ಗೆದ್ದು ಬೀಗಿದ ರಾಜಾಹುಲಿ..!

ಬೆಳಗಾವಿಗರ ಮನಸ್ಸು ಗೆದ್ದ BSY

.ಶೆಟ್ಟರ್ ಆ ಮಾತಿಗೆ ಖುದ್ದು ಎದ್ದು ನಿಂತು ಕೈ ಮುಗಿದ ಯಡಿಯೂರಪ್ಪ.

ಮನಸ್ಸು ಮುರಿಯುವ ಮಾತಾಡಿದ ಶೆಟ್ಟರ್ ಮೌನಕ್ಕೆ ಶರಣು.

ಯಡಿಯೂರಪ್ಪ ಮಾತಿಗೆ ತಲೆದೂಗಿದ ಬಿಜೆಪಿಗರು. ದೂರವಾದ ಮುನಿಸು‌.


ಬೆಳಗಾವಿ.
ಈ ಸುದ್ದಿಯ ಹೆಡ್ಡಿಂಗ್ ಓದಿದ ಕ್ಷಣ ಒಂದು ರೀತಿಯ ಗೊಂದಲಕ್ಕೆ ಬೀಳುವುದು ಸಹಜ,
ಚುನಾವಣೆಗೆ ನಿಲ್ಲದ ಯಡಿಯೂರಪ್ಪ ಹೇಗೆ ಗೆದ್ದರು,? ಮತ್ತು ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಶೆಟ್ಟರ್ ಹೇಗೆ ಸೋತರು ಎನ್ನುವ ಬಹುದೊಡ್ಡ ಪ್ರಶ್ನೆ ಬರುವುದು ಸಹಜ ಮತ್ತು ಸ್ವಾಭಾವಿಕ.!
ಆದರೆ ನಾವು ಈಗ ಹೇಳಲು ಹೊರಟಿರುವುದು ಚುನಾವಣೆಯ ಸೋಲು ಗೆಲುವಿನ ಲೆಕ್ಕವಲ್ಲ. ಬದಲಾಗಿ ಬೆಳಗಾವಿಗರ ಮನಸ್ಸು ಗೆಲ್ಲುವುದರ ಕುರಿತು ಹೇಳಿದ ಮಾತು.

ಚೆಂದದ ಮತ್ತು ಮುತ್ತಿನಂತಹ ಮಾತುಗಳ ಮೂಲಕ ಎಂತಹುದೇ ದೊಡ್ಡದೊಡ್ಡ ಯುದ್ಧವನ್ನೇ ಗೆಲ್ಲಬಹುದು ಎನ್ನುವ ಮಾತಿದೆ, ಅಂತಹುದರಲ್ಲಿ ಶೆಟ್ಟರ್ ಮತ್ತು ಬೆಳಗಾವಿ ಬಿಜೆಪಿ ಮುನಿಸು ಸರಿ ಮಾಡಲು ದೊಡ್ಡಮಟ್ಟದ ಯುದ್ಧ ಮಾಡುವ ಅವಶ್ಯಕತೆ ಏನೂ ಇರಲಿಲ್ಲ.
ಆದರೆ ಪ್ರಭುದ್ಧರೂ ಎನಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆಡಿದ ಎಂಟು ಸೆಕೆಂಡಿನ ಒಂದು ಮಾತು ಬೆಳಗಾವಿ ಬಿಜೆಪಿಗರ ಮನಸ್ಸು ಛಿದ್ರ ಮಾಡಿತು. ಈಗ ಅದನ್ನು ಸರಿ ಮಾಡಲು ಖುದ್ದು ಹಿರಿಯ ಜೀವ ಯಡಿಯೂರಪ್ಪ ಬೆಳಗಾವಿಗೆ ಒಂದು ದಿನ ಮುಂಚಿತವಾಗಿ ರಾತ್ರೋ ರಾತ್ರಿ ಓಡೋಡಿ ಬರಬೇಕಾಯಿತು. ಅಷ್ಟೇ ಅಲ್ಲ ಶೆಟ್ಟರ ಆಡಿದ ಆ ಮಾತಿಗೆ ತಾವೇ ಖುದ್ದು ಸಣ್ಣವರ ಮುಂದೆ ಕೈ ಮುಗಿದು ಎದ್ದು ನಿಂತರು
.

