ಬೆಳಗಾವಿ.
ಎಂಇಎಸ್ ನ ಮುಖಂಡರಿಬ್ಬರು ಹಳಿಯಾಳದಲ್ಲಿ ತಮ್ಮ ತಮ್ಮಲ್ಲಿಯೇ ಬಡಿದಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಬಂದಿದೆ.
ಹಳಿಯಾಳದಲ್ಲಿ ನಡೆಯುವ ಕಾರ್ಯಕ್ರಮ ಕ್ಕೆ ಗೋವಾ ಮುಖ್ಯಮಂತ್ರಿ ಗಳು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಅಲ್ಲಿದ್ದ ಇಬ್ಬರು ಎಂಇಎಸ್ ಮುಖಂಡರಿಬ್ಬರ ನಡುವೆ ಬೆಳಗಾವಿ ಲೋಕಸಭೆ ಚುನಾವಣೆ ಬಗ್ಗೆ ಮಾತುಕತೆ ಜೋರಾಗಿ ನಡೆಯಿತುಮ ಕೊನೆಗೆ ಅದು ಕೈ ಕೈಮಿಲಾಯಿಸುವ ಮಟ್ಟಕ್ಕೂ ಹೋಯಿತು ಎಂದು ಗೊತ್ತಾಗಿದೆ.

ಅಲ್ಲಿಂದ ಬಂದ ಮೂಲಗಳ ಪ್ರಕಾರ ಬೆಳಗಾವಿ ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಕವಟಗಿಮಠರಿಗೆ ಬಬಲಿಸುತ್ತಿದ್ದೀಯಾ ಎನ್ನುವ ವಿಷಯದಿಂದ ಇಬ್ಬರ ನಡುವೆ ವಾದ ನಡೆಯಿತು ಎಂದು ಗೊತ್ತಾಗಿದೆ.
ಆದರೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಇಲ್ಲಿ ಹಲ್ಲೆಗೊಳಗಾದ ವ್ಯಕ್ತಿ ಅಲ್ಲಿನ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆಂದು ಗೊತ್ತಾಗಿದೆ.