ಸಂವಿಧಾನ ಉಳಿಸಿ.ಕಾಂಗ್ರೆಸ್ ಗೆಲ್ಲಿಸಿ..ಸತೀಶ್


ರಾಜ್ಯದಲ್ಲಿ ಕಾಂಗ್ರೆಸ್ 15-20 ಸ್ಥಾನ ಗೆಲ್ಲಲಿದೆ: ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ

Mar, 18 2024Ashok M0
ಬೆಳಗಾವಿ:   ಎಲ್ಲಾ ಸಮುದಾಯದಲ್ಲಿಯೂ ರಾಮ ಇದ್ದಾನೆ,   ನಾವು ಕೂಡ ಚುನಾವಣೆಯ ತಂತ್ರ ಅನುಸರಿಸಿ  ರಾಜ್ಯದಲ್ಲಿ  ಕಾಂಗ್ರೆಸ್ 15-20 ಸ್ಥಾನ ಗೆಲ್ಲುವು ಸಾಧಿಸುತ್ತೆವೆ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಪಕ್ಷಗಳು ತಂತ್ರ ರೂಪಿಸುವುದು ಸರ್ವೇ ಸಾಮಾನ್ಯ, ನಾವು ಕೂಡ  ಚುನಾವಣೆ ವೇಳೆ ಸಂವಿಧಾನ ಉಳಿಸಿ ಕಾಂಗ್ರೆಸ್ ಗೆಲ್ಲಿಸಿ ಎಂದು  ಹೇಳುತ್ತೆವೆ ಎಂದರು.

ಈಗಾಗಲೇ ಚುನಾವಣೆ ತಯಾರಿ ನಡೆದಿದೆ.  ಕಾರ್ಯಕರ್ತರ ಜತೆ  ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ ಅವರವ ಅಭಿಪ್ರಾಯ ಸಂಗ್ರಹ ಕೂಡ ಮಾಡಲಾಗಿದೆ.  ನಾಡಿದ್ದು ಬೆಳಗಾವಿಯಲ್ಲಿ ಸಭೆ ನಡೆಸಲಾಗುವುದು.  ಬಿಜೆಪಿಯಲ್ಲಿ ಭಿನ್ನಮತ ಇರಬಹುದು ಆದರೆ,  ಕಾಂಗ್ರೆಸ್‌ ಬರುವವರು ಯಾರು ಗೋತ್ತಿಲ್ಲ, ನಮ್ಮಿಂದ ಆಹ್ವಾನವಿದೆ ಎಂದರು.

ಮೋದಿ ಅಲೆ ಈ ಬಾರಿ ಕರ್ನಾಟಕದಲ್ಲಿ  ಬೀರಬಹುದಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು,  ಯಾವ ರೀತಿ ಚುನಾವಣೆಯಲ್ಲಿ ತಂತ್ರ ರೂಪಿಸುತ್ತಾರೆ ನೋಡಬೇಕಿದೆ ಯಾಕೆಂದರೆ, ಬಿಜೆಪಿಯಲ್ಲಿ ಮೋದಿ ಹಾಗೂ ಶ್ರೀರಾಮ ಇದ್ದಾನೆ.  ನಾವು ಗ್ಯಾರಂಟಿ ಯೋಜನೆ ನಮಗೆ ಬಲವಾಗಲಿದೆ.  ಬಿಜೆಪಿಗರು ಶ್ರೀರಾಮನನ್ನು  ಹೆಚ್ಚಿಗೆ ಕ್ಯಾಚ್‌ ಮಾಡಿಕೊಂಡಿದ್ದಾರೆ,   ಎರಡು ಪಕ್ಷದಲ್ಲಿ, ಎಲ್ಲಾ ಸಮುದಾಯದಲ್ಲಿಯೂ ರಾಮ ಇದ್ದಾನೆ ಎಂದು ಸಚಿವರು ಹೇಳಿದರು.”

Leave a Reply

Your email address will not be published. Required fields are marked *

error: Content is protected !!