ಬೆಳಗಾವಿ ಮಂಡ್ಯದ ಕೆರಗೋಡುವಿನಲ್ಲಿ ಆರಂಭಗೊಂದ ಧ್ವಜ ದಂಗಲ್ ಗಡಿನಾಡ ಬೆಳಗಾವಿ ಜಿಲ್ಲೆಯಲ್ಲೂ ಮುಂದುವರೆದಿದೆ.

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿಯಲ್ಲಿ ಧ್ವಜ ದಂಗಲ್ ಶುರುವಾಗಿದೆ. ಕಳೆದ ೧೫ ದಿನಗಳ ಹಿಂದೆ ಆರಂಭಗೊಂಡು ಈ ವಿವಾದ ಸಧ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಾಣಸಿಗುತ್ತಿಲ್ಲ. ಎಂ.ಕೆ ಹುಬ್ಬಳ್ಳಿಯ ಹಳೆಯ ಹನುಮಾನ ಮಂದಿರದ ಮುಂದಿರುವ ಧ್ವಜ ಕಂಬಕ್ಕೆ ಧ್ವಜವನ್ನು ಕಟ್ಟಲಾಗಿತ್ತು.

ಆದರೆ ಅದನ್ನು ಪೊಲೀಸರು ಯಾವ ಉದ್ದೇಶದಿಂದ ತೆರವು ಮಾಡಿದರು ಎನ್ನುವುದು ಗೊತ್ತಾಗಿಲ್ಲ.ಈಗ ಅದು ವಿವಾದದ ಸ್ವರೂಪ ಪಡೆದುಕೊಂಡಿದೆ.
ಗಮನಿಸಬೇಕಾದ ಸಂಗತಿ ಎಂದರೆ ಕಳೆದ ಕೆಲ ದಿನಗಳಿಂದ ಬೂದಿ ಮುಚ್ಚಿದ ಕೆಙಡದಂತಿದ್ದ ಈಧ್ವಜ ತೆರವು ವಿವಾದದ ಬಗ್ಗೆ ಸಾಮಾಜಿಕ ಜಾಕತಾಣದಲ್ಲಿ ಪೋಸ್ಟ ವೈರಲ್ ಆಗಿದ್ದರಿಂದ ಪರಿಸ್ಥಿತಿ ಕಾವೇರತೊಡಗಿತು.

ಘಟನಾ ಸ್ಥಳಕ್ಕೆ ನಾಲ್ಕೈದು ಪೊಲೀಸ್ ವಾಹನಗಳು ಬಂದಿದ್ದರಿಂದ ವಾತಾವರಣ ಕಾವೇರತೊಡಗಿತು. ಪರಿಸ್ಥಿತಿ ಅರಿತ ಎಸ್ಪಿ ಅವರು ಸ್ಥಳಕ್ಕೆ ಧಾವಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಆದರೆ ವಿವಾದ ಮಾತ್ರ ಬಗೆಹರಿಯುವ ಲಕ್ಷಣಗಳು ಕಾಣಸಿಗಲಿಲ್ಲ. ಅಲ್ಲಿನ ಅಧಿಕಾರಿಗಳು ಗ್ರಾಮಸ್ಥರು ಕೊಟ್ಟ ಮನವಿ ಪತ್ರದ ಮೇಲೆ ನಾಳೆ ನೋಡೋಣ ಎನ್ನುವ ರೀತಿಯಲ್ಲಿ ಉತ್ತರ ಕೊಟ್ಟರು. ಹೀಗಾಗಿ ಧ್ವಜ ದಂಗಲ್ ಪ್ರಕರಣ ಮುಂದಿನ ದಿನಗಳಲ್ಲಿ ರಾಜಕೀಯ ಸ್ವರೂಪ ಪಡೆದುಕೊಂಡರೂ ಅಚ್ಚರಿಪಡಬೇಕಿಲ್ಲ.