ಬೆಳಗಾವಿ ಲೋಕ ಅಖಾಡಕ್ಕಿಳಿದ ಡಾ. ಗಿರೀಶ್ ಸೋನವಾಲ್ಕರ್. ಶೀಘ್ರದಲ್ಲೇ ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್. ಎಲ್ಲೆಡೆ ಪ್ರಚಾರಕ್ಕೆ ಹೊರಟ ಗಿರೀಶ್. ಕೈ ನಾಯಕರ ಅಭಯ ಪಡೆದುಕೊಂಡ ಡಾ.ಸೋನವಾಲ್ಕರ್.
ಬೆಳಗಾವಿ.
ಅಂತೂ ಇಂತೂ ಬೆಳಗಾವಿ ಲೋಕ. ಸಮರಕ್ಕೆ ಡಾ.ಗಿರೀಶ ಸೋನವಾಲ್ಕರ ಹೆಸರು ಬಹುತೇಕ ಫೈನಲ್ ಆಗಿದೆ.
ಬೆಳಗಾವಿಯ ಹೆಸರಾಂತ ವೈದ್ಯ ಎನಿಸಿಕೊಂಡ ಡಾ. ಗಿರೀಶ ಸೋನವಾಲ್ಕರ ಅವರು ವೈದ್ಯಕೀಯ ಕ್ಷೇತ್ರ ಅಷ್ಟೇ ಅಲ್ಲ ಸಾಮಾಜಿಕ ಕ್ಷೇತ್ರದಲ್ಲಿ ಕೂಡ ತಮ್ಮದೇ ವರ್ಚಸ್ಸು ಹೊಂದಿದ್ದಾರೆ.

ಸಧ್ಯ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಅಖೆದುತೂಗಿ ಕೇವಲ ಇಬ್ಬರ ಹೆಸರನ್ನು ಹೈಬಕಮಾಂಡಗೆ ಕಳಿಸಲಾಗಿದೆ. ಅದರಲ್ಲಿ ಡಾ.ಗಿರೀಶ ಸೋನವಾಲ್ಕರ ಮತ್ತು ಸಚಿವೆ ಹೆಬ್ಬಾಳಕರ ಪುತ್ರ ಮೃನಾಲ ಹೆಸರು ರವಾನೆಯಾಗಿದೆ.
ಆದರೆ ಹೈ ಕಮಾಂಡ್ ಡಾ. ಸೋನವಾಲ್ಕರ ಹೆಸರನ್ನು ಬಹುತೇಕ ಅಂತಿಮಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.