ಬೆಳಗಾವಿ:
ಬೆಳಗಾವಿಯ ವೀರಭದ್ರ ನಗರದ ರಹವಾಸಿ ವಚನಾ ಬಸವರಾಜ ದೇಸಾಯಿ ಇವಳು ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪ್ರಶಸ್ತಿ ಸಾಧಿಸಿದ್ದಾಳೆ.
ನಗರದ ಇಂಡಿಯನ್ ಕರಾಟೆ ಕ್ಲಬ್ ಹಾಗೂ ಬೆಳಗಾವಿ ಡಿಸ್ಟಿಕ್ಟ್ ಸ್ಫರ್ಟ್ಸ ಕರಾಟೆ ಅಸೋಶಿಯಷನ್ ಇವರ ಸಂಯುಕ್ತ ಆಶ್ರಯದಲ್ಲಿ ‘ಕರಾಟೆ ಬ್ಲಾಕ್ ಬೆಲ್ಟ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇದೇ ದಿ.೧೧ ರವಿವಾರದಂದು ಸಾಯಂಕಾಲ ೬ ಗಂಟೆಗೆ ಎಸ್.ಪಿ. ಆಫೀಸ್ ಹತ್ತಿರವಿರುವ ಕುಮಾರ ಗಂಧರ್ವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಮುಖ್ಯ ಪರೀಕ್ಷಕರಾದ ಗಜೇಂದ್ರ ಬಿ. ಕಾಕತಿಕರ
ಮತ್ತು ತರಬೇತುದಾರ ವಿಠ್ಠಲ ಭೋಜಗಾರ ಉಪಸ್ಥಿತರಿರುವರು. ಸ್ವಯಂ ರಕ್ಷಣೆ ಬಗ್ಗೆ
ಮಹಿಳೆಯರಲ್ಲಿ ಈಗಾಗಲೇ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಿರುವ ವಚನಾ ಕೇರಳದ
ಕಳರಿಪಯಟ್ಟು ಆತ್ಮರಕ್ಷಣಾ ಕಲೆಯ ತಾಲೀಮು ಪಡೆದುಕೊಂಡಿದ್ದಾರೆ.