ಕಾಂಗ್ರೆಸ್ಗೆ ಶೆಡ್ಡು ಹೊಡೆದ `ರಾಮಭಕ್ತರು’


ರಾಮನವಮಿಯಂದೇ ಬೆಳಗಾವಿಯಲ್ಲಿ ಶೆಟ್ಟರ್ ನಾಮಪತ್ರ ಸಲ್ಲಿಕೆ.

ವಿರೋಧಿಗಳ ಆರೋಪ ಕೇರ್ ಮಾಡದೇ ಬಿಜೆಪಿ ಬೆಂಬಲಿಸಿದ ರಾಮಭಕ್ತರು.

ಕಾಂಗ್ರೆಸ್ ಶಾಸಕರಿರುವ ಕ್ಷೇತ್ರದಿಂದಲೂ ಹೆಚ್ಚಿಗೆ ಬಂದಿದ್ದ ಕಾರ್ಯಕರ್ತರು.

ಎಲ್ಲಿ ನೋಡಿದಲ್ಲಿ ಜನವೋ ಜನ. ಮುಗಿಲು‌ ಮುಟ್ಟಿದ ಜಯ ಘೋಷ, ಬಾನೆತ್ತರಕ್ಕೆ ಹಾರಿದ ಭಗವಾ ಮತ್ತು ಬಿಜೆಪಿ ಬಾವುಟ.

ಶೆಟ್ಟರ್ ಗೆ ಸಾಥ್ ನೀಡಿದ ರಾಜಾಹುಲಿ, ಗೋವಾ ಸಿಎಂ, ಶಾಸಕರಾದ ಅಭಯ ಪಾಟೀಲ, ಬಾಲಚಂದ್ರ ಜಾರಕಿಹೊಳಿ, ಈರಣ್ಣ ಕಡಾಡಿ, ಡಾ. ಪ್ರಭಾಕರ ಕೋರೆ. ಬಿಜೆಪಿ ನಗರಸೇವಕರು

ಬೆಳಗಾವಿ.
ಶ್ರೀರಾಮ ನವಮಿಯಂದೇ ಜೈ ಶ್ರೀರಾಮ ಫೋಷಣೆಯೊಂದಿಗೆ ಬಿಜೆಪಿ ಅಭ್ಯರ್ಥಿ ಶೆಟ್ಟರ್ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಹೊರಡಿಸಿದ್ದ ಮೆರವಣಿಗೆ ಅಕ್ಷರಶ: ವಿಜಯ ಯಾತ್ರೆಯಂತಾಗಿತ್ತು.

ಕಣ್ಣು ಹಾಯಿಸಿದಲ್ಲೆಲ್ಲಾ ಜನವೋ ಜನ. ಕಾಣುತ್ತಿತ್ತು, ಎಲ್ಲಿ ನೋಡಿದಲ್ಲಿ ಭಗವಾ, ಬಿಜೆಪಿ ಧ್ವಜಗಳ ಹಾರಾಟ ಮುಗಿಲು ಮುಟ್ಟಿತ್ತು, ಜೈ ಶ್ರೀರಾಮ, ಜೈ ಮೋದಿ, ಅಬ್ ಕಿ ಬಾರ್ ಚಾರಸೋ ಪಾರ್ ಎನ್ನುವ ಘೋಷಣೆಗಳು ಮುಗಿಲು ಮುಟ್ಟಿದ್ದವು,

ಕಳೆದ 15 ರಂದೇ ಕೇವಲ 5 ಜನರೊಂದಿಗೆ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ನಾಮಪತ್ರ ಸಲ್ಲಿಸಿದ್ದರು, ಅವತ್ತೇ ಕಾಂಗ್ರೆಸ್ ಅಭ್ಯರ್ಥಿ ಮೃನಾಲ್ ಹೆಬ್ಬಾಳಕರ ಕೂಡ ತಮ್ಮ ನಾಮಪತ್ರ ಸಲ್ಲಿಸಿದ್ದರು,

ಆಗ ಕಾಂಗ್ರೆಸ್ ಕೂಡ ಶಕ್ತಿ ಪ್ರದರ್ಶನ ನಡೆಸಿತ್ತು, ‘ಆದರೆ ಅದನ್