ಲೋಕ ಅಖಾಡಾ.. ಚಿಂದಿ ಚಿತ್ರಾನ್ನ..

ಬೆಳಗಾವಿ. ಲೋಕಸಭೆ ಚುನಾವಣೆಗೆ ಇನ್ನು ಗಾವುದ ದೂರ ಇರುವಾಗಲೇ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಬಹುದೊಡ್ಡ ಗೊಂದಲ ಸೃಷ್ಟಿಯಾಗತೊಡಗಿದೆ.ಆದರೆ

ಈ ಎಲ್ಲ ಗೊಂದಲದ ನಡುವೆ ನಾಡದ್ರೋಹಿ ಎಙಿಎಸ್ ನವರ ಮಾತು ಕೇಳಿ ಮಹಾರಾಷ್ಟ್ರ ಸರ್ಕಾರ ಗಡಿ ಭಾಗದ ಮರಾಠಿ ಭಾಷಿಕರ ಪರ ಎನ್ನುವ. ತೋರಿಸುವ ನಾಟಕ ನಡೆಸಿದೆ.ಇವತ್ತು

ಅತ್ತ ಮಹಾರಾಷ್ಟ್ರ ದವರೂ ಸಹ ಮರಾಠಿ‌ ಭಾಷಿಕರನ್ನು ಓಲೈಸತೊಡಗಿದ್ದಾರೆ. ಇತ್ತ ಗಡಿನಾಡ ಬೆಳಗಾವಿಯಲ್ಲಿಯೂ ಕೂಡ ಬಿಜೆಪಿ ಮತ್ತು ಕಾಂಗ್ರೆಸ್ ನವರು ಇನ್ನುಳಿದ. ಸಮಾಜದವರನ್ನು ಕಡೆಗಣಿಸಿ ಮರಾಢಿಗರ ಓಲೈಕೆಗೆ ಮುಂದಾಗಿದ್ದಾರೆ. ಇದು ಕನ್ನಡ ಭಾಷಿಕರನ್ನು ಅಷ್ಟೆ ಅಲ್ಲ ಇನ್ನುಳಿದ ಸಮಾಜದವರ ಅಸಮಾಧಾನಕ್ಕೆ ಕಾರಣವಾಗಿದೆ.

ಬೆಳಗಾವಿ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಯಾರು ಎನ್ನುವುದು ಅಂತಿಮವಾಗಿಲ್ಲ. ಎಲ್ಲರೂ ನಾನೇ , ನನ್ನ ಬಿಟ್ಟು ಮತ್ಯಾರಿದ್ದಾರೆ ಎನ್ನುವ ಲೆಕ್ಕಾಚಾರದಲ್ಲಿ ಹೊರಟಿದ್ದಾರೆ. ಆದರೆ ಸಧ್ಯ ನಡೆಯುತ್ತಿರುವ ಲೆಕ್ಕಾಚಾರಗಳೇ ಬೇರೆ ಬೇರೆಯಾಗಿವೆ‌

ಸಧ್ಯ ಹೇಗಿದೆ ಎಂದರೆ, ಬಹುತೇಕ ಪ್ರಭಲ ಆಕಾಂಕ್ಷಿಗಳು ಕೆಲ ಸಮುದಾಯದ ಭರವಸೆ ಮೇಲೆ ಕಣಕ್ಕಿಳಿಯುವ ಸಿದ್ಧತೆಯಲ್ಲಿ ಇದ್ದಾರೆ.

ಆದರೆ ಅಂತಹ ಸಮುದಾಯಗಳಿಗೆ ಕಾಂಗ್ರೆಸ್ ಮತ್ತು ಬಿಜೆಪಿಯವರು ಕಡೆಗಣನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ನಡೆಯುತ್ತಿರುವ ಲೆಕ್ಕಾಚಾರವನ್ಬು ಗಮನಿಸಿದರೆ ಫಲಿತಾಂಶ ಹೀಗೆ ಆಗುತ್ತದೆ ಎಂದು ಹೇಳುವುದು ಕಷ್ಟವೇ ಸರಿ.

ಸಧ್ಯ ಬಂದಿರುವ ಮಾಹಿತಿ ಪ್ರಕಾರ ಈ ಬಾರಿ ಜಾತಿ ಲೆಕ್ಕಾಚಾರ ಗಮನದಲ್ಲಿರಿಸಿಕೊಂಡು ಟುಕೇಟ್ ಯಾರಿಗೆ ಕೊಟ್ಟರೆ ಉತ್ತಮ ಎನ್ಬುವ ಚಿಂತನೆ ನಡೆದಿದೆ

ಮತ್ತೊಂದು ಕಡೆಗೆ ಎರಡೂ ಪಕ್ಷದವರ ಅತೀಯಾದ ಕೆಲವರ ಓಲೈಕೆ ಇನ್ನುಳಿದ ಸಮಾಜದವರ ಅಸಮಾಧಾನಕ್ಕೆ ಕಾರಣವಾಗುತ್ತಿದೆ.

ಮತ್ತೊಂದು ಸಂಗತಿ ಎಂದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ‌ ಮರಾಠರಿಗೆ ತಪ್ಪಿಸಿ ಲಿಂಗಾಯತ ಸಮುದಾಯಕ್ಕೆ ಮಣೆ ಹಾಕಲಾಗಿತ್ತು. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಮರಾಠರಿಗೆ ಟಿಕೇಟ್ ಕೊಡಬೇಕು ಎನ್ನುವ ಬೇಡಿಕೆ ಹೆಚ್ಚಾಗತೊಡಗಿದೆ. ಆದರೆ ಇಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ಮಂಗಲಾ ಅಂಗಡಿಯವರ ಬದಲಾಗಿ ಲಿಂಗಾಯತರಿಗೆ ಟಿಕೇಟ ಕೊಡಬೇಕು ಎನ್ನುವ. ಮಾತುಗಳು ಕೇಳಿ ಬರುತ್ತಿವೆ.

ಇದೆಲ್ಲದರ ಮಧ್ಯೆ ಬಿಜೆಪಿಯನ್ನೇ ನಂಬಿಕೊಂಡಿರುವ ಬ್ರಾಹ್ಮಣ ಸಮುದಾಯಕ್ಕೂ ಒಂದು ಅವಕಾಶ ಕೊಡಬೇಕು ಎನ್ನುವ ಕೂಗು ಎದ್ದಿದೆ. ಈ ಹಿನ್ನೆಲೆಯಲ್ಲಿ ಚರ್ಚೆ ಕೂಡ ನಡೆದಿದೆ. ಬ್ರಾಹ್ಮಣ ಸಮುದಾಯದಲ್ಲಿ ಉದ್ದಿಮೆದಾರರೊಬ್ಬರ ಹೆಸರು ಈಗ ಪ್ರಮುಖವಾಗಿ ಕೇಳು ಬರುತ್ತಿದೆ. ಇಲ್ಲಿ ಈ ಸಮುದಾಯವನ್ನು ನಿರ್ಲಕ್ಷಿಸಿದರೆ ಎರಡೂ ಗೆಲುವು ಯಾರಿಗೂ ಸುಲಭವಲ್ಲ ಎನ್ಬುವುದು ಸ್ಪಷ್ಡ.

ಸಧ್ಯ ಹೇಗಾಗಿದೆ ಎಂದರೆ, ಬ್ರಾಹ್ಮಣ ರ ಮತಗಳು ಬಿಜೆಪಿ ಬಿಟ್ಟು ಹೋಗಲ್ಲ ಎನ್ನುವ ಕಾರಣದಿಂದ ಆ ಸಮಾಜವನ್ನು ಕಡೆಗಣಿಸುತ್ತಿದ್ದಾರೆ. ಮತ್ತೊಂದು ಕಡೆಗೆ ಕಾಂಗ್ರೆಸ್ ದವರು ಬ್ರಾಹ್ಮಣ ‌ಸಮಾಜದ ಮತಗಳನ್ಬು ನಂಬುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಬ್ರಾಹ್ಮಣರು ಪರ್ಯಾಯದ ಬಗ್ಗೆ ಚಿಂತನೆ ನಡೆಸಿದ್ದು ಸುಳ್ಳಲ್ಲ.

