ಈ ಮಾತು ಬೇಕಿತ್ತಾ ಶೆಟ್ರೆ…!

ಇನ್ನು ಅವರು ನಮ್ಮಂತಹ ಸಾದಾ 8 ಜನರ ಬಳಿ ಬರೋದೇ ಬೇಡ.
16 ಲಕ್ಷ ಮತದಾರರ ಬಳಿ ಹೋಗಲಿ.
ಶೆಟ್ಟರ್ ಪರ ಪ್ರಚಾರಕ್ಕೆ ಬಿಜೆಪಿ ಕಾರ್ಯಕರ್ತರ ಹಿಂದೇಟು

ಬೆಳಗಾವಿ ಬಿಜೆಪಿಗರಿಗೆ ಆಡಿದ ಮಾತು ಸರಿಯಲ್ಲ.

ಸುದ್ದಿ ವಿಶ್ಲೇಷಣೆ
ಬೆಳಗಾವಿ.
ಲೋಕಸಮದರಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಾಗಿದ್ದ ರಾಜಕೀಯ ಮುತ್ಸದ್ದಿ ಎನಿಸಿಕೊಂಡ ಮಾಜಿ ಮುಖ್ಯಮಂತ್ರಿ ಹುಬ್ಬಳ್ಳಿಯ ಜಗದೀಶ ಶೆಟ್ಟರ್ ಆಡಿದ `ಆ ಮಾತು’ ಬೆಳಗಾವಿ ಬಿಜೆಪಿ ವಲಯದಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ,
ಸಹಜವಾಗಿ ಬೆಳಗಾವಿ ಲೋಕಸಭೆ ಕ್ಷೇತ್ರದ ಚುನಾವಣೆ ಎಂದಾಗ ಸ್ಥಳೀಕರಿಗೆ ಟಿಕೆಟ್ ಕೊಡಿ ಎಂದು ಕೇಳುವುದು ತಪ್ಪಲ್ಲ. ಇಲ್ಲಿ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡಿದ್ದರೆ ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ. ಅವರನ್ನು ಹೊರತುಪಡಿಸಿ ಸಮರ್ಥರು ಎನ್ನುವಂತಹ ಅಭ್ಯರ್ಥಿಗಳು ಈ ಕ್ಷೇತ್ರದಲ್ಲಿದ್ದಾರೆ.
ಅದರಲ್ಲಿ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಅನಿಲ ಬೆನಕೆ, ಮಾಜಿ ಸಂಸದ ರಮೇಶ ಕತ್ತಿ ಸೇರಿದಂತೆ ಹಾಲಿ ಸಂಸದೆ ಮಂಗಲಾ ಅಂಗಡಿ ಅವರು ಟಿಕೆಟ್ಗೆ ಪ್ರಯತ್ನ ನಡೆಸಿದ್ದರು,


ಇಲ್ಲಿ ಇವರಲ್ಲೊಬ್ಬರಿಗೆ ಟಿಕೆಟ್ ಕೊಟ್ಟಿದ್ದರೆ ಖಂಡಿತವಾಗಿ ಫಲಿತಾಂಶ ಹೀಗೇ ಬರುತ್ತದೆ ಎಂದು ಹೇಳಬಹುದಿತ್ತು, ಆದರೆ ಈಗ ಪರಿಸ್ಥಿತಿ ಹಾಗಿಲ್ಲ.
ಮೇಲಾಗಿ ಟಿಕೆಟ್ ಬೆಳಗಾವಿಗರ ಕೈತಪ್ಪಿ ಹುಬ್ಬಳ್ಳಿಯವರ ಪಾಲಾಗುತ್ತಿದೆ ಎನ್ನುವ ತೀವೃ ಅಸಮಾಧಾನ ಎಲ್ಲರಲ್ಲಿದೆ.

