ಬಿಜೆಪಿ ನಡೆ ಗ್ರಾಮ ಕಡೆ..!

ಬೆಂಗಳೂರು ಲೋಕಸಮರ ಹತ್ತಿರ ಬರುತ್ತಿದ್ದಂತೆ ಭಾರತೀಯ ಜನತಾ ಪಕ್ಷ ಮೈಕೊಡವಿಕೊಙಡು ಎದ್ದು‌ನಿಂತಿದೆ.

ಪಕ್ಷದಲ್ಲಿನ ಅಂತರಿಕವಾಗಿರುವ ಅಸಮಾಧಣನವನ್ನು ಲೆಕ್ಕಿಸದೇ ಎಲ್ಲ ಸ್ಥಾನಗಳನ್ನು ಗೆಲ್ಲಲೇಬೇಕೆಂದು ಪಣತೊಟ್ಟಿರುವ ನಾಯಕರು ಹಲವು ಕಸರತ್ತುಗಳನ್ನು ನಡೆಸಿದ್ದಾರೆ.

ಅದರ ಮೊದಲ ಹಂತವಾಗಿ ಕೇಂದ್ರ ಸರ್ಕಾರದ ಸಾಧನೆ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಕ್ಯವನ್ನು ಮನೆ ಮನೆಗೆ ತಿಳಿಸುವ ಕಾರ್ಯಕ್ರಮ ವನ್ನು ಬಿಜೆಪಿ ಹಮ್ಮಿಕೊಂಡಿದೆ.

ಇದೇ ಫೆಬ್ರುವರಿ 10 ರಿಂದ ಮೂರು ದಿನಗಳ ಕಾಲ ಈ ಅಭಿಯಾನ ನಡೆಯಲಿದೆ.

.ಬೆಂಗಳೂರಿನಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಮಾಜಿ ಸಚಿವ ಸುನಿಲ್ ಕುಮಾರ್ ಅಭಿಯಾನದ ಸಂಚಾಲಕರಾಗಿದ್ದಾರೆ.

.ರಾಜ್ಯದ 28,000 ಕಂದಾಯ ಗ್ರಾಮಗಳು, 19 ಸಾವಿರ ನಗರ ಬೂತ್ ಗಳನ್ನು ಸಂಪರ್ಕಿಸಲು ಉದ್ದೇಶಿಸಲಾಗಿದ್ದು, 40,000 ಕಾರ್ಯಕರ್ತರನ್ನು ಅಭಿಯಾನದಲ್ಲಿ ಜೋಡಿಸಲು ತೀರ್ಮಾನಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!