ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಕನ್ನಡದ ಕಗ್ಗೊಲೆ ಹೇಗೆ ಆಗ್ತಿದೆ ಎನ್ನುವುದಕ್ಕೆ ಮೇಲಿನ ಬೋರ್ಡ್ ಸಾಕ್ಷಿ.
ರಾಜ್ಯ ಸರ್ಕಾರವು ಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಇರಲೇಬೇಕು ಎಂದು ಆದೇಶ ಮಾಡಿದೆ ಈ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಬೆಳಗಾವಿ ಮಹಾನಗರ ಪಾಲಿಕೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡಿದೆ.

ಹೀಗಾಗಿ ಅಂಗಡಿ ಮುಗ್ಗಟ್ಟುಗಳ ಮುಂದಿರುವ ಬೋರ್ಡಗಳಲ್ಲಿ ಕನ್ನಡ ಕಾಣುವಂತಾಗಿದೆ. ಆದರೆ ಉದ್ದೇಶಪೂರ್ವಕನೊ ಏನೋ ಬೆಳಗಾವಿಯಲ್ಲೇ ಇರುವ ಅಂಗಡಿಯೊಂದರ ಮೇಲೆ ಸದ್ಗುರು ಎಂದು ಬರೆಯಬೇಕಾದ ಸ್ಥಳದಲ್ಲಿ ಸತ್ತಗುರು ಎಂದು ಬರೆದು ಅವಾಂತರ ಸೃಷ್ಟಿಸಲಾಗಿದೆ.
ಇಲ್ಲಿ ಆಂಗ್ಲ ಭಾಷೆಯಲ್ಲಿ SAT GURU ಎಂದಿದ್ದನ್ನು ಪುಣ್ಯಾತ್ಮ ಸತ್ತ ಗುರು ಎಂದು ಬರೆದಿದ್ದಾನೆ.