ಅಸ್ತಿತ್ವಕ್ಕಾಗಿ ಎಂಇಎಸ್ ಪರದಾಟ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ತನ್ನ ಅಸ್ತಿತ್ವ ಕಂಡುಕೊಳ್ಳಲು ಇ ರದಾಟ ನಡೆಸುತ್ತಿದೆ.. ಇದಕ್ಕೆ ಮಹಾರಾಷ್ಟ್ರ ಸರಕಾರ ಬೆನ್ನೆಲುಬಾಗಿ ನಿಂತಿದೆ..

ಚುನಾವಣೆ ಹೊತ್ತಲ್ಲೇ ಮತ್ತೆ ಬೆಳಗಾವಿ ಗಡಿಭಾಗದ ಮರಾಠಿಗರನ್ನು ಎಚ್ಚರಿಸಲು ಮಹಾರಾಷ್ಟ್ರದ ಉನ್ನತ ನಿಯೋಗ ಗುರುವಾರ ಬೆಳಗಾವಿಗೆ ಆಗಮಿಸಿ ನಿಮ್ಮೊಂದಿಗೆ ನಾವು ಸದಾ ಇರುತ್ತೇವೆ ಎಂದು ಅಭಯ ನೀಡಿ ಕೆಲ ಭರವಸೆಗಳನ್ನು ನೀಡಿದ್ದಾರೆ.


ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದ ಪ್ರಕರಣದಲ್ಲಿ ಕೆಲವು ಕಾನೂನು ಅಡೆತಡೆಗಳಿವೆ. ಇದೇ ಕಾರಣಕ್ಕೆ ಸುಪ್ರೀಂಕೋರ್ಟಿನಲ್ಲಿ ಪ್ರಕರಣ ನಿಲ್ಲುತ್ತಿಲ್ಲ. ಹೀಗಾಗಿ ಈ ಎಲ್ಲಾ ಅಡೆತಡೆಗಳನ್ನು ಸರಿಪಡಿಸಲು ಮಹಾರಾಷ್ಟ್ರ ಸರ್ಕಾರ ತಿದ್ದುಪಡಿಗೆ ಮುಂದಾಗಿದೆ ಎಂದು ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದದ ಮಹಾರಾಷ್ಟ್ರದ ಉನ್ನತಾಧಿಕಾರ ಸಮಿತಿ ಅಧ್ಯಕ್ಷ ಹಾಗೂ ಸಂಸದ ಧೈರ್ಯಶೀಲ ಮಾನೆ ಹೇಳಿದ್ದಾರೆ.
ಬೆಳಗಾವಿಯಲ್ಲಿ ಗುರುವಾರ ಎಂಇಎಸ್‌ ಆಯೋಜಿಸಿದ್ದ ಮಹಾರಾಷ್ಟ್ರ ಸರ್ಕಾರದ ಆರೋಗ್ಯ ವಿಮೆಯ ಫಲಾನುಭವಿಗಳ ಸಭೆ, ಮಾರ್ಗದರ್ಶಿ ಕೈಪಿಡಿ ಬಿಡುಗಡೆ ಹಾಗೂ ಉದ್ಯೋಗ ಭರವಸೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾರಾಷ್ಟ್ರ ಸರ್ಕಾರ ಗಡಿ ವಿವಾದಕ್ಕೆ ಅಗ್ರಸ್ಥಾನ ನೀಡಿದೆ. ಇಷ್ಟಕ್ಕೂ ಮಹಾರಾಷ್ಟ್ರದ ಹಾಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ಗಡಿ ವಿವಾದದಿಂದಲೇ ಬೆಳಕಿಗೆ ಬಂದವರು ಅವರಿಗೆ ಬೆಳಗಾವಿ ವಿವಾದದ ಸಂಪೂರ್ಣ ಅರಿವಿದೆ ಅವರು ಬೆಳಗಾವಿ ಮರಾಠಿಗರ ಹಿತಶಕ್ತಿ ಕಾಪಾಡಲು ಸದಾ ಬದ್ಧರಾಗಿದ್ದಾರೆ ಅವರೇ ನಮ್ಮ ಶಕ್ತಿಯಾಗಿರುವಾಗ ಬಂದವರು. ಹೀಗಾಗಿ ಬೆಳಗಾವಿ ಮರಾಠಿಗರು ಯಾವುದೇ ರೀತಿಯಲ್ಲೂ ಭಯಪಡುವ ಅಗತ್ಯ ಇಲ್ಲ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!