ಸಚಿವೆ ಹೆಬ್ಬಾಳಕರಗೆ ಸಮನ್ಸ ಜಾರಿ

ನೀತಿ ಸಂಹಿತೆ ಉಲ್ಲಂಘನೆ:
ಸಚಿವೆ ಹೆಬ್ಬಾಳಕರಗೆ ಸಮನ್ಸ್‌ ಜಾರಿ

30 ರೊಳಗೆ ಉತ್ತರಿಸುವಂತೆ ಸೂಚನೆ

ಬೆಳಗಾವಿ: ಲೋಕಸಮರದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಗುರುವಾರ ಸಮನ್ಸ್‌ ಜಾರಿ ಮಾಡಿದೆ.

ಸಚಿವರು ಇಲ್ಲಿನ ಕುವೆಂಪುನಗರದ ಗೃಹಕಚೇರಿ ಪಕ್ಕದ ಸಭಾಂಗಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರ ಸಭೆಯನ್ನು ಮಾರ್ಚ್‌ 20ರಂದು ನಡೆಸಿದ್ದರು.

ಅದಕ್ಕೆ ಅನುಮತಿ ಪಡೆದಿರಲಿಲ್ಲ. ‘ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ದೂರಲಾಗಿತ್ತು..
ಈ ಸಮನ್ಸಗೆ ಬರುವ ‘ಏಪ್ರಿಲ್‌ 30ರೊಳಗೆ ಉತ್ತರಿಸಬೇಕು’ ಎಂದು ಸೂಚಿಸಲಾಗಿದೆ. ಎರಡನೇ ಆರೋಪಿಯಾಗಿ ಹೆಸರಿಸಿರುವ ಸಭಾಂಗಣದ ಮಾಲೀಕ ಉಮೇಶ ಮಲ್ಲಪ್ಪ ವಾಸಣ್ಣವರ ಅವರಿಗೂ ಸಮನ್ಸ್‌ ಜಾರಿ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!