E belagavi ವರದಿ ಎಫೆಕ್ಟ್..! ಕಲಾವಿದೆಗೆ ಸಿಕ್ಕ ನ್ಯಾಯ

ಬಿಸಿ ಮುಟ್ಟಿಸಿದ E belagavi.com ವರದಿ

ಕಲಾವಿದೆಗೆ ನ್ಯಾಯ ಒದಗಿಸಿದ ಇ ಬೆಳಗಾವಿ. ಕಾಮ್
ಬೆಳಗಾವಿ.

ಕನ್ನಡ ನಾಡು ನುಡಿಯ ವಿಷಯ ಬಂದಾಗ ನಿಮ್ಮ E belagavi.com ಇಟ್ಟ ಹೆಜ್ಜೆ ಹಿಂದಿಟ್ಟಿಲ್ಲ. ಇಡುವುದೂ ಇಲ್ಲ. ಇದರ ಜೊತೆಗೆ ಅನ್ಯಾಯ ಅಂತ ನಮ್ಮ ಕಡೆಗೆ ಬಂದಾಗ ಯಾರ ಮುಲಾಜಿಗೆ ಒಳಗಾಗಿಲ್ಲ. ಎಷ್ಟೇ ಒತ್ತಡ, ಬೆದರಿಕೆಗಳು ಬಂದರೂ ಅದಕ್ಕೆ ಬಗ್ಗದೆ ಮುನ್ನಡೆದ ಕೀರ್ತಿ ನಿಮ್ಮ e belagavi ಗೆ ಇದೆ.

ಕಳೆದ ದಿ. 16 ರಂದು ಕನ್ನಡ ನಾಟಕ ಪ್ರದರ್ಶನದ ಪ್ರಚಾರಕ್ಕೆ ಬೆಳಗಾವಿಯ ಡಿಸಿಪಿ ಜಗದೀಶ ರೋಹನ ಅವರು ಅನಗತ್ಯ ಅಡ್ಡಿ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕಿತ್ತು.

ಇಲ್ಲಿ ಕಲಾವಿದರು ಧ್ವನಿ ವರ್ಧಕದ ಮೂಲಕ ಪ್ರಚಾರಕ್ಕೆ ತಗಲುವ. ಶುಲ್ಕವನ್ನು ಬೆಳಗಾವಿ ಒನ್ ಕೇಂದ್ರದಲ್ಲಿ ಕಳೆದ ದಿ.‌12 ರಂದೇ ಪಾವತಿ ಮಾಡಿದ್ದರು. ಆದರೂ ಡಿಸಿಪಿಯವರು ಆಟೋ ಮೂಲಕ ಪ್ರದರ್ಶನಕ್ಕೆ ಕಿರಿಕ್ ನಡೆಸಿದ್ದರು.

ಈ ಸಂಗತಿ ಗೊತ್ತಾದ ಕೂಡಲೇ ಈ ಬೆಳಗಾವಿ ಕಲಾವಿದರನ್ಬು ಮಾತಾಡಿಸಿ ವರದಿ ಪ್ರಕಟಿಸಿತ್ತು. ವರದಿ ಪ್ರಕಟವಾಗುತ್ತಿದ್ದಂತೆಯೇ ಡಿಸಿಪಿಯವರು ಅನುಮತಿ ಪತ್ರಕ್ಕೆ ಸಹಿ ಮಾಡಿದರು.

ನಾಟಕ ಪ್ರದರ್ಶನ ಏತಕ್ಕಾಗಿ?

ದಾವಣಗೆರೆಯ ವಸಂತ ಕಲಾ ನಾಟ್ಯ ಸಂಘದವರು ಬೆಳಗಾವಿಯಲ್ಲಿ ಇದೇ ದಿ, 18 ರಂದು ಭಾರತಿ
ದಾವಣಗೆರೆ ಇವರ ಮಗಳ ಮುದವೆ ಸಹಾಯಾರ್ಥ ನಾಟಕ ಪ್ರದರ್ಶನ ಇಟ್ಟುಕೊಂಡಿದ್ದಾರೆ

ಕಲಾವಿದೆ ಭಾರತಿ ಅವರು ತಮ್ಮ‌ ಮಗಳ ಮುದುವೆ ಸಹಾಯಾರ್ಥ ಈ ನಾಟಕ ಪ್ರದರ್ಶನ ಇಟ್ಟುಕೊಂಡಿದ್ದಾರೆ

`

Leave a Reply

Your email address will not be published. Required fields are marked *

error: Content is protected !!