ಬೆಳಗಾವಿ. ಬೆಳಗಾವಿ ಲೋಕಸಮರಕ್ಕೆ ಬಿಜೆಪಿಯಿಂದ ಜಗದೀಶ ಶೆಟ್ಟರ್ ಹೆಸರು ಅಂತಿಮ ಆಗುತ್ತದೆ ಎನ್ನುವ ಬೆನ್ನ ಹಿಂದೆಯೇ ಹತ್ತು ಹಲವು ಪೋಸ್ಟಗಖು ಪರೋಕ್ಗವಾಗಿ ಶೆಟ್ಟರ ವಿರುದ್ಞವೇ ಕಾಣ ಸಿಗುತ್ತಿವೆ
ಸಾಮಾಜಿಕ ಜಾಲತಾಣದ ಮೂಲಕ ಶೆಟ್ಟರ್ ವಿರುದ್ಧ ಅಭಿಯಾನ ಶುರುವಾಗಿದೆ. ಒಂದು ರೀತಿಯಲ್ಲಿ ಶೆಟ್ಟರ್ ವಿರುದ್ಧ ಬೆಳಗಾವಿ ಬಿಜೆಪಿಗರು ಕೊತ ಕೊತ ಕುದಿಯತೊಡಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಗೋಕಾಕದ ಮಲ್ಲಿಕಾರ್ಜುನ ಚೌಕಾಶಿ ಅವರು ಇಂತಹ ಹತ್ತು ಪ್ರಶ್ನೆಗಳನ್ನು ಮಾಡಿದ್ದಾರೆ. ಆದರೆ ಅವರು ಎಲ್ಲಿಯೂ ಜಗದೀಶ್ ಶೆಟ್ಟರ ಹೆಸರು ಉಲ್ಲೇಖ ಮಾಡಿಲ್ಲ. ಆದರೆ ಅವರ ಬೊಟ್ಟು ಮಾತ್ರ ಶೆಟ್ಡರ್ ಅವರತ್ತ ಇವೆ ಎನ್ನುವುದು ಗೊತ್ತಾಗುತ್ತದೆ.

ಏನೇನು ಬರ್ತಿದೆ ಪೋಸ್ಟ ಗೊತ್ತಾ?
ಆಗಿನ ಮುಖ್ಯಮಂತ್ರಿ ಬಸವರಾಜ ಬೋಮ್ಮಾಯಿಯವರ ಬಿಯಾಂಡ್ ಬೆಂಗಳೂರು ಕಾರ್ಯಕ್ರಮವನ್ನು ಉತ್ತರ ಕರ್ನಾಟಕದ ತುಂಬ ವಿಸ್ತಾರ ಆಗುವುದನ್ನು ತಡೆದು ಹುಬ್ಬಳ್ಳಿಗೆ ಸೀಮಿತ ಮಾಡಿದ್ದ ಮಹಾನುಭಾವರು ಯಾರು?
2019 ರಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಉದ್ಯೋಗ ಸೃಷ್ಟಿಸಲು ಉಧ್ಯಮಗಳ ಸ್ಥಾಪನೆಗಾಗಿ ಬೆಳಗಾವಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದ ಇನವೆಸ್ಟ್ ಕರ್ನಾಟಕ ಕಾರ್ಯಕ್ರಮವನ್ನು ಹುಬ್ಬಳ್ಳಿಗೆ ಸ್ಥಳಾಂತರಿಸಿದ್ದು ಯಾರು?
ಕೊರೊನಾ ಸಮಯದಲ್ಲಿ ಬೆಳಗಾವಿಯಲ್ಲಿ ಇನ್ನೂ ಲ್ಯಾಬ್ ಆರಂಭವಾಗದಿದ್ದ ಸಮಯದಲ್ಲಿ ಇಲ್ಲಿನ ಸ್ಯಾಂಪಲ್ ಗಳನ್ನ ಪರೀಕ್ಷೆಗಾಗಿ ಹುಬ್ಬಳ್ಳಿಗೆ ಕಳುಹಿಸುವುದನ್ನು ವಿರೋಧಿಸಿ ನಮ್ಮವೆ ಸಾಕಷ್ಟು ಇರುವಾಗ ಬೆಳಗಾವಿ ಸ್ಯಾಂಪಲ್ ಬೇಡ ಎಂದು ತಡೆದವರಾರು?
