ಬೆಳಗಾವಿ: ಇಂದು ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಖಾನಾಪುರದ ಪುಟ್ಟ ಗ್ರಾಮದ ಸಹೋದರಿಯರು ರಾಜ್ಯದ ಗಮನ ಸೆಳೆದಿದ್ದಾರೆ.

ಖಾನಾಪುರ ತಾಲ್ಲೂಕಿನ ಅವರೊಳ್ಳಿ ಗ್ರಾಮದ ರೈತಾಪಿ ಕುಟುಂಬದ ಹೆಮ್ಮೆಯ ಕುಡಿಗಳಾದ ಮೇಘ ಮಲಗೌಡ ಪಾಟೀಲ ಹಾಗೂ ಸೃಷ್ಟಿ ಮಲಗೌಡ ಪಾಟೀಲ ಈ ಅಮೋಘ ಸಾಧನೆ ಮಾಡಿದ್ದಾರೆ.
ಖಾನಾಪುರದ ತಾರಾರಾಣಿ ಕಾಲೇಜಿನ ಕಲಾ ವಿಭಾಗ ಆಂಗ್ಲ ಮಾಧ್ಯಮದಲ್ಲಿ ಓದುತ್ತಿದ್ದ ಈ ವಿದ್ಯಾರ್ಥಿನಿಯರಲ್ಲಿ ಹಿರಿಯಳಾದ ಮೇಘಾ ಮ.ಪಾಟೀಲ ೯೭.೫ ಶೇ. ಅಂಕ ಗಳಿಸಿದರೆ, ಕಿರಿಯ ಸಹೋದರಿ ಸೃಷ್ಟಿ ಪಾಟೀಲ ೯೫. ೬೬ ಶೇ. ಅಂಕಗಳನ್ನು ಪಡೆದು ಶಿಕ್ಷಣ ಸಂಸ್ಥೆಗೂ ಹೆಮ್ಮೆ ತಂದಿದ್ದಾರೆ.