ಬೆಳಗಾವಿ. ರಾಜಕೀಯ ನಿಂತ ನೀರಲ್ಲ ಜೊತೆಗೆ ಯಾರು ಯಾರಿಗೆ ಶತ್ರುನೂ ಅಲ್ಲ ಮಿತ್ರನೂ ಅಲ್ಲ. ಅಂತಹ ಅನೇಕ ಜ್ವಲಂತ ಉದಾಹರಣೆಗಳು ನಮ್ಮೆಲ್ಲರ ಕಣ್ಮುಂದೆಯೇ ಇವೆ.
ಇಲ್ಲಿ ನಾಯಕರು ಪಕ್ಷ ಬಿಟ್ಟು ಹೋಗುವಾಗ ಎಲ್ಲರನ್ನು ತೆಗಳುತ್ತಾರೆ. ಆದರೆ ಮತ್ತೇ ಮರಳಿ ಪಕ್ಷಕ್ಕೆ ಬರುವಾಗ ಅವರನ್ನೇ ಹೊಗಳುತ್ತಾರೆ.

ಇದರಿಂದ ಸಮಸ್ಯೆ ಆಗುವುದು ನಾಯಕರಿಗಲ್ಲ .ಅವರನ್ನು ನಂಬಿ ಹಿಂಬಾಲಿಸಿದ ಕಾರ್ಯಕರ್ತರಿಗೆ ಎನ್ನುವುದು ವಾಸ್ತವ.

ಜಗದೀಶ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಗೊಂಡ ಸಂದರ್ಭ
ಅಂತಹ ಪರಿಸ್ಥಿತಿ ಶೆಟ್ಟರ ಅವರನ್ನು ನಂಬಿದ ಕಾರ್ಯಕರ್ತರಿಗೆ ಆಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ ಎನ್ನುವ ಒಂದೇ ಕಾರಣದಿಂದ ಮಾಜಿ ಮುಖ್ಯಮಂತ್ರಿ ಯಾಗಿದ್ದ ಜಗದೀಶ ಶೆಟ್ಟರ್ ಅವರು ಹಿಂದೆ ಮುಂದೆ ನೋಡದೇ ಪಕ್ಷದ ನಾಯಕರನ್ನು ಹಿಗ್ಗಾಮುಗ್ಗಾ ಬೈದು ಕಾಂಗ್ರೆಸ್ ತೆಕ್ಕೆಗೆ ಹೋದರು. ವಿಧಾನಸಭೆ ಟಿಕೆಟ್ ಗಿಟ್ಟಿಸಿಕೊಂಡು ಬರೊಬ್ಬರಿ 35 ಸಾವಿರ ಮತಗಳ ಅಂತರದಿಂದ ಸೋತರು. ಆದರೂ ಕಾಂಗ್ರೆಸ್ ಅವರನ್ನು ವಿಧಾನ ಪರಿಷತ್ತಿನ ನಾಮನಿರ್ದೇಶಿತ ಸದಸ್ಯರನ್ನಾಗಿ ಮಾಡಿತು. ಅಷ್ಟೇ ಆಗಿದ್ದರೆ ಸಮಸ್ಯೆನೇ ಬರ್ತಿರಲಿಲ್ಲ.

