ಲೋಕ ಸಮರ-ಎರಡೂ ಕಡೆಗೆ ಅಸಮಾಧಾನ

ಮಕ್ಕಳಿಗೆ ಜೈ.ಕಾರ್ಯಕರ್ತರಿಗೆ ಕೈ

ಎರಡೂ ಕ್ಷೇತ್ರದಲ್ಲಿ ನಡೆಯಲಿದೆ ಜಿದ್ದಾ ಜಿದ್ದಿ

ಬಿಜೆಪಿಗೆ ಶ್ರೀರಾಮನ ಬಲ. ಕಾಂಗ್ರೆಸ್ ಗೆ ಗ್ಯಾರಂಟಿ ಕೈ ಹಿಡಿಯುವ ಆಸೆ.

ಮೂಡಲಗಿ ಡಾಕ್ಟರ್ ಗೆ ಕೈಕೊಟ್ಟವರು ಯಾರು? ಆ ಅಸಮಾಧಾನ ಭುಗಿಲೇಳುತ್ರಾ?

.ದೆಹಲಿ ತೋರಿಸ್ತೇನಿ ಅಂತ ಬೆಳಗಾವಿಗೆ ಡ್ರಾಪ್


ಬೆಳಗಾವಿ.
ಗಡಿನಾಡ ಬೆಳಗಾವಿ ಜಿಲ್ಲೆಯ ಲೋಕಸಮರದ ಕಣ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಕಾಂಗ್ರೆಸ್ ಅಭ್ಯಥರ್ಿಗಳು ತಮ್ಮ ಮತ ಬೇಟೆಗೆ ಭರ್ಜರಿ ಚಾಲನೆ ನೀಡಿದ್ದಾರೆ, ಆದರೆ ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಪ್ರಚಾರ ಇನ್ನೂ ಶುರುವಾಗಿಲ್ಲ. ಚಿಕ್ಕೋಡಿಯಲ್ಲಿ ಅಣ್ಣಾಸಾಹೇಬ ಜೊಲ್ಲೆ ಪ್ರಚಾರದಿಂದ ಹಿಂದೆ ಸರಿದಿಲ್ಲ.
ಕಳೆದ ದಿನ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಸರು ಘೋಷಣೆಯಾಗಿದ್ದರಿಂದ ದಿ 27 ರಂದು ಬೆಳಗಾವಿಗೆ ಶೆಟ್ಟರ್ ಆಗಮಿಸಲಿದ್ದಾರೆ
ಬಿಜೆಪಿಗರು ಕೇವಲ ಮೋದಿ ಮತ್ತೊಮ್ಮೆ ಪ್ರಧಾನಿ ಎನ್ನುವುದನ್ನೇ ಜಪ ಮಾಡುತ್ತ ಮತಬೇಟೆಗೆ ಸನ್ನದ್ದರಾಗುತ್ತಿದ್ದಾರೆ. ಮತ್ತೊಂದು ಕಡೆಗೆ ಗ್ಯಾರಂಟಿಗಳ ಭರವಸೆಯಲ್ಲಿಯೇ ಕಾಂಗ್ರೆಸ್ ಮತಯಾಚನೆಗೆ ಮುಂದಾಗಿದೆ. ಮರಾಠಾ ಮತಗಳ ಮೇಲೆ ಕಣ್ಣಿಟ್ಟಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಎಲ್ಲವನ್ನೂ ಭಗವಾ ಮಯ ಮಾಡುತ್ತಿದ್ದಾರೆ.
ಅದೇನೆ ಇರಲಿ, ಈ ಬಾರಿ ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ಈ ಎರಡೂ ಪಕ್ಷಕ್ಕೆ ವಿರೋಧಿಗಳಿಗಿಂತ ಬಗಲ್ಮೆ ದುಶ್ನನ್ಗಳದ್ದೆ ದೊಡ್ಡ ಚಿಂತೆ ಯಾಗಿರುವುದು ಸುಳ್ಳಲ್ಲ.


ಇಲ್ಲಿ ಪಕ್ಷಕ್ಕಿಂತ ವೈಯಕ್ತಿಕ ಗುಂಪುಗಳಿವೆ, ಸಕ್ಕರೆ ಕಾಖರ್ಾನೆ ರಾಜಕೀಯ ಬಂದರೆ ಅದರಲ್ಲಿ ಕೆಲವರು ಒಂದಾಗುತ್ತಾರೆ, ಡಿಸಿಸಿ ಬ್ಯಾಂಕ್ ವಿಷಯ ಬಂದಾಗ ಪಕ್ಷ ಸಂಬಂಧವೇ ಬರಲ್ಲ. ಎಲ್ಲವೂ ವೈಯಕ್ತಿಕವಾಗಿ ಹೋಗುತ್ತದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಬೆಳಗಾವಿ ಜಿಲ್ಲೆಯಲ್ಲಿ ಕುಟುಂಬ ರಾಜಕಾರಣ ಬಹಳ ಸದ್ದು ಮಾಡುತ್ತದೆ. ಹೀಗಾಗಿ ಈ ರಾಜಕೀಯದಲ್ಲಿ ಇಂತಹವರು ಹೀಗೇ ಮಾಡುತ್ತಾರೆ ಎಂದು ಹೇಳುವುದು ಕಷ್ಟ ಸಾಧ್ಯವೇ ಸರಿ.


ಬೆಳಗಾವಿ ಜಿಲ್ಲೆಯ ರಾಜಕೀಯ ಇತಿಹಾಸವನ್ನು ಬಲ್ಲವರು ಈ ಮೇಲಿನ ಮಾತನ್ನು ಒಪ್ಪಲೇಬೇಕು,
ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಏನಾಯಿತು ಎನ್ನುವುದನ್ನು ಗಮನಿಸಿದರೆ ಸಧ್ಯದ ರಾಜಕೀಯದಲ್ಲಿ ಎಲ್ಲರೂ ಪಕ್ಷ ನಿಷ್ಠೆಗೆ ಅಂಟಿಕೊಂಡು ಹೋಗುತ್ತಾರೆ ಎಂದು ಹೇಳಲು ಆಗದ ಮಾತು.
ಹಿತಶತ್ರುಗಳೇ ಹೆಚ್ಚು…!
ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಸ್ಪಧರ್ಿಸಿದ್ದ ಅಭ್ಯಥರ್ಿಗಳಿಗೆ ಹಿತಶತ್ರುಗಳೇ ಹೆಚ್ಚು ಕಂಟಕವಾಗುವ ಸಾಧ್ಯತೆಗಳು ಹೆಚ್ಚಾಗಿ ಕಾಣಸಿಗುತ್ತವೆ.
ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಅಭ್ಯಥರ್ಿಯಾಗಿ ಜಗದೀಶ ಶೆಟ್ಟರ್ ಅವರನ್ನು ಹೈಕಮಾಂಡ ಕಣಕ್ಕಿಳಿಸಿದೆ. ಅವರ ಸ್ಪಧರ್ೆಯ ಬಗ್ಗೆ ಬೆಳಗಾವಿ ಬಿಜೆಪಿಗರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು. ಗೋ ಬ್ಯಾಕ್ ಶೆಟ್ಟರ್ ಅಭಿಯಾನ ಶುರು ಆಗಿತ್ತು, ಸಾಮಾಜಿಕ ಜಾಲತಾಣಕ್ಕೆ ಸಿಮೀತವಾಗಿದ್ದ ಅದು ಬೀದಿಗೂ ಬಂದಿತ್ತು.
ಅದೆಲ್ಲಾ ಒಂದು ಹಂತಕ್ಕೆ ಬರುತ್ತಿರುವಾಗಲೇ ಶೆಟ್ಟರ್ ಅವರು ಬೆಳಗಾವಿ ಬಿಜೆಪಿಗೆ ಮತವನ್ನು ತಂದು ಕೊಡಬಲ್ಲ ಸಾಮರ್ಥ್ಯ ವ ನ್ನು ಹೊಂದಿದ್ದ 8 ಜನ ಪ್ರಮುಖರ ಬಗ್ಗೆ ಹಗುರವಾಗಿ ಮಾತನಾಡಿ ಆಡಿಯೋ ಸದ್ದು ಮಾಡಿತ್ತು, ಅದನ್ನೇ ಮುಂದಿಟ್ಟುಕೊಂಡು 8 ಜನರು ಬೆಂಗಳೂರು ಚಲೋ ಸಹ ಮಾಡಿದರು. ಈಗಲೂ ಸಹಜವಾಗಿ ಆ ಸಿಟ್ಟು ಬೆಳಗಾವಿ ಬಿಜೆಪಿಗರಲ್ಲಿದೆ. ಈ ಕಾರಣದಿಂದ ಶೆಟ್ಟರ್ ಅವರು ವಿರೋಧ ಪಕ್ಷಕ್ಕಿಂತ ಸ್ವಪಕ್ಷೀಯರನ್ನು ಹೇಗೆ ಸಮಾಧಾನ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕು.
ಇನ್ನು ಮೃಣಾಲ್ ಹೆಬ್ಬಾಳಕರ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ. ಇಲ್ಲಿ ಮೃಣಾಲ್ ಬಗ್ಗೆ ಯಾರೂ ಅಪಸ್ವರ ಇಲ್ಲ. ಆದರೆ ಎಲ್ಲವೂ ಹೆಬ್ಬಾಳಕರ ಕುಟುಂಬಕ್ಕೆ ಯಾಕೆ ಎನ್ನುವ ಬಹುದೊಡ್ಡ ಪ್ರಶ್ನೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನೆ ಮಾಡಿದೆ. ಕಾರ್ಯಕರ್ತರಾದರೆ ಕಷ್ಟ ಎನ್ನುವ ಈ ನಾಯಕರು ತಮ್ಮಮಕ್ಕಳನ್ನು ಹೇಗೆ ಗೆಲ್ಲಿಸಿಕೊಂಡು ಬರುತ್ತಾರೆ ಎನ್ನುವ ಚಚರ್ೆ ಎಲ್ಲೆಡೆ ನಡೆದಿದೆ. ಇದು ಚಿಕ್ಕೋಡಿ ಕ್ಷೇತ್ರಕ್ಕೂ ಅನ್ವಯವಾಗುತ್ತದೆ.
ಇಲ್ಲಿ ಗಮನಿಸಬೇಕಾಧ ಮತ್ತೊಂದು ಸಂಗತಿ ಎಂದರೆ, ಆರಂಭದ ದಿನಗಳಲ್ಲಿ ಸಚಿವೆ ಹೆಬ್ಬಾಳಕರ ಅವರು ತಮ್ಮ ಕುಟುಂಬದಿಂದ ಯಾರೂ ನಿಲ್ಲಲ್ಲ. ನಿಮಗೆ ಟಿಕೆಟ್ ಎಂದು ಮೂಡಲಗಿಯ ಡಾ, ಗಿರೀಶ ಸೋನವಾಲ್ಕರ ಅವರಿಗೆ ಭರವಸೆ ನೀಡಿದ್ದರು, ಇದಕ್ಕೆ ಸಚಿವ ಸತೀಶ ಜಾರಕಿಹೊಳಿ ಕೂಡ ಸಮ್ಮತಿ ವ್ಯಕ್ತಪಡಿಸಿದ್ದರು.

