ದಕ್ಷಿಣದಲ್ಲೆಡೆ ರಾಮ ರಾಮ‌‌‌…!

ವಾರ್ಡ 43 ರಲ್ಲಿ ಮನೆ ಮನೆಗೆ ರಾಮನ ಭಾವಚಿತ್ರ ಇರುವ ಧ್ವಜ ವಿತರಿಸಿದ ನಗರಸೇವಕಿ ವಾಣಿ ಜೋಶಿ.

ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ ದೇವಸ್ಥಾನ ಸ್ವಚ್ಚತಾ ಅಭಿಯಾನ.

ಶಾಸಕ ಅಭಯ ಪಾಟೀಲರು ಕೊಡಮಾಡಿದ ಮೋತಿಚೂರು ಲಾಡು ಮನೆ ಮನೆಗೆ ತಲುಪಿಸುವಲ್ಲಿ ಮಗ್ನರಾದ ರಾಮ ಭಕ್ತರು.

ಬೆಳಗಾವಿ.

ಅಯೋಧ್ಯಾ ರಾಮಮಂದಿರ ಲೋಕಾರ್ಪಣೆ ಮತ್ತು ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದೇವಸ್ಥಾನ ಸ್ವಚ್ಚತಾ ಅಭಿಯಾನ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಭರ್ಜರಿ ಯಾಗಿ ನಡೆಯುತ್ತಿದೆ.

ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ ಆಯಾ ವಾರ್ಡಗಳಲ್ಲಿ ಬಿಜೆಪಿ ನಗರಸೇವಕರು ದೇವಸ್ಥಾನ ಸ್ವಚ್ಚತಾ ಅಭಿಯಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಸ್ವಚ್ಚತಾ ಅಭಿಯಾನದಲ್ಲಿ ಭಾಗವಹಿಸಿದ ತಂಡ

ವಾರ್ಡ ನಂಬರ 43 ರ ನಗರಸೇವಕಿ ಮತ್ತು ನಗರ ಯೋಜನೆ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ವಾಣಿ ಜೋಶಿ ಅವರು ವಾರ್ಡನ ನಿವಾಸಿಗಳೊಂದಿಗೆ ಕೂಡಿಕೊಂಡು ನಿತ್ಯ ಒಂದು ದೇವಸ್ಥಾನ ಸ್ವಚ್ಚತೆಯನ್ನು ನಡೆಸಿದ್ದಾರೆ.

ಕೃಷ್ಣ ಮಂದಿರ ಸ್ವಚ್ಚತೆಯಲ್ಲಿ ತೊಡಗಿರುವ ನಗರಸೇವಕಿ ವಾಣಿ ಜೋಶಿ

ಇದರ ಜೊತೆಗೆ ತಮ್ಮ ವಾರ್ಡನ‌ ಪ್ರತಿ ಮನೆ‌ ಮನೆಗೆ ರಾಮನ ಭಾವಚಿತ್ರವುಳ್ಳ ಧ್ವಜವನ್ನು ವಿತರಿಸುವ ಕೆಲಸ ನಡೆಸಿದ್ದಾರೆ

ಮೋತಿಚೂರು ಲಾಡು ಸಿದ್ಧತೆಯಲ್ಲಿ ತೊಡಗಿರುವ ಶಾಸಕ ಅಭಯ ಪಾಟೀಲ

ಇದೆಲ್ಲದರ ಜೊತೆಗೆ ಶಾಸಕ ಅಭಯ ಪಾಟೀಲರು ಕೊಡ ಮಾಡಿದ ರುಚಿ ಕಟ್ಟಾದ ಮೋತಿಚೂರು ಲಾಡು ವನ್ನು ಸಹ ಮನೆ ಮನೆ ತಲುಪಿಸುವ ಕೆಲಸ ಕೂಡ ಅಚ್ಚುಕಟ್ಟಾಗಿ ನಡೆದಿದೆ.

ಕೃಷ್ಣ ಮಂದಿರ ಸ್ವಚ್ಚತಾ ಕಾರ್ಯಕ್ರಮದಲ್ಲಿ ಸಂಗೀತಾ ಬೀಡಿ‌ ಆಶಾ ದಿಕ್ಷಿತ, ಮಾನಸಿ ಜೋಶಿ. ಅಕ್ಷಯ ಕುಲಕರ್ಣಿ, ಕೇಶವ ಕುಲಕರ್ಣಿ, ಮಾಜಿ ಉಪಮೇಯರ್ ಧನರಾಜ‌ ಗವಳಿ. ರಘು ಕಾಮಕರ ಮುಂತಾದವರು ಹಾಜರಿದ್ದರು.

ದಿ.‌17 ರಂದು ಚಿದಂಬರ ದೇವಸ್ಥಾನ ಸ್ವಚ್ಚತಾ ಅಭಿಯಾನ.

ದಿ.‌17 ರಂದು ಬೆಳಿಗ್ಗೆ 7 ಕ್ಕೆ ಚಿದಂಬರ ನಗರದ ಶ್ರೀ ಚಿದಂಬರೇಶ್ವರ ಸ್ವಚ್ಛತಾ ಅಭಿಯಾನ ನಡೆಯಲಿದೆ.

ಆಸಕ್ತ ರಾಮ ಭಕ್ತರು ಸರಿಯಾಗಿ ದೇವಸ್ಥಾನ ಕ್ಕೆ ಹಾಜರಿರಬೇಕೆಂದು ನಗರಸೇವಕಿ ವಾಣಿ ಜೋಶಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!