ಬೆಳಗಾವಿ. ಅದ್ಯಾಕೊ ಬೆಳಗಾವಿ ವಿಷಯದಲ್ಲಿ ಪ್ರತಿ ಬಾರಿ ಹೀಗೇಕಾಗುತ್ತದೆ? ಒಂದೇ ಒಂದು ಕೆಲಸ ಸುರಳಿತ ಆಯಿತು ಅನ್ನೊ ಹಾಗಿಲ್ಲ. ಪ್ರತಿ ಬಾರಿ ಟೆನ್ಶನ್ ಟೆನ್ಶನ್ ಟೆನ್ಶನ್..!


ಸಿಂಪಲ್ ಆಗಿ ಹೇಳಬೇಕೆಂದರೆ, ಬಿಜೆಪಿ ರಾಜ್ಯದ28 ಕ್ಷೇತ್ರಗಳ ಪೈಕಿ ಬಹುತೇಕ ಕ್ಷೇತ್ರಕ್ಕೆ ಅಭ್ಯರ್ಥಿ ಗಳ ಹೆಸರನ್ನು ಅಂತಿಮಗೊಳಿಸಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಘೋಷಿಸಿ ಬೆಳಗಾವಿಯನ್ನು ಮಾತ್ರಕೈ ಬಿಟ್ಟಿದೆ. ಕಳೆದ ದಿನ ಬಿಜೆಪಿ ಪಟ್ಟಿ ಹೊರಬಂದ ತಕ್ಷಣ ಬಹುತೇಕರು ಅದನ್ನು ಮೇಲಿಂದ ಕೆಳಗೆ, ಕೆಳಗಿಂದ ಮೇಲೆಕಣ್ಣು ಬಿಟ್ಟು ನೋಡಿದ್ದೇ ನೋಡಿದ್ದು.
ಹೀಗಾಗಿ ಬೆಳಗಾವಿ ಕ್ಷೇತ್ರದ ಬಿಜೆಪಿ ಆಕಾಂಕ್ಷಿಗಳಲ್ಲಿ ಒಂದು ರೀತಿಯ ಆತಂಕ ಮುಂದುವರೆದಂತಾಗಿದೆ.
ಇವರಲ್ಲಿ ಯಾರು?





ಅಂಗಡಿ ಕುಟುಂಬದ ಮೂಲಗಳ ಪ್ರಕಾರ ಶೃದ್ಧಾ ಶೆಟ್ಟರಗೆ ಟಿಕೆಟ್ ಫಿಕ್ಸ್ ಅಂತೆ. ಮತ್ತೊಂದು ಮೂಲಗಳ. ಪ್ರಕಾರ ಈ ಬಾರಿ ಬೆಗಾವಿಗೆ ಪಂಚಮಸಾಲಿಯವರಿಗೆ ಟಿಕೆಟ್ ಕೊಡುತ್ತಾರಂತೆ. ಅದರಲ್ಲಿ ಮುರುಗೇಶ ನಿರಾಣಿ ಅಥವಾ ಮಾಜಿ ಸಂಸದ ರಮೇಶ ಕತ್ತಿಬಹೆಸರು ಕೇಳಿ ಬರುತ್ತಿದೆ. ಚಿಕ್ಕೋಡಿಗೆ ನಿರೀಕ್ಷೆಯಂತೆ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆಗೆ ಬಿಜೆಪಿ ಮಣೆ ಹಾಕಿದೆ.


ಇನ್ನು ಕಾಂಗ್ರೆಸ್ ನಲ್ಲಿ ಕೂಡ ಈಗಿನಿಂದಲೇ ಅಸಮಾಧಾನದ ಮಾತುಗಳು ಕೇಳಿ ಬರುತ್ತಿವೆ
ಆರಂಭದಲ್ಲಿ ಅವರಿಗೆ ಟಿಕೆಟ್ ಫಿಕ್ಸ್ ಎನ್ನುತ್ತಿದ್ದ ಜಿಲ್ಲೆಯ ಇಬ್ಬರು ಸಚಿವರು ಮತ್ತೇ ತಮ್ಮ ಮಕ್ಕಳಿಗೆ ಟಿಕೆಟ್ ಕೊಡಿಸುತ್ತಿರುವುದು ಇದಕ್ಕೆ ಕಾರಣ. ಅಂದರೆ ಇಲ್ಲಿ ಕಾರ್ಯಕರ್ತರು ಬರೀ ಫ್ಲೆಕ್ಸ್ ಹಚ್ಚಲು ಧಿಕ್ಕಾರಾ, ಜೈಕಾರ ಹಾಕಲು ಮಾತ್ರ ಸಿಮೀತನಾ ಎನ್ನುವ ಮಾತುಗಳು ಕೇಳಿ ಬರುತ್ತವೆ.