PSI ಆಸನದಲ್ಲಿ ಸ್ವಾಮೀಜಿ…!

PSI ಕುರ್ಚಿ ಮೇಲೆ ಸ್ವಾಮೀಜಿ..! ಮೇರೆ ಮೀರಿದ ಅಭಿಮಾನ..!!?

ಬೆಳಗಾವಿ:
. ಸರಕಾರಿ ಕಚೇರಿ ಮತ್ತು ಅಧಿಕಾರಿಗೆ ನೀಡಲಾದ ವಾಹನ ಮತ್ತು ಇತರ ಸೌಕರ್ಯಗಳನ್ನು ಖಾಸಗಿ ಇಲ್ಲವೇ ರಾಜಕೀಯ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಬಳಕೆ ಮಾಡಬಾರದು..

ಈ ನಡುವೆ ಯೂನಿಫಾರ್ಮ್ ಇಲಾಖೆಯ PSI ಒಬ್ಬ ತನ್ನ ಕಚೇರಿಯ ಅಧಿಕೃತ ಕುರ್ಚಿಯನ್ನು ಸ್ವಾಮೀಜಿ ಒಬ್ಬರಿಗೆ ಬಿಟ್ಟುಕೊಟ್ಟು ತಾನು ಮುಂದೆ ಕೈಕಟ್ಟಿ ಕುಳಿತಿರುವ ದೃಶ್ಯ ಈಗ ಎಲ್ಲೆಡೆ ಚರ್ಚೆ ಎಡೆಮಾಡಿಕೊಟ್ಡಿದೆ.


. ಸರಕಾರಿ ಅಧಿಕಾರಿ, ಶಾಸಕ ಇಲ್ಲವೇ ಮಂತ್ರಿಗಳಿಗೆ ವೈಯಕ್ತಿಕವಾಗಿ ನಮಸ್ಕಾರ ಶಿರಸಾಷ್ಟಾಂಗ ಹೊಡೆಯಬಹುದು. ಆದರೆ ಅವರನ್ನು ಸರಕಾರಿ ಕಚೇರಿಯ ಅಧಿಕೃತ ಕುರ್ಚಿ ಮೇಲೆ ಕೂಡ್ರಿಸುವುದುತಪ್ಪು. ಅದು ಅಪರಾಧ ಕೂಡ ಹೌದು. .
ಇಂತಹ ವಿಲಕ್ಷಣ ಘಟನೆ ಕುಡಚಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಠಾಣೆಯ ಪಿಎಸ್ ಐ ಮಾಳಪ್ಪ ಪೂಜಾರಿ ಎಂಬುವವರು ಈ ಕೃತ್ಯ ನಡೆಸಿ ಗಮನ ಸೆಳೆದಿದ್ದಾರೆ. ಜಾತಿ- ಧಾರ್ಮಿಕತೆ, ವೈಯಕ್ತಿಕ ಅಭಿಮಾನ ಅನುರಾಗದ ಆಧಾರದ ಮೇಲೆ ಸರಕಾರಿ ಕಚೇರಿಯಲ್ಲಿ ತಿಳಿದದ್ದು ಮಾಡಲು ಅವಕಾಶವಿದೆಯೇ,?

ತಪ್ಪಿತಸ್ಥರ ವಿರುದ್ಧ ಕ್ರಮ

ಕುಡಚಿ ಪೊಲೀಸ್ ಠಾಣೆಯ ಪಿಎಸ್ ಐ ಆಸನದ ಮೇಲೆ ಬೇರೊಬ್ಬರು ಕುಳಿತಿದ್ದುವತಪ್ಪು. ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ

ಡಾ. ಭೀಮಾಶಂಕರ ಗುಳೇದ , ಎಸ್ಪಿ. ಬೆಳಗಾವಿ

Leave a Reply

Your email address will not be published. Required fields are marked *

error: Content is protected !!