ಹೀಗಾಗಿ‌ ಬಿಜೆಪಿಗರಿಂದ ಅದೆಲ್ಲಾ ಓಕೆ ಶೆಟ್ಟರ್ ಯಾಕೆ? ಎನ್ನುವ ಮಾತುಗಳು ಕೇಳಿ ಬರಲಾರಂಭಿಸಿವೆ

ಇಲ್ಲಿ ಅದೇನೇ ಆಗಲಿ, ಸಂಭವನೀಯ ಅಭ್ಯರ್ಥಿ ಎನ್ನಲಾದ ಜಗದೀಶ ಶೆಟ್ಟರ್ ಅವರು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಬೆಳಗಾವಿಗರಿಗೆ ಟಿಕೆಟ್ ಕೊಡಿ ಎನ್ನುವ ಪ್ರಸ್ತಾಪವಿಟ್ಟ ಪಕ್ಷದ ಗಣ್ಯರ ಬಗ್ಗೆ ಆಡಿದ ಮಾತು ಈಗ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಬಹುದು ಎನ್ನುವುದನ್ನು ಊಹಿಸಲು ಆಗದು,

ಶೆಟ್ಟರ್ ಮಾತು ಎಂಥಹುಗಿತ್ತು ಗೊತ್ತಾ?
ನುರಿತ ರಾಜಕಾರಣಿ ಎಂದೇ ಹೆಸರಾದ ಜಗದೀಶ ಶೆಟ್ಟರ್ ಅವರು ಚುನಾವಣೆ ಹೊಸ್ತಿಲಲ್ಲಿರುವಾಗ ಬೆಳಗಾವಿ ಪಕ್ಷದ ಮುಖಂರ ಬಗ್ಗೆ ಅಷ್ಟೊಂದು ಹಗುರವಾದ ಮಾತುಗಳನ್ನು ಆಡಿ ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡರು ಎಂದು ಬಿಜೆಪಿ ವಲಯದಲ್ಲಿ ಅಥರ್ೈಸಲಾಗುತ್ತಿದೆ.

ಕಳೆದ ದಿನ ಅಲ್ಲಿ (ಕೋರೆ ಮನೆಯಲ್ಲಿ) ಸೇರಿದ್ದವರು 8 ರಿಂದ 10 ಜನ ಸೇರಿದ್ದರು, ಆದರೆ ಕ್ಷೇತ್ರದಲ್ಲಿ 16 ರಿಂದ 17 ಲಕ್ಷ ಮತದಾರರಿದ್ದಾರೆ ಎನ್ನುವ ಮೂಲಕ “ಇವರೇನ್ ಮಹಾ ” ಎನ್ನುವ ಅರ್ಥ ಬರುವ ಹಾಗೆ ಮಾತನಾಡಿದ್ದರು, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು,

ಬೆಳಗಾವಿ ಆ ಏಳೆಂಟು ಜನ ಎಂತಹವರು ಗೊತ್ತೆ?
ಇಲ್ಲಿ ಶೆಟ್ಟರ್ ಮಾತುಗಳು ಬೇರೆ ಪಕ್ಷದಿಂದ ವಲಸೆ ಬಂದವರಿಗೆ ಆಗಿದ್ದರೆ ಯಾರೂ ಅಷ್ಟೊಂದು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಶೆಟ್ಟರ್ ಮಾತುಗಳು ಪಕ್ಷದ ನಿಷ್ಠಾವಂತರಿಗೆ ಆಗಿದ್ದರಿಂದ ಎಲ್ಲರ ಮನಸ್ಸಿಗೂ ಘಾಸಿಯಾಗಿದ್ದಂತೂ ಸುಳ್ಳಲ್ಲ.

ಪ್ರಭಾಕರ ಕೋರೆ..