ಕಳೆದ ಬಾರಿ ಲೋಕಸಭೆಯ ಉಪಚುನಾವಣೆಯಲ್ಲಿ ಡಾ, ಸೋನವಾಲ್ಕರ ಅವರಿಗೆ ಕೊನೆ ಹಂತದಲ್ಲಿ ಬಿಜೆಪಿ ಟಿಕೆಟ್ ತಪ್ಪಿತ್ತು, ಅಂತಹ ವ್ಯಕ್ತಿಯನ್ನು ಅಲ್ಲಿಂದ ಬಿಡಿಸಿ ಕೈ ಟಿಕೆಟ್ ಪಕ್ಕಾ ಎನ್ನುತ್ತಲೇ ‘ಕೈ’ ಕೊಟ್ಟ ನಾಯಕರ ಬಗ್ಗೆ ವ್ಯಾಪಕ ಅಸಮಾಧಾನದ ಮಾತುಗಳು ಈಗ ಕೇಳಿ ಬರುತ್ತಿವೆ. ಈ ಅಸಮಾಧಾನ ಮುಂದಿನ ದಿನಗಳಲ್ಲಿ ಯಾವ ರೀತಿ ಬದಲಾವಣೆ ಆಗಬಹುದು ಎನ್ನುವುದನ್ನು ಈಗಲೇ ಹೇಳಲಾಗದು.