ಬೆಳಗಾವಿಯ ಬಿಮ್ಸ್ ವೈದ್ಯಕೀಯ ಕಾಲೇಜಿಗೆ ಮಂಜೂರಾದ ವೈರಾಲಾಜಿ ಲ್ಯಾಬ್ ಹುಬ್ಬಳ್ಳಿಯ ಕಿಮ್ಸ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಿ ಕೊಂಡವರಾರು?

ಆಗ ಕೈಗಾರಿಕಾ ಸಚಿವರಾಗಿದ್ದ ಮುರುಗೇಶ ನಿರಾಣಿಯವರು ಕಿತ್ತೂರು ಬಳಿ ಅಂತರಾಷ್ಟ್ರೀಯ ಕಾರ್ಗೋ ವಿಮಾನ ನಿಲ್ದಾಣ ಮಾಡತಿವಿ ಅಂದಾಗ ಅದನ್ನ ವಿರೋಧಿಸಿ ಅದೆ ಹಣವನ್ನು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ನೀಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಿ ಅಂದೊರ್ಯಾರು?
ಧಾರವಾಡದ ಶ್ರೀನಗರದಲ್ಲಿ ತಿಂಗಳಿಗೆ ಸುಮಾರು 3.5 ಲಕ್ಷ ಬಾಡಿಗೆ ನೀಡುತ್ತಿದ್ದ ಅದು ಕೂಡ ರೈತರಿಗೆ ನೇರವಾಗಿ ಸಂಪರ್ಕಕ್ಕೆ ಬರದೆ ಇರುವ ಕರ್ನಾಟಕ ನೀರಾವರಿ ನಿಗಮದ ಕಛೇರಿಯನ್ನು ಆಗಿನ ನೀರಾವರಿ ಸಚಿವ ರಮೇಶ ಜಾರಕಿಹೊಳಿಯವರು ಸುವರ್ಣ ಸೌಧಕ್ಕೆ ವರ್ಗಾಯಿಸಿ ಆದೇಶ ಮಾಡಿದಾಗ ಅದನ್ನು ರದ್ದು ಮಾಡಿ ಧಾರವಾಡದಲ್ಲೆ ಮುಂದುವರೆಯುವಂತೆ ಮಾಡಿದ್ದು ಯಾರು?
ಅರಣ್ಯ ಇಲಾಖೆಯು ರಾಜ್ಯ ಮಟ್ಟದ ತನ್ನ ವಿವಿಧ ಕಛೇರಿಗಳನ್ನು ಬೆಂಗಳೂರಿನಿಂದ ಆಚೆಗೆ ಸ್ಥಳಾಂತರಿಸಲು ನಿರ್ಧರಿಸಿದಾಗ ಸುವರ್ಣಸೌಧ ಖಾಲಿ ಇದ್ದರು ತುಟ್ಟಿ ಬಾಡಿಗೆ ನೀಡಲು ತಯಾರಾಗಿ ಹುಬ್ಬಳ್ಳಿಗೆ ಎರಡು ಧಾರವಾಡಕ್ಕೆ ಒಂದು ಕಛೇರಿ ಸ್ಥಳಾಂತರವಾದದ ಆದೇಶದ ಹಿಂದೆ ಯಾರ ಕೈವಾಡವಿದೆ?
ಈ ವ್ಯಕ್ತಿ ಯಾರು? ಬೆಳಗಾವಿ ಉಸ್ತುವಾರಿ ಸಚಿವರಾಗಿ ಈ ಜಿಲ್ಲೆಗೆ ನ್ಯಾಯ ಒದಗಿಸದೆ ತಮ್ಮ ಮೂಲ ಊರಿನ ಅಭಿವೃದ್ಧಿಗೆ ಬೆಳಗಾವಿಯನ್ನ ಬಲಿಪಶು ಮಾಡಿದವರು ಯಾರು?