ಕ್ರಿಮಿನಲ್ ಕೇಸ್ ದಾಖಲು ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ
ಬೆಳಗಾವಿ: ಕ್ರಿಮಿನಲ್ ಕೇಸ್ ದಾಖಲಾಗಿರುವುದು ಇದು ನ್ಯಾಯಾಲಯದಲ್ಲಿ ಮಾತ್ರ ಹೋರಾಟ, ಅದನ್ನು ಬಿಟ್ಟು ಹೊರಗಡೆ ಹೋರಾಟ ಇಲ್ಲ ಎಂದ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಹಿಂದು ಪದದ ಬಗ್ಗೆ ಅವಹೇಳನಕಾರಿ ಹೇಳಿಕೆ ಕುರಿತು ನಿಮ್ಮ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕೋರ್ಟ್ ಆದೇಶ ನೀಡಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವ ಜಾರಕಿಹೊಳಿ ಅವರು, ಹಿಂದೆ ಹಿಂದೂ ಪದದ ಹೇಳಿಕೆ ಕುರಿತು ಚರ್ಚೆಗೆ ಗ್ರಾಸ ಆಗಿತ್ತು, ಮೊದಲು ಯಾರೋ ಕೇಸ್ ಹಾಕಿದ್ರು ಕೇಳ ನ್ಯಾಯಾಲಯದಲ್ಲಿ ರಿಜೆಕ್ಟ್ ಆಗಿತ್ತು. ಈಗ ನೋಡಬೇಕು ಅದರಲ್ಲಿ ಏನಿದೆ ಅಂತಾ, ಈಗ ಕೋರ್ಟ ಏನ ಆದೇಶ ಮಾಡಿದೆ ಅಂತ ನೋಡೋಣ ಎಂದು ಹೇಳಿದರು.

ಹಿಂದು ಪದದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರ ಬಗ್ಗೆ ನನ್ನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ವಿಚಾರಣೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಆದೇಶ ಹೊರಡಿಸಲಾಗಿದೆ. ಆದರೆ ಅದರ ಪ್ರತಿ ನನಗೆ ಸಿಕ್ಕಿಲ್ಲ, ಪ್ರತಿ ಸಿಕ್ಕ ನಂತರ ಕಾನೂನು ಹೋರಾಟ ಮಾಡುತ್ತವೆ ಎಂದು ಹೇಳಿದರು.