ಬೆಳಗಾವಿ ಜಿಲ್ಲೆ ಅಷ್ಟೇ ಅಲ್ಲ ರಾಜ್ಯ ಮತ್ತು ದೆಹಲಿ ಮಟ್ಟದ ರಾಜಕೀಯದಲ್ಲಿ ಗತ್ತು ಗೈರತ್ತು ಉಳಿಸಿಕೊಂಡವರು, ಕೆಎಲ್ಇ ಸಂಸ್ಥೆಯ ಮೂಲಕ ವೈದ್ಯಕೀಯ, ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿದ್ದಕ್ಕಾಗಿ ಬಿಜೆಪಿ ಅವನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡಿತ್ತು,
ಅಷ್ಟೊಂದು ಪ್ರಭಾವಿ ಎನಿಸಿಕೊಂಡ ಅವರು ಈಗ ಎಲ್ಲಿಯೂ ತಮಗೆ ಟಿಕೆಟ್ ಬೇಕು ಎಂದು ಲಾಬಿ ಮಾಡಲಿಲ್ಲ. ಆದರೆ ಚಿಕ್ಕೋಡಿಯಲ್ಲಿ ತಮ್ಮ ಪುತ್ರನಿಗೆ ಟಿಕೆಟ್ ಕೊಡಿ ಎಂದು ಒಂದು ಸಲ ಕೇಳಿದರೆ ಹೊರತು ಅದಕ್ಕಾಗಿ ಎಲ್ಲಿಯೂ ಹೋಗಲಿಲ್ಲ. ಅಷ್ಟೇ ಏಕೆ ಚಿಕ್ಕೋಡಿಯಲ್ಲಿ ಅಣ್ಣಾಸಾಹೇಬ ಜೊಲ್ಲೆಗೆ ಟಿಕೆಟ್ ಘೋಷಣೆಯಾದಾಗ ಪಕ್ಷದ ನಾಯಕರ ವಿರುದ್ಧ ಮಾತನಾಡಲಿಲ್ಲ.

‘ಆದರೆ ಅಂತಹ ಪ್ರಭುದ್ಧ ನಾಯಕ ಎನಿಸಿಕೊಂಡ ಪ್ರಭಾಕರ ಕೋರೆ ವಿರುದ್ಧ ಶೆಟ್ಟೆರ್ ನಿನ್ನೆ ಏನು ಮಾತನಾಡಿದರು ಎನ್ನುವುದನ್ನು ಅವರ ಪಕ್ಷದವರೇ ಅನೌಪಚಾರಿಕವಾಗಿ ಬಿಚ್ಚಿಡುತ್ತಿದ್ದಾರೆ,

ಅಭಯ ಪಾಟೀಲ..

ಈ ಹಿಂದೆ ಎಂಎಲ್ಎ ಚುನಾವಣೆಯಲ್ಲಿ ಆಗಿನ ಸಂಸದ ಸುರೇಶ ಅಂಗಡಿಯವರು ಅಭಯ ಪಾಟೀಲರ ಟಿಕೆಟ್ ತಪ್ಪಿಸಲು ಯತ್ನಿಸಿದ್ದರು, ಆದರೆ ಕೊನೆಗೆ ಟಿಕೆಟ್ ಸಿಕ್ಕಿತು, ಗೆದ್ದು ಬಿಟ್ಟರು,

ಆದರೆ ನಂತರ ಬಂದ ಲೋಕಸಭೆ ಚುನಾವಣೆಯಲ್ಲಿ ಅದೇ ಸುರೇಶ ಅಂಗಡಿ ಅಭ್ಯರ್ಥಿ ಯಾಗಿದ್ದಾಗ ಅಭಯ ಪಾಟೀಲರು ತಮ್ಮ ದಕ್ಷಿಣ ಕ್ಷೇತ್ರದಿಂದಿ ಹೆಚ್ಚಿನ ಮತಗಳು ಬರುವ ಹಾಗೆ ಮಾಡಿದ್ದರು, ಅಂದರೆ ಇಲ್ಲಿ ಅಭಯ ಪಾಟೀಲರ ಪಕ್ಷ ನಿಷ್ಠೆ ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಬರುವಂತೆ ಮಾಡಿದ ಅಭಯ ಪಾಟೀಲರು ಕೂಡ ಆಎಂಟು ಜನರ ಪಟ್ಟಿಯಲ್ಲಿ ಬರುತ್ತಾರೆ.

ಈರಣ್ಣ ಕಡಾಡಿ…

ಚಹಾ ಅಂಗಡಿಯಲ್ಲಿ ಕುಳಿತುಕೊಂಡು ಪಕ್ಷದ ಪರ ಕೆಲಸ ಮಾಡುತ್ತ ಹಳ್ಳಿಯಿಂದ ದೆಹಲಿ ತಲುಪಿದವರಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒಬ್ಬರು, ಸಕ್ರೀಯ ರಾಜಕಾರಣದಲ್ಲಿದ್ದರೂ ತೂಕದ ಮಾತುಗಳ ಮೂಲಕ ಎಲ್ಲರ ಮನಸ್ಸು ಗೆದ್ದವರಲ್ಲಿ ಒಬ್ಬರು, ಎಷ್ಟೇ ಒತ್ತಡವಿದ್ದರೂ ಯಾರೊಂದಿಗೂ ಮುನಿಸಿಕೊಳ್ಳದೇ ಅಪ್ಪಾ, ಅಣ್ಣಾ ಎಂದೇ ಕರೆಯುವ ಸಂಭಾವಿತ ರಾಜ್ಯಸಭಾ ಸದಸ್ಯ ಕಡಾಡಿ ಅವರೂ ಸಹ ನಿನ್ನೆ 8 ಜನರಲ್ಲಿ ಒಬ್ಬರಾಗಿ ಕೋರೆಯವರ ಮನೆಗೆ ಹೋಗಿದ್ದರು, ಆದರೆ ಶೆಟ್ಟರ್ ಆ ಮಾತುಗಳು ಇವರಿಗೂ ಅನ್ವಯವಾಗುತ್ತವೆ,

ಅನಿಲ ಬೆನಕೆ…!

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿ ಎಂದೇ ಕರೆಯಲಾಗುತ್ತಿರುವ ಅನಿಲ ಬೆನಕೆೆ ಟಿಕೆಟ್ ತಪ್ಪಿದರೂ ತುಟಿಪಿಟಕ್ಕೆನ್ನಲಿಲ್ಲ. ಬದಲಾಗಿ ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸತೊಡಗಿದರು, ಈಗ ಬೆಳಗಾವಿ ಲೋಕಸಭೆ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ಅವರಿಗೆ ಟಿಕೆಟ್ ತಪ್ಪಿದರೂ ಕೂಡ ಯಾವೊಬ್ಬ ನಾಯಕನ ಬಗ್ಗೆ ಅಗ್ಗದಾಗಿ ಮಾತಾಡಲಿಲ್ಲ. ಆದರೆ ಅಂತಹವರ ಬಗ್ಗೆ ಕೂಡ ಶೆಟ್ಟರ್ ಮಾತನಾಡಿದ್ದರು,

ಎಂ.ಬಿ. ಜಿರಲಿ…!


ಬೆಳಗಾವಿಯಲ್ಲಿ ಹಿರಿಯ ವಕೀಲ ಎಂದು ಕರೆಯಲಾಗುತ್ತಿರುವ ಎಂ,ಬಿ ಜಿರಲಿ ಅವರು ಬಿಜೆಪಿಯಲ್ಲಿ ರಾಜ್ಯದ ವಕ್ತಾರರಾಗಿ ಕೆಲಸ ಮಾಡುತ್ತಿದ್ದಾರೆ, ಬಿಜೆಪಿ ಅಧಿಕಾರವಿದ್ದಾಗಲೂ ಕೂಡ ಯಾವುದೇ ರೀತಿಯ ಅಧಿಕಾರ ಸಿಗದೇ ಇದ್ದರೂ ಪಕ್ಷ ನಿಷ್ಠೆ ಮಾತ್ರ ಎಂದಿಗೂ ಕಡಿಮೆಯಾಗಲಿಲ್ಲ. ಈಗಲೂ ಕೂಡ ಬಿಜೆಪಿಯ ಪ್ರತಿಯೊಂದು ಹೋರಾಟದಲ್ಲಿ ಅವರು ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ.
ಆದರೆ ಮಾಜಿಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಪ್ರಸ್ತಾಪಿಸಿದ ಆ ಏಳೆಂಟು ಜನರಲ್ಲಿ ಇವರೂ ಇದ್ದರು,


Leave a Reply

Your email address will not be published. Required fields are marked *

error: Content is protected !!