ಶೆಟ್ಟರ್ ಅವರು ಮರಳಿ ಬಿಜೆಪಿ ಸೇರ್ಪಡೆ ಗೊಂಡ ಸಂದರ್ಭ.
ಈಗ ಅಯೋಧ್ಯಾ ರಾಮಮಂದಿರ ಲೋಕಾರ್ಪಣೆ ನಂತರ ಬಿಜೆಪಿ ವರ್ಚಸ್ಸು ಕಂಡ ಅದೇ ಜಗದೀಶ ಶೆಟ್ಟರ್ ಮತ್ತೇ ಘರ್ ವಾಪಸ್ಸಿ ಆದರು. ಅಂದರೆ ಬಿಜೆಪಿಗೆ ಬಂದರು.
ಅವರು ಬಿಜೆಪಿ ಸೇರ್ಪಡೆ ಗೊಂಡ ನಂತರ ಅದಕ್ಕೆ ಯಾರೂ ಆಕ್ಷೇಪಣೆ ವ್ಯಕ್ತಮಾಡಲಿಲ್ಲ. ಬದಲಾಗಿ ಒಲ್ಲದ ಮನಸ್ಸಿನಿಂದಲೋ ಏನೋ ಪಕ್ಷಕ್ಕೆ ಭಾರೀ ಬಲ ಬರುತ್ತದೆ ಎಂದು ಹೇಳಿಕೆ ಕೊಟ್ಟರು.
ಈಗ ಜಗದೀಶ ಶೆಟ್ಟರ ಬಿಜೆಪಿ ಸೇರ್ಪಡೆ ಮುನ್ನ ಬಿಜೆಪಿ ಹೈ ಕಮಾಂಡಗೆ ಕೆಲ ಷರತ್ತು ಹಾಕಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಜಗದೀಶ್ ಶೆಟ್ಟರ್‌ಗೆ ಬಿಜೆಪಿ ಹೈಕಮಾಂಡ್ ಕೊಟ್ಟ ಆಫರ್ ಯಾವುವು?
ಲೋಕಸಭಾ ಚುನಾವನೆಯಲ್ಲಿ ಸ್ಪರ್ಧಿಸುವ ಕುರಿತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಹೇಳುದಲ್ಲಿ ಟಿಕೆಟ್ ನೀಡುವ ಭರವಸೆ ನೀಡಿದೆ ಎಂದು ಗೊತ್ತಾಗಿದೆ. ಹೀಗಾಗಿ ಅವರ ಕಣ್ಣು ಹಾವೇರಿ, ಬೆಳಗಾವಿ ಲೋಕಸಭಾ ಮೇಲಿದೆ. ಅಷ್ಟೇ ಅಲ್ಲ ಹಾವೇರಿಗೆ ನನಗೆ ಟಿಕೆಟ್ ಕೊಟ್ಟರೆ ಬೆಳಗಾವಿಯಿಂದ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡಬೇಕು ಎನ್ನುವ ಬೇಡಿಕೆಯನ್ನು ಇಟ್ಟಿದ್ದಾರೆಂದು ಗೊತ್ತಾಗಿದೆ. ಇದೆಲ್ಲದರ ಜೊತೆಗೆ ಈ ಎರಡೂ ಬೇಡ ಅಂದರೆ, ರಾಜ್ಯಸಭೆ ಸದಸ್ಯರನ್ನಾಗಿ ಮಾಡಿ ಕೇಂದ್ರದಲ್ಲಿ ಮಂತ್ರಿ ಮಾಡುವ ಆಫರ್ ಅನ್ನ ಬಿಜೆಪಿ ಹೈಕಮಾಂಡ್ ನಾಯಕರು ನೀಡಿದ್ದಾರೆ ಎಂದು ಹೇಳಲಾಗಿದೆ.
ಬಿಜೆಪಿ ಪಕ್ಷದಲ್ಲಿ ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿ, ಸ್ಪೀಕರ್ ಆಗಿರುವ ಜಗದೀಶ್ ಶೆಟ್ಟರ್ ಅವರ ಹಿರಿತನವನ್ನು ಪರಿಗಣಿಸಿ ರಾಜ್ಯಪಾಲರನ್ನಾಗಿ ಮಾಡುವ ಭರವಸೆಯನ್ನ ಬಿಜೆಪಿ ಹೈಕಮಾಂಡ್ ನೀಡಿದೆ ಎನ್ನಲಾಗಿದೆ. ಆದರೆ ಅವರಿಗೆ ಬೆಳಗಾವಿ ಟಿಕೆಟ್ ಕೊಟ್ಟರೆ ರಾಜಕಾರಣದಲ್ಲಿ ಇನ್ನಷ್ಟು ಗೊಂದಲ ಏಳುವುದು ಸಹಜ. ಏಕೆಂದರೆ ಅವರು ಹೊರಗಿನವರಾಗುತ್ತಾರೆ ಎನ್ನುವ ಮಾತಿದೆ.