ಹೊರಟಿದ್ದು ದೆಹಲಿಗೆ.. ಇಳಿದಿದ್ದು ಬೆಳಗಾವಿಗೆ
ಚಿಕ್ಕೋಡಿಯಲ್ಲಿ ಮಾತ್ರ ಬಿಜೆಪಿ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಬಗ್ಗೆ ಅಷ್ಟೊಂದು ವಿರೋಧ ವ್ಯಕ್ತವಾಗಲಿಲ್ಲ. ಆದರೆ ಅಮಿತ್ ಕೋರೆ, ರಮೇಶ ಕತ್ತಿ ಮುಂತಾದವರು ಟಿಕೆಟ್ ಗೆ ಪ್ರಯತ್ನ ಪಟ್ಟಿದ್ದರು. ಆದರೆ ಜೊಲ್ಲೆಗೆ ಟಿಕೆಟ್ ಘೋಷಣೆಯಾದಾಗ ಯಾರೂ ಹೆಚ್ಚು ವಿರೋಧ ವ್ಯಕ್ತಪಡಿಸಲಿಲ್ಲ.
ಇನ್ನು ಸಚಿವ ಸತೀಶ ಜಾರಕಿಹೊಳಿ ಅವರು ಮೊದಲಿನಿಂದಲೂ ತಮ್ಮ ಪುತ್ರಿ ಪ್ರಿಯಾಂಕಾ ಸ್ಪಧರ್ೆ ಮಾಡಲ್ಲ ಎನ್ನುವ ಮಾತನ್ನು ಆಡುತ್ತಲೇ ಬಂದಿದ್ದರು, ಇದೆಲ್ಲಕ್ಕಿಂತ ಮುಖ್ಯವಾಗಿ ಬೆಳಗಾವಿಯಲ್ಲಿ ನಡೆದ ಸಮಾವೇಶದಲ್ಲಿ ಸಿಎಂ ಸಿದ್ಧರಾಮಯ್ಯನವರ ಸಮ್ಮುಖದಲ್ಲಿಯೇ ಚಿಕ್ಕೋಡಿಯಿಂದ ಕುರುಬರಿಗೆ ಟಿಕೆಟ್ ಎಂದು ಘೋಷಣೆ ಮಾಡಿದ್ದರು.
ಸಚಿವರ ಮಾತಿನ ಮೇಲೆ ಭರವಸೆ ಇಟ್ಟ ಕುರುಬ ಸಮಾಜಕ್ಕೆ ಸೇರಿದದ ಲಕ್ಷ್ಮಣರಾವ್ ಚಿಂಗಳೆ ತಮಗೆ ಟಿಕೆಟ್ ಸಿಕ್ಕೇ ಬಿಟ್ಟಿತು ಎನ್ನುವಷ್ಟರ ಮಟ್ಟಿಗೆ ಖುಷಿಯಾಗಿದ್ದರು. ದೆಹಲಿ ಸಂಸತ್ ಭವನ ಮೆಟ್ಟಿಲು ಹತ್ತುವ ಕನಸು ಕಂಡಿದ್ದರು, ಆದರೆ ಅವರನ್ನು ಬೆಳಗಾವಿ ಬೂಡಾ ಕಚೇರಿ ಮೆಟ್ಟಿಲು ಹತ್ತಿಸಿ ಕೈಬಿಡಲಾಯಿತು, ಹೀಗಾಗಿ ಪ್ರಿಯಾಂಕಾ ಜಾರಕಿಹೊಳಿ ದಾರಿ ಸುಗಮವಾಯಿತು,


ಇಲ್ಲಿ ಸಚಿವರ ಪುತ್ರಿ ಸ್ಪರ್ಧೆಗೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಸಚಿವರ ಸ್ವಪಕ್ಷೀಯ ಬದ್ಧ ವೈರಿಗಳ ನಡೆ ಮಾತ್ರ ಇನ್ನೂ ನಿಗೂಢವಾಗಿದೆ.
ಹೀಗಾಗಿ ಎರಡೂ ಪಕ್ಷಗಳಿಗೆ ವಿರೋಧಿಗಳಿಗಿಂತ ಹಿತಶತ್ರುಗಳದ್ದೇ ಭಯ ಜಾಸ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ.

Leave a Reply

Your email address will not be published. Required fields are marked *

error: Content is protected !!