ಅಂದರೆ ಇಲ್ಲಿ ತಾವು ಮಾಡದ ತಪ್ಪಿಗೆ ಖುದ್ದು ಎದ್ದು ನಿಂತು ಕ್ಷಮೆ ಕೇಳುವ ಮೂಲಕ ದೊಡ್ಡವರು ಹೇಗಿರಬೇಕು ಎಂದು ತೋರಿಸಿಕೊಟ್ಟರು, ಆದರೆ ಆ ಮಾತನ್ನು ಆಡಿದ ಶೆಟ್ಟರ್ ಇನ್ನೂ ಅದರ ಬಗ್ಗೆ ತುಟಿಪಿಟಕ್ಕೆಂದಿಲ್ಲ. ಅದಕ್ಕೆ ಶೆಟ್ಟರ್ ಸೋತರು, ಯಡಿಯೂರಪ್ಪ ಗೆದ್ದರು ಎಂದು ಹೇಳಬೇಕಾಯಿತು,

ಬಿಎಸ್ವೈ ಶ್ರಮ ಮರೆಯಲಾಗದು..
ಕನರ್ಾಟಕ ಬಿಜೆಪಿಯಲ್ಲಿ ಉಳಿದಿದ್ದು ಏನೇ ಇರಲಿ, ಯಡಿಯೂರಪ್ಪ ಹೆಸರಿಗೆ ಕರ್ನಾಟಕದಲ್ಲಿ ಬಿಜೆಪಿಯನ್ನು ಎತ್ತಿ ನಿಲ್ಲಿಸಿದ ಕಟ್ಟಾಳುಗಳಲ್ಲಿ
ಯಡಿಯೂರಪ್ಪ ಒಬ್ಬರು .

