ಕೇಂದ್ರ ಸಚಿವ ಗಡ್ಕರಿಯನ್ನು ಅಭಿನಂದಿಸಿದ ಕೋರೆ

ನವದೆಹಲಿ

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ನವದೆಹಲಿಯಲ್ಲಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರು ಭೇಟಿಯಾದರು.
ನಿತಿನ್ ಗಡ್ಕರಿಯವರು ಮಾರ್ಚ್ ೨೦೧೮ ರಂದು ೧೮೭೫ ಕೋಟಿ ರೂಪಾಯಿಗಳ ಯೋಜನೆಯಾದ ಮುರಗುಂಡಿಯಿಂದ ಗೋಟೂರ ಚತುಷ್ಫಥ ರಾಷ್ಟಿಯ ಹೆದ್ದಾರಿ ಕಾಮಗಾರಿಗೆ ಹಾಗೂ ಕೃಷ್ಣಾನದಿಯ ಮೇಲ್ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.


ಇಂದು ಆ ಯೋಜನೆಯ ಟೆಂಡರ್ ಪ್ರಕ್ರಿಯೆಯು ನಡೆದಿದ್ದು ಶೀಘ್ರವಾಗಿ ಕಾಮಗಾರಿಯು ಪ್ರಾರಂಭಗೊಳ್ಳಲಿದೆ. ತನ್ನಿಮಿತ್ತವಾಗಿ ಡಾ.ಪ್ರಭಾಕರ ಕೋರೆಯವರು ಗಡ್ಕರಿಯವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಈ ಮಹತ್ವದ ಚತುಷ್ಫಥ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.


ಈ ಸಂದರ್ಭದಲ್ಲಿ ಡಾ.ಕೋರೆಯವರು ಸುದ್ದಿಗಾರರೊಂದಿಗೆ ಮಾತನಾಡಿ, ಈ ಭಾಗದ ಜನತೆಯ ಬಹುದಿನಗಳ ಕನಸಾಗಿತ್ತು.

ವ್ಯಾಪಾರ ವಹಿವಾಟಿಗೆ ಈ ರಸ್ತೆಯು ಸಂಪರ್ಕ ಕಲ್ಪಿಸುವುದರೊಂದಿಗೆ ದಿನನಿತ್ಯದ ಸಂಚಾರಕ್ಕೆ ಅನುಕೂಲವಾಗದೆ. ಇದರೊಂದಿಗೆ ಕಾಗವಾಡದಿಂದ ಮೀರಜ್ ಸಂಪರ್ಕ ಕಲ್ಪಿಸುವ ರಸ್ತೆಯು ಕೂಡ ಚತುಷ್ಫಥವಾಗಬೇಕು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ವ್ಯಾಪಾರ ವಹಿವಾಟಕ್ಕೆ ಇನ್ನೂ ಹೆಚ್ಚಿನ ಅನುಕೂಲವಾಗುವುದೆಂದು ಸಚಿವರಿಗೆ ಮನವರಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಮಾಜಿ ಸಚಿವ ವಿ.ಸೋಮಣ್ಣ, ತುಮಕೂರ ಎಂಪಿ ಜಿ .ಎಸ್. ಬಸವರಾಜ, ಅಂಕಲಿಯ ಸುರೇಶ ಪಾಟೀಲ ಜೊತೆಗಿದ್ದರು.

Leave a Reply

Your email address will not be published. Required fields are marked *

error: Content is protected !!