ಬೆಳಗಾವಿ.
ಉತ್ತರ ಪ್ರದೇಶದ ಗ್ಯಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಪೂಜೆಗೆ ಅವಕಾಶ ಮಾಡಿ ಕೊಟ್ಟಿದ್ದುನ್ನು ಖಂಡಿಸಿ ಗುರುವಾರ ನಗರದ ಚನ್ನಮ್ಮ ವೃತ್ತದಲ್ಲಿ ಬೆಳಗಾವಿಯ ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾಧ್ಯಮಗಳಲ್ಲಿ ಮಾತನಾಡಿದ ಎಸ್ ಡಿ ಪಿ ಐ ಕಾರ್ಯದರ್ಶಿ ವಾಜಿದ್ ಶೇಕ್ 1991ರ ಕಾಯ್ದೆ ಪ್ರಕಾರ ಯಾವುದೇ ಧಾರ್ಮಿಕ ಸ್ಥಳಗಳ ಕುರಿತು ವಿವಾದಗಳಿಗೆ ಅವಕಾಶವಿಲ್ಲ.ಆದರೆ ಕಾನೂನಿನ ಹೊರತಾಗಿಯೂ ಮಸೀದಿಯ ಮೇಲೆ ದುರುದ್ದೇಶ ಪೂರಿತ ವಿವಾದವನ್ನು ಸೃಷ್ಟಿಸಿ ಸಮುದಾಯಗಳ ನಡುವೆ ದ್ವೇಷ ಸಂಘರ್ಷವನ್ನು ನಡೆಸುವ ಹುನ್ನಾರ ಅತ್ಯಂತ ಖಂಡನೀಯ ಎಂದರು.

ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆ ಇರುವವರಿಗೆ ಬಿಜೆಪಿ ಹಾಗೂ ಆರ್ ಎಸ್ ಎಸ್ ಪರಿವಾರ ನಮ್ಮ ಯಾವುದೇ ಮಸೀದಿಗಳ ಮೇಲೆ ಕಣ್ಣು ಹಾಯಿಸಲು ಕೂಡಾ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು