸ್ಪಷ್ಟಪಡಿಸಿದರು. ಮಹಿಳೆ ವ್ಯವಸ್ಥೆ ಗೊಳಿಸಿದ ಘಟನೆ ಖಂಡಿಸಿ ಪ್ರತಿಭಟನೆ ಮಾಡುತ್ತೇವೆ.ನಾಳೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಯನ್ನು ನಡೆಸುತ್ತೇವೆ ಎಂದು ಹೇಳಿದರು.