ವಿಧಾನಸಭೆಯಲ್ಲಿ ಶೂನ್ಯದಿಂದ ಶತಕದ ತನಕ, ಲೋಕಸಭೆಯಲ್ಲಿ 25 ಸೀಟುಗಳನ್ನು ಗೆದ್ದು ಬೀಗುವುದರ ಹಿಂದೆ ಬಿಎಸ್ವೈ ಅವರ ಶ್ರಮವನ್ನು ಯಾರೂ ಮರೆಯಲಾಗದು.
ಶಿಕಾರಿಪುರದಿಂದ ಸೈಕಲ್ ತುಳಿದು ವಿಧಾನಸೌಧದ ಮೆಟ್ಟಿಲೇರಿದ್ದ ಪ್ರಬಲ ಲಿಂಗಾಯತ ನಾಯಕ ಬಿ.ಎಸ್ ಯಡಿಯೂರಪ್ಪ ಪಕ್ಷದ ಪಾಲಿಗೆ ರಿಯಲ್ ಟ್ರಬಲ್ ಶೂಟರ್!.
ಹಾಗಾಗಿಯೇ ಈ ಇಳಿವಯಸ್ಸಿನಲ್ಲಿಯೂ ರಾತ್ರೋರಾತ್ರಿ ಬೆಳಗಾವಿಗೆ ಬಂದು ಇಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರ ಜತೆ ಸಭೆ ನಡೆಸಿ, ಪಕ್ಷದ ಅಭ್ಯರ್ಥಿ ಜಗದೀಶ ಶೆಟ್ಟರ್ ಪರವಾಗಿ ಕ್ಷಮೆಯಾಚಿಸಿ, ಅವರ ಪರ ಕೆಲಸ ಮಾಡುವಂತೆ ಎಲ್ಲರ ಮನವೊಲಿಸಿ, ಮರುದಿನ ಬೈಕ್ ರ್ಯಾಲಿಯಲ್ಲಿ ಎಲ್ಲರೂ ಬಂದು ಸೇರುವಂತೆ ಮಾಡಿದ್ದು ನಿಜಕ್ಕೂ ಅವರ ನಾಯಕತ್ವಕ್ಕೆ ಸಾಕ್ಷಿ.
ಹುಬ್ಬಳ್ಳಿಯ ಜಗದೀಶ ಶೆಟ್ಟರ್ ಬೆಳಗಾವಿ ಲೋಕಸಭೆಗೆ ಟಿಕೇಟು ಗಿಟ್ಟಿಸಿಕೊಂಡರೂ ಬೆಳಗಾವಿ ಬಿಜೆಪಿಗರ ಮನದಲ್ಲಿನ ಮುನಿಸು ಮರೆತು ಅವರ ಹೃದಯದಲ್ಲಿ ಸ್ಥಾನ ಪಡೆದುಕೊಳ್ಳುವುದಕ್ಕೆ ಬೆಂಗಳೂರಿನಿಂದ ಯಡಿಯೂರಪ್ಪನವರೇ ಬರಬೇಕಾಯಿತು.!
ಬೆಳಗಾವಿ ಚುನಾವಣಾ ಅಖಾಡಕ್ಕೆ ಶೆಟ್ಟರ್ ಆಗಮಿಸುವುದಕ್ಕೆ ಸ್ವಪಕ್ಷೀಯರಿಂದಲೇ ಭಾರೀ ವಿರೋಧ ವ್ಯಕ್ತವಾಗಿತ್ತು. ಗೋ ಬ್ಯಾಕ್ ಶೆಟರ್ ಚಳವಳಿ, ಶೆಟರ್ ವಿರುದ್ಧ ವ್ಯಂಗ್ಯ ಬ್ಯಾನರ್ಗಳು ನಗರದಲ್ಲಿ ಕಾಣಿಸಿಕೊಂಡಿದ್ದವು. ಪರಿಸ್ಥಿತಿ ಹೀಗೆ ಮುಂದುವರೆದರೆ ತಾವು ಕಟ್ಟಿದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ ಎಂಬುದನ್ನು ಅರಿತ ಮಾಜಿ ಮುಖ್ಯಮಂತ್ರಿ ಬಿ.ಎಸ್ ವೈ ಕಳೆದ ರಾತ್ರಿ ಬೆಳಗಾವಿಗೆ ಆಗಮಿಸಿ ವಾತಾವರಣವನ್ನು ಕೂಲ್ ಮಾಡಿದರು.
ಬೆಳಗಾವಿಯಲ್ಲಿ ಬಿಜೆಪಿ ಗೆಲುವು ಬಹು ಮುಖ್ಯ. ವ್ಯಕ್ತಿ ಬೇಡ. ಪಕ್ಷ ಮುಖ್ಯ ಅದಕ್ಕಾಗಿ ನೀವೆಲ್ಲಾ ಒಂದಾಗಿ ಸಂಘಟಿತರಾಗಿ ಪಕ್ಷದ ಅಭ್ಯಥರ್ಿ ಗೆಲುವಿಗೆ ಶ್ರಮಿಸಬೇಕು ಎಂದು ಬಿಎಸ್ವೈ ಕೈ ಮುಗಿದು ಕೇಳಿಕೊಂಡಾಗ ಬಿಜೆಪಿ ನಾಯಕರು ತಮ್ಮ ಮುನಿಸೆಲ್ಲಾ ಮರೆತು ಅವರ ಮಾತಿಗೆ ತಲೆಯಾಡಿಸದೆ ವಿಧಿಯಿರಲಿಲ್ಲ.



Leave a Reply

Your email address will not be published. Required fields are marked *

error: Content is protected !!