SportsTechಕೆನಡಾದಲ್ಲಿ ಬೆಳಗಾವಿ ಸಿಪಿಐ ಸಾಧನೆ Ebelagavi@20232 years ago1 year ago01 mins 1:54ಗಂಟೆಯಲ್ಲಿ 21ಕೀಮಿ ಮ್ಯಾರಾಥಾನ್ ಗಿಟ್ಟಿಸಿದ ಇನ್ಸಪೆಕ್ಟರ್ ನಿರಂಜನ ಪಾಟೀಲ*ಬೆಳಗಾವಿ/ವಿನಿಪೆಗ್:ಆಧುನಿಕ ಜಗತ್ತಿನ ಪೊಲೀಸ್ ವ್ಯವಸ್ಥೆಯನ್ನು ಕ್ರೀಡಾಕೂಟದ ಮೂಲಕ ಒಟ್ಟುಗೂಡಿಸುವ ಸದುದ್ದೇಶದಿಂದ (ವರ್ಲ್ಡ್ ಪೊಲೀಸ್ ಆ್ಯಂಡ್ ಫೈರ್ ಗೇಮ್ಸ್) ಕೆನಡಾದ ವಿನಿಪೆಗ್ ನಗರದಲ್ಲಿ ನಡೆದಿದೆ.45ರ ವಯೋಮಿತಿಯ ಮ್ಯಾರಾಥಾನ್ ಓಟದಲ್ಲಿ 21ಕಿಮೀ ಓಡುವ ಮೂಲಕ ಭಾರತದ ಪರವಾಗಿ ಬೆಳಗಾವಿಯ ಲೋಕಾಯುಕ್ತ ಸಿಪಿಐ ನಿರಂಜನ ಪಾಟೀಲ ಯಶಸ್ವಿಯಾಗಿದ್ದಾರೆ.ಪ್ರತಿ ಎರಡು ವರ್ಷಕೊಮ್ಮೆ ಜರುಗುವ ಈ ಕ್ರೀಡಾಕೂಟ ಈ ಭಾರಿ ವಿನಿಪೆಗ್ ನಲ್ಲಿ ಜುಲೈ 28 ರಿಂದ ಆಗಸ್ಟ್ 6ರ ವರೆಗೆ ನಡೆಯುತ್ತಿದೆ. ಈ ಕ್ರೀಡಾಕೂಟದಲ್ಲಿ ಭಾರತ ದೇಶದ ಪರವಾಗಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ ಒಟ್ಟು 40 ಕ್ರೀಡಾಪಟುಗಳ ಪೈಕಿ , ಕರ್ನಾಟಕದಿಂದ ಮಾಜಿ ಡಿಜಿಪಿ ಕೃಷ್ಣಮಾರ್ತಿ,ಮಾಜಿ ಎಡಿಜಿಪಿ ಬಿಎನ್ ಎಸ್ ರೆಡ್ಡಿ, ಟೆನ್ನಿಸನಲ್ಲಿ ಲೋಕಾಯುಕ್ತ ಡಿಎಸ್ಪಿ ಸತೀಶ, ಹಾಪ್ ಮ್ಯಾರಾಥಾನನ 21 ಕಿ.ಮೀ ಓಟದಲ್ಲಿ ನಿರಂಜನ ಪಾಟೀಲ ಭಾಗವಹಿಸಿದ್ದರು.ಮ್ಯಾರಥಾನ್ ಓಟವನ್ನು1 ಗಂಟೆ 54 ನಿಮಿಷದಲ್ಲಿ ಪೂರ್ಣಗೊಳಿಸಿ ನಿರಂಜನ ಪಾಟೀಲ ಹೆಮ್ಮೆ ತಂದಿದ್ದಾರೆ.ಕೆನಡಾದ ಭಾರಿ ಚಳಿಯ ವಾತಾವರಣಕ್ಕೆ ಹೊಂದಿಕೊಂಡು ನಮ್ಮವರು ಓಡುವುದು ಸ್ವಲ್ಪ ಕಷ್ಟವೇ ಸರಿ. 14 ಕೀಮಿ ಓಡಿದ ಬಳಿಕ ಕಾಲಿನ ಸ್ನಾಯು ಸೆಳೆತ ಉಂಟಾದರೂ ಲೆಕ್ಕಿಸದೇ ಎಡೆಬಿಡದ ಓಟದ ಛಾತಿ ಮೂಲಕ 21ಕಿಮೀ ಓಟವನ್ನು ಪೂರ್ಣಗಳಿಸಿದ್ದಾರೆ ಇನ್ಸಪೆಕ್ಟರ್ ನಿರಂಜನ.ಜಾಗತಿಕ ಪೊಲೀಸ್ ಕ್ರೀಡಾಕೂಟ ವೇದಿಕೆಯಲ್ಲಿ ನನ್ನನ್ನು & ನನ್ನ ಭಾರತವನ್ನು ಪ್ರತಿನಿಧಿಸಿದ ಸಾರ್ಥಕತೆ ಮೂಡಿದೆ ಎಂದು ನಿರಂಜನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಅಂಗವಿಕಲನ ಮೇಲೆ Post navigation Previous: ಖಾಕಿ ದೌರ್ಜನ್ಯ ACTION ಗೆ ನಾಳೆ ಬಾ..!Next: ನಿಮಗೆ ಅನುಭವ ಕಡಿಮೆ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.
ವಿಶ್ವಪೋಟೊಗ್ರಾಫಿ ದಿನದ ವಿಶೇಷಾರ್ಥವಾಗಿ ನಾಡಿನ ಹಿರಿಯ ಛಾಯಾಗ್ರಾಹಕ ಪಿ. ಕೆ. ಬಡಿಗೇರ ಅವರ ಕ್ಯಾಮೆರಾ ಒಡನಾಟದ ಪರಿಚಯಾತ್ಮಕ ಲೇಖನ. ebelagavi1 year ago1 year ago 0