ಕುಡಿಯುವ ನೀರಿನ ಸಮಸ್ಯೆ
`ಅಧಿಕಾರಿಗಳ ಬೆವರಿಳಿಸಿದ ನಗರಸೇವಕರು‘
ಬೆಳಗಾವಿ.
ಕುಡಿಯುವ ನೀರಿನ ಸಮಸ್ಯೆ ಕುರಿತ ಚಚರ್ೆಯಲ್ಲಿ ನಗರಸೇವಕರು ಪಕ್ಷ ಬೇಧ ಮರೆತು ಬೆಳಗಾವಿಗೆ ನೀರು ಪೂರೈಸುವ ಎಲ್ ಆ್ಯಂಡ್ ಟಿ ಕಂಪನಿ ಅಧಿಕಾರಿಗಳನ್ನು ತೀವೃವಾಗಿ ತೆಗೆದುಕೊಂಡರು,

ಮಹಾನಗರ ಪಾಲಿಕೆಯ ಪರಿಷತ್ ಸಭಾಗ್ರಹದಲ್ಲಿ ಕುಡಿಯುವ ನೀರಿನ ಬಗ್ಗೆ ಕರೆಯಲಾದ ವಿಶೇಷ ಸಭೆಯಲ್ಲಿ ಸದಸ್ಯರು ಅಧಿಕಾರಿಗಳ ವಿರುದ್ಧ ಗರಂ ಆದರು, ಅಷ್ಟೇ ಅಲ್ಲ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎನ್ನುವುದು ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸದಸ್ಯರು ಅಧಿಕಾರಿಗಳನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು,

ನೀರು ಪೂರೈಕೆ ಮಾಡುವ ಅಧಿಕಾರಿಗಳು ಜೂನ್ ಹೊತ್ತಿಗೆ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನಷ್ಟು ಭೀಕರ ಆಗಬಹುದು, ಆದ್ದರಿಂದ ಈಗ ನಾಲ್ಕು ದಿನಕ್ಕೆ ಪೂರೈಸಲಾಗುತ್ತಿರುವ ಅವಧಿಯನ್ನು ಹೆಚ್ಚಿಗೆ ಮಾಡಬೇಕಾಗುತ್ತದೆ ಎಂದು ಹೇಳಿದರು,
ಈ ಹಿನ್ನೆಲೆಯಲ್ಲಿ ಅಂತಹ ಪರಿಸ್ಥಿತಿ ತಲೆದೋರಿದಲ್ಲಿ ಪ್ರತಿಯೊಂದು ವಾರ್ಡಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹೇಳಿದರು,
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಹಳ ಹೊತ್ತು ನಡೆದ ಸಭೆಯಲ್ಲಿ ಸದಸ್ಯರು ಕೇಳಿದ ಬಹುತೇಕ ಪ್ರಶ್ನೆಗಳಿಗೆ ಅಧಿಕಾರಿಗಳು ನಿರುತ್ತರವಾದರು.
ಹನುಮಂತ ಕೊಂಗಾಲಿ, ಗಿರೀಶ ಧೋಂಗಡಿ, ಸಂತೋಷ ಪೇಡ್ನೇಕರ, ನಿತಿನ್ ಜಾಧವ, ರಾಜು ಭಾತಖಾಂಡೆ, ಮುಜಮಿಲ್ ಡೋಣಿ, ಅಜೀಮ ಪಟವೇಗಾರ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು