ಬೆಳಗಾವಿ:
ಕಳೆದ 14 ವರ್ಷದಿಂದ ನಡೆಸಿಕೊಂಡು ಬರಲಾಗುತ್ತಿರುವ ಅಂತಾರಾಷ್ಟ್ರೀಯ ಪತಂಗೋತ್ಸವ ಈ ಬಾರಿ ಕೂಡ ಇದೇ ದಿ, 20 ರಿಂದ 23 ರವರೆಗೆ ನಡೆಯಲಿದ್ದು, ಅದು ವಿಶೇಷಗಳಿಂದ ಕೂಡಿರುತ್ತದೆ ಎಂದು ಅದರ ರೂವಾರಿಯೂ ಆಗಿರುವ ಶಾಸಕ ಅಭಯ ಪಾಟೀಲ ಹೇಳಿದರು,

ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪತಂಗೋತ್ಸವಕ್ಕೆ ಇಲ್ಲಿನ ಬಿ. ಎಸ್. ಯಡಿಯೂರಪ್ಪ ಮಾರ್ಗದಲ್ಲಿರುವ ಮಾಲಿನಿ ಸಿಟಿಯಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು,

ಈ ಬಾರಿ ಯುಕೆ, ಇಂಡೋನೇಶಿಯಾ, ಸ್ಲೋವೆನಿಯಾ, ನೆದರಲ್ಯಾ,ಡ್ ದಿಂದ ಹತ್ತು ಜನ ವಿದೇಶಿಗರು ಸೇರಿದಂತೆ 32 ಜನ ಭಾರತದ ವಿವಿಧ ರಾಜ್ಯಗಳಿಂದ ಗಾಳಿಪಟ ಹಾರಿಸುವ ಪರಿಣಿತರು ಈ ಉತ್ಸವದಲ್ಲಿ ಭಾಗವಹಿಸಲಿದ್ದಾರೆಂದರು.
ಈ ಬಾರಿಯೂ ಯುವಕರಿಗಾಗಿ ಉಮಂಗ ಉತ್ಸವ ಆಯೋಜಿಸಲಾಗಿದೆ. ಈ ಉತ್ಸವದಲ್ಲಿ ಭಾಷಣ,, ಸೋಲೊ ನೃತ್ಯ, ಗುಂಪು ನೃತ್ಯ, ಸೋಲೊ ಗಾಯನ, ಮೋಕ್ಪ್ರೇಸ್(ಅಣಕು), ಹಾಗೂ ಫ್ಯಾಷನ್ ಶೋಗಳನ್ನು ಆಯೋಜಿಸಲಾಗಿದೆ. ಈ ಬಾರಿಯು ಕಾಲೇಜು ವಿದ್ಯಾಥಿಗಳಿಗಾಗಿ ಡಿಜೆ ಕಾರ್ಯಕ್ರಮ ಜ.20 ರಂದು ಸಂಜೆ 7 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಇಂದಲ್ಲದೇ ಈ ಬಾರಿಯೂ ದೇಹದಾಡ್ರ್ಯ ಸ್ಪರ್ಧೆ ಆಯೋಜಿಸಲಾಗಿದೆ. ವಿಶೇಷವಾಗಿ ಶ್ರೀರಾಮ ಮಂದಿರ ಪ್ರಾಣಪ್ರತಿಷ್ಟಾಪನೆ ಕಾರ್ಯಕ್ರಮ ನಡೆಯುವ ಜ22ರಂದು ಭವ್ಯ ಕ್ರ್ಯಾಕರ್ ಶೋ ನಡೆಯಲಿದೆ.
ಶಾಲಾ ವಿದ್ಯಾರ್ಥಿಗಳಿಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಬಲೂನ್ ಉತ್ಸವ ಹಾಗೂ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಚಿಕ್ಕ ಮಕ್ಕಳಿಗಾಗಿ ಗುಂಪು ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸದರಿ ಉತ್ಸವಕ್ಕೆ ನಗರದ 11 ಶಾಲೆಗಳ ಸುಮಾರು ನಾಲ್ಕು ಸಾವಿರ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು.ದೀಪಕ ಗೋಜಗೆಕರ, ಚೈತನ್ಯ ಕುಲಕರ್ಣಿ ಗಣೇಶ ಮಳಲಿಕರ ಮತ್ತು ನಗರಸೇವಕ ಗಿರೀಶ ಧೋಂಗಡಿ ಉಪಸ್ಥಿತರಿದ್ದರು,