ಕೈ ಅಭ್ಯರ್ಥಿ ಗೆಲುವು ಪಕ್ಷದ ಮೇಲೆ ನಿಂತಿದೆ: ಸಚಿವ ಸತೀಶ ಜಾರಕಿಹೊಳಿ

ಚಿಕ್ಕೋಡಿ: “ಕೈ ಅಭ್ಯರ್ಥಿ ಗೆಲುವು ಪಕ್ಷದ ಮೇಲೆ ನಿಂತಿದೆ. ಜಾತಿ-ಧರ್ಮಗಳ ಆಧಾರ ಮೇಲೆ ಅಲ್ಲ” ಎಂದು ಜಿಲ್ಲಾಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಹೇಳಿದರು.

ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್‌ ಚುನಾವಣಾ ಪ್ರಚಾರದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲಿಂಗಾಯತ ಮತಗಳ ಮೇಲೆ ಚಿಕ್ಕೋಡಿ ಲೋಕಸಭಾ ಗೆಲುವಿನ ನಿರ್ಧಾರ ಅಡಗಿದೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾಂಗ್ರೆಸ್‌ ಪಕ್ಷದಲ್ಲೂ ಲಿಂಗಾಯತ ಪ್ರಾಲಭ್ಯ ಇರುವ ಶಾಸಕರು ಇದ್ದಾರೆ. ಕಾಂಗ್ರೆಸ್‌ ಗೆಲುವಿಗೆ ಪ್ರಾಮಾಣಿಕವಾಗಿ ಎಲ್ಲರೂ ಕೈ ಜೋಡಿಸುತ್ತಾರೆ. ಈಗಾಗಲೇ ಕ್ಷೇತ್ರಾದ್ಯಂತ ಪ್ರಚಾರ ಕೈಗೊಳ್ಳಲಾಗಿದೆ. ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿನ ಮುನ್ಸೂಚನೆ 50-50 ಇದೆ. ಎಷ್ಟೂ ಅಂತರದಿಂದ ಗೆಲುವು ಸಾಧಿಸುತ್ತೆವೆ ಎಂಬುವುದನ್ನು ಜೂನ್‌ 4 ಕ್ಕೆ ಫಲಿತಾಂಶ ತಿಳಿಯಲಿದೆ ಎಂದು ಹೇಳಿದರು.

ಚುನಾವಣೆ ಪ್ರಚಾರಕ್ಕೆ ಇನ್ನೂ ಬಹಳಷ್ಟು ಸಮಯವಿದೆ. ಕ್ಷೇತ್ರಾದ್ಯಂತ ಅಬ್ಬರದ ಪ್ರಚಾರ ನಡೆಸಲಾಗುತ್ತಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದ ಪ್ರಚಾರದಲ್ಲಿ ತೋಡಗಿಕೊಂಡಿದ್ದಾರೆ. ಈಗಾಗಲೇ ಬೆಳಗಾವಿ ಕ್ಷೇತ್ರದ ಚುನಾವಣೆ ಪ್ರಚಾರ ಭಾಗಿಯಾಗಿದ್ದೆನೆ, ಇನ್ನೂ ಕಾಲಾವಕಾಶವಿದೆ ಮತ್ತೆ ಬೆಳಗಾವಿ ಲೋಕಸಭಾ ಕ್ಷೇತ್ರಾದ್ಯಂತ ಪ್ರಚಾರಕ್ಕೆ ಹೋಗಲಾಗುವುದು. ಲಕ್ಷ್ಮೀ ಹೆಬ್ಬಾಳಕರ ಅವರು ಏ.12 ನಂತರ ಈ ಭಾಗದಲ್ಲಿ ಪ್ರಚಾರಕ್ಕೆ ಆಗಮಿಸುತ್ತಾರೆ. ನಮ್ಮಲ್ಲಿ ಯಾವುದೇ ಮುನಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.

ಚುನಾವಣೆ ಪ್ರಚಾರಕ್ಕೆ ಹೈಕಮಾಂಡನಿಂದ ಆಗಮಿಸುವ ನಾಯಕರು ಯಾರು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾಂಗ್ರೆಸ್‌ ವರಿಷ್ಠರು ಬರುವ ನಿರ್ಧಾರವಾಗಿಲ್ಲ ಪ್ರಚಾರಕ್ಕೆ ಬರುವ ಸೂಚನೆ ಇದೆ. ಈಗಾಗಲೇ ಶಾಸಕ ಲಕ್ಷ್ಮಣ ಸವದಿ ಅವರು, ಪ್ರಚಾರ ಕೈಗೊಂಡಿದ್ದಾರೆ. ನಾವು ಕೂಡ ಮೊದಲ ಹಂತದ ಪ್ರಚಾರ ನಡೆಸುತ್ತಿದ್ದೆವೆ. ಎರಡನೇ ಹಂತದ ಪ್ರಚಾರದಲ್ಲಿ ಸಚಿವೆ, ಶಾಸಕ ಲಕ್ಷ್ಮಣ ಸವದಿ ಅವರು ಭಾಗಿಯಾಗಲಿದ್ದಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!