ಪ್ರಚಾರದ ಮೊದಲ ದಿನವೇ ನೀತಿ ಸಂಹಿತೆ ಉಲ್ಲಂಘನೆ ಕೇಸ್.
ಕುವೆಂಪು ನಗರದಲ್ಲಿರುವ ಸಚಿವೆ ಹೆಬ್ಬಾಳಕರ ನಿವಾಸ
ಸಚಿವೆ ಹೆಬ್ಬಾಳಕರ ವಿರುದ್ಧ ಈ ದೂರು. ಶೆಟ್ಟರ್ ವಿರುದ್ಧ ನಿಲ್ಲದ Gobackshetter ಅಭಿಯಾನ
ಬೆಳಗಾವಿ.
ಲೋಕಸಮರಕ್ಕೆ ಸಂಬಂಧಿಸಿದಂತೆ ಇನ್ನೂ ಅಭ್ಯರ್ಥಿಗಳ ಆಯ್ಕೆಯ ಕುರಿತು ಅಂತಿಮ ಘೋಷಣೆಗೂ ಮುನ್ನವೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಒಂದಿಷ್ಡು ಹುಬ್ಬೇರಿಸುವಂತಹ ಘಟನೆಗಳು ನಡೆದಿವೆ.
ಆದರೆ ಚುನಾವಣಾಧಿಕಾರಿಗಳು ಮಾತ್ರ ಯಾರ ಮುಲಾಜಿಗೂ ಒಳಗಾಗದೇ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವ ಕೆಲಸ ಮಾಡಿದ್ದಾರೆ.
ಹಾಗಿದ್ದರೆ ಏನಿವು ಪ್ರಕರಣಗಳು.
ಸಚಿವೆ ವಿರುದ್ಧವೇ ಮೊದಲ ದೂರು..

ಬೆಳಗಾವಿ ಕುವೆಂಪು ನಗರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಇಂದು ಬೆಳಿಗ್ಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಭೆಯನ್ನು ನಡೆಸುತ್ತಿದ್ದರು. ಸುಮಾರು 5೦೦ ಕ್ಕೂ ಹೆಚ್ಚು ಕಾರ್ಯಕರ್ತೆಯರು ಈ ಸಂದರ್ಭದಲ್ಲಿ ಹಾಜರಿದ್ದರು.
ಮೂಲಗಳ ಪ್ರಕಾರ ಹಾಜರಿದ್ದ ಎಲ್ಲರಿಗೂ ತಮ್ಮ ಪುತ್ರ ಮೃನಾಲ್ ಪರ ಪ್ರಚಾರ ಮಾಡಬೇಕೆಂದು ಹೇಳುತ್ತಿದ್ದರು ಎನ್ನುವ ದೂರು ಬಂದ ತಕ್ಷಣ ಜಿಲ್ಲಾ ಚುನಾವಣಾಧಿಕಾರಿಗಳು ಸಭೆ ಸ್ಥಳಕ್ಕೆ ದೌಡಾಯಿಸಿದರು.

ಅಲ್ಲಿ ನಡೆಯುತ್ತಿದ್ದ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದರು. ಅಷ್ಟೆ ಅಲ್ಲ ಸಭೆಗೆ ಬಂದವರನ್ನು ಹೊರಗೆ ಕಳಿಸಿ ಮಾಹಿತಿ ಸಂಗ್ರಹಿಸಿದರು.. ಕೊನೆಗೆ ನೀತಿ ಸಂಹಿತೆ ಉಲ್ಲಂಘಿಸಿದ ಬಗ್ಗೆ ದೂರು ದಾಖಲು ಮಾಡುವುದಾಗಿ ಹೇಳಿದರು.
ಆದರೆ ನಾನು ಯಾವುದೇ ನೀತಿ ಸಙಹಿತೆ ಉಲ್ಲಂಘಿಸಿಲ್ಲ ಎನ್ನುವ ಸ್ಪಷ್ಟನೆಯನ್ನು ತಮ್ಮ ಪಿಎ ಮೂಲಕ ಮಾಧ್ಯಮಗಳಿಗೆ ಸಚಿವರು ರವಾನಿಸಿದ್ದಾರೆ.
ಬೆಳಗಾವಿ ಬಿಟ್ಟಗೆ ಬಿದ್ದೈತಿ

ಇದೆಲ್ಲದರ ಮಧ್ಯೆ ಬಿಜೆಪಿ ಸಂಭವನೀಯ ಅಭ್ಯರ್ಥಿ ಜಗದೀಶ ಶೆಟ್ಟರ್ ವಿರುದ್ಧ ಅಪರಿಚಿತರು ಹಾಕಿದ ಆ ಪೋಸ್ಟರ್ ಎಲ್ಲೆಡೆ ಸದ್ದು ಮಾಡಿದೆ.
ಬರ್ರಿ ಶೆಟ್ರೆ, ಉಂಡು ಹೋಗ್ರಿ, ಬೆಳಗಾವಿ ನಿಮ್ಮಂತಹವರಿಗೆ ಬಿಟ್ಟಿಗೆ ಬಿದ್ದೈತಿ ಎನ್ನುವ ಪೋಸ್ಟರ್ ಎಲ್ಲೆಡೆ ಚರ್ಚೆಯ ವಸ್ತುವಾಗಿತ್ತು. ಬೆಳಗಾವಿ ಸ್ಥಳೀಕರನ್ನು ಬಿಟ್ಟು ಹೊರಗಿನವರಿಗೆ ಟಿಕೆಟ್ ಕೊಡಲು ಮುಂದಾಗಿದ್ದರಿಂದ ಕೆಲ ಬಿಜೆಪಿಗರು ಈ ರೀತಿಯ ಪೋಸ್ಟರ್ ಹಾಕಿರಬಹುದು ಎನ್ನಲಾಗಿತ್ತು.

ಆದರೆ ಈ ರೀತಿಯ ವೈಯಕ್ತಿಕ ತೇಜೋವಧೆಯನ್ನು ಸಹಿಸಲ್ಲ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ. ಅಷ್ಟೇ ಅಲ್ಲ ಬೆಳಗಾವಿ ನಗರ ಅಧ್ಯಕ್ಷರಿಗೆ ಈ ಬಗ್ಗೆ ದೂರು ಕೊಡಲು ಹೇಳಿದ್ದೇನೆ ಎಂದು ಅವರು ತಿಳಿಸಿದರು.