ಮೇಯರ್ ಲೆಕ್ಕಾಚಾರ ತಪ್ಪಿದರೆ 3 ಕ್ಷೇತ್ರದಲ್ಲಿ ಬಿಜೆಪಿಗೆ ಪೆಟ್ಟು

ವಿಶೇಷ ವರದಿ
ಬೆಳಗಾವಿ.
ಲೋಕಸಭೆ ಚುನಾವಣೆ ಸನ್ನಿಹಿತವಾದ ಸಂದರ್ಭದಲ್ಲಿಯೇ ಎದುರಾದ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ ನಾಯಕರು ಎಚ್ಚರದ ಹೆಜ್ಜೆ ಇಡುವುದು ಅನಿವಾರ್ಯವಾಗಿದೆ,.

ಲೋಕಸಮರಲ್ಲಿ ಎಲ್ಲ ಸ್ಥಾನಗಳನ್ನು ಗೆಲ್ಲಲೇಬೇಕೆಂದು ಪಣತೊಟ್ಟಿರುವ ಬಿಜೆಪಿ ನಾಯಕರು ಪ್ರತಿಯೊಂದು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ, ಯಾವುದೇ ಒಬ್ಬ ಅಭ್ಯರ್ಥಿ ಯನ್ನು ಬೆಂಬಲಿಸೇಕಾದರೂ ಕೂಡ ಅವರ ಹಿಂದಿರುವ ವ್ಯಕ್ತಿಗಳ ಬಗ್ಗೆ ಚಿಂತನೆ ನಡೆಸಿದ್ದಾರೆ,

ಅಂದರೆ ಬಿಜೆಪಿ ಈ ವಿಷಯದಲ್ಲಿ ರಾಜೀ ಇಲ್ಲ ಎನ್ನುವ ಸಂದೇಶವನ್ನು ರವಾನಿಸಿದೆ
ಈಗ ನಾಳೆ ದಿ. 15 ರಂದು ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆ ನಡೆಯಲಿದೆ.

ಈ ಚುನಾವಣೆ ಬೆಳಗಾವಿ ತಾಲೂಕಿನ ಮೂರು ವಿಧಾನಸಭೆ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತದೆ, ಇಲ್ಲಿ ಆಡಳಿತ ಸರಿಯಾಗಿ ನಡೆದರೆ ಬೆಳಗಾವಿ, ಉತ್ತರ, ದಕ್ಷಿಣ ಮತ್ತು ಗ್ರಾಮೀಣ ಕ್ಷೇತ್ರದಲ್ಲಿ ಜನ ಬಿಜೆಪಿಗೆ ಭೇಷ್ ಎನ್ನುತ್ತಾರೆ.
ಬಿಜೆಪಿ ಹಿಡಿತದಲ್ಲಿರುವ ಪಾಲಿಕೆಯಲ್ಲಿ ಆಡಳಿತ ವ್ಯವಸ್ಥೆ ಸರಿಯಾಗಿಲ್ಲ ಎಂದರೆ, ಸಹಜವಾಗಿ ಅದು ಪಕ್ಷದ ಮೇಲೆ ದುಷ್ಪರಿಣಾಮ ಬೀರುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಕಳೆದ ಬಾರಿ ಬಿಜೆಪಿ ಪ್ರಥಮ ಮೇಯರ್ ಆಯ್ಕೆ ನಡೆಯಿತು, ಇಲ್ಲಿ ಮೇಯರ್ ಆದವರ ಬಗ್ಗೆ ಯಾರದ್ದೂ ತಕರಾರಿರಲಿಲ್ಲ. ಆದರೆ ಮೇಯರ ಮುಂದಿಟ್ರ್ಟುಕೊಂಡು ಕೆಲವರು ಆಡಿದ ಆಟ ಪಕ್ಷಕ್ಕೆ ಭಾರೀ ಹೊಡೆತ ಕೊಟ್ಟಿತು. ಹೀಗಾಗಿ ಪ್ರಥಮ ಬಿಜೆಪಿ ಮೇಯರ್ ಅವಧಿ ವಿವಾದದಲ್ಲಿಯೇ ಮುಗಿದುಹೋಯಿತು ಎನ್ನುವುದು ಸುಳ್ಳಲ್ಲ.
ಪಾಲಿಕೆಯನ್ನು ಸೂಪರ್ ಸೀಡ್ ಮಾಡಲು ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಏನೆಲ್ಲ ತಂತ್ರಗಾರಿಕೆ ನಡೆಸಿತು ಎನ್ನುವುದು ಗೊತ್ತಿದೆ, ಅಷ್ಟೇ ಅಲ್ಲ ಸೂಪರ್ ಸೀಡ್ ನೋಟೀಸ್ ಕೂಡ ಮೇಯರ್ ಗಮನಕ್ಕೆ ಬಾರದಂತೆ ಮುಚ್ಚಿಡುವ ಕಾಣದ ಕೈಗಳ ಹಿಂದೆ ಯಾರಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿದೆ
,

ಹೀಗಾಗಿ ಮೊದಲ ಮೇಯರ್ ಅವಧಿಯಲ್ಲಿ ಏನೆಲ್ಲ ರಂಪಾಟಗಳು ನಡಟೆದವು ಅವು ಈ ಬಾರಿ ಆಗದಂತೆ ನೋಡಿಕೊಂಡು ಮುನ್ನಡೆಯುವ ಮೇಯರ್ ಆಯ್ಕೆ ಮಾಡಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆಂದು ಗೊತ್ತಾಗಿದೆ,

ಕನ್ನಡತಿ ಮೇಯರ್. ಮರಾಠಾ ಉಪಮೇಯರ್..!
ಮೇಯರ್ ಸ್ಥಾನಕ್ಕೆ ಬೆಳಗಾವಿ ಉತ್ತರ ಕ್ಷೇತ್ರದ ಸವಿತಾ ಕಾಂಬಳೆ ಮತ್ತು ಲಕ್ಷ್ಮೀ ರಾಠೋಡ ಇಬ್ಬರೇ ಅರ್ಹರಾಗಿದ್ದಾರೆ. ಇವರಿಬ್ಬರು ಕನ್ನಡಿಗರು ಮತ್ತು ಬಿಜೆಪಿಯವರು ಎನ್ನುವುದು ವಿಶೇಷ.


ಹೀಗಾಗಿ ಈ ಇಬ್ಬರಲ್ಲಿ ಯಾರಿಗೆ ಆ ಅದೃಷ್ಟ ಒಲಿಯಲಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಬದಲಾಗಿ ನಾಳೆ ಬೆಳಿಗ್ಗೆ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ಅಲ್ಲಿ ಅಭ್ಯಥರ್ಿ ಯಾರು ಎನ್ನುವುದು ಗೊತ್ತಾಗಲಿದೆ. ಬಹುಶ: ಒಬ್ಬರೇ ನಾಮಪತ್ರ ತುಂಬುವ ಸಾಧ್ಯತೆಗಳು ಹೆಚ್ಚಾಗಿವೆ.

ಇನ್ನುಳಿದಂತೆ ಉಪಮೇಯರ್ ಸ್ಥಾನವು ದಕ್ಷಿಣ ಕ್ಷೇತ್ರದ ಮರಾಠಾ ಸಮುದಾಯಕ್ಕೆ ಸೇರಿದ ಆನಂದ ಚವ್ಹಾಣ ಅವರಿಗೆ ಸಿಗಬಹುದು ಎನ್ನುವ ಮಾತಿದೆ.

ಆಡಳಿತ ಪಕ್ಷದ ನಾಯಕ ಯಾರು?

ಇದೆಲ್ಲದರ ನಡುವೆ ಪಾಲಿಕೆಯ ಆಡಳಿತ ಪಕ್ಷದ ನಾಯಕ ಯಾರಾಗ್ತಾರೆ ಎನ್ನುವ ಪ್ರಶ್ನೆ ಕೂಡ ಕೇಳಿ ಬರುತ್ತಿದೆ, ಕಳೆದ ಬಾರಿ ಬೆಳಗಾವಿ ಉತ್ತರ ಕ್ಷೇತ್ರದ ರಾಜಶೇಖರ ಡೋಣಿ ಆಡಳಿತ ಪಕ್ಷದ ನಾಯಕರಾಗಿದ್ದರು, ಈಗ ಅದು ಬೆಳಗಾವಿ ದಕ್ಷಿಣ ಕ್ಷೇತ್ರಕ್ಕೆ ಬರಬೇಕು,
ಈಗ ಆ ನಾಯಕನ ಸ್ಥಾನಕ್ಕೆ ಎರಡು ಹೆಸರು ಪ್ರಮುಖವಾಗಿ ಕೇಳಿ ಬರುತ್ತಿವೆ, ಅದರಲ್ಲಿ ಬೆಳಗಾವಿ ಉತ್ತರ ಕ್ಷೇತ್ರದ ಹನುಮಂತ ಕೊಂಗಾಲಿ ಮತ್ತು ಬೆಳಗಾವಿ ದಕ್ಷಿಣ ಕ್ಷೇತ್ರದ ಗಿರೀಶ ಧೋಂಗಡಿ ಹೆಸರು ಮುನ್ನೆಲೆಗೆ ಬಂದಿದೆ.


ಹನುಮಂತ ಕೊಂಗಾಲಿ ನ್ಯಾಯವಾದಿ ಆಗಿರುವುದರಿಂದ ಅನೇಕ ಜಟಿಲ ಸಮಸ್ಯೆಗಳ ಬಗ್ಗೆ ಪಾಲಿಕೆಯಲ್ಲಿ ಸಮರ್ಥ ವಾದ ಮಂಡಿಸಿದ್ದಾರೆ, ಈಗ ಅವರನ್ನು ಅವರನ್ನು ಬೂಡಾಕ್ಕೆ ನಾಮನಿದರ್ೇಶಿತ ಸದಸ್ಯರನ್ನಾಗಿ ನೇಮಕ ಸಹ ಮಾಡಲಾಗಿದೆ,
ಇನ್ನು ಗಿರೀಶ ಧೋಂಗಡಿ ಅವರು ಕನ್ನಡ ಮತ್ತು ಮರಾಠಿ ಬಲ್ಲವರು, ಎರಡನೇ ಅವಧಿಗೆ ನಗರ ಸೇವಕರು. ಅಷ್ಟೇ ಅಲ್ಲ ಪಕ್ಕಾ ಬಿಜೆಪಿ ನಿಷ್ಠರು, ಹೀಗಾಗಿ ಇವರಿಗೆ ನಾಯಕ ಪಟ್ಟ ಸಿಗಬೇಕು ಎನ್ನುವುದು ಬಹುತೇಕರ ಅಭಿಪ್ರಾಯ.

Leave a Reply

Your email address will not be published. Required fields are marked *

error: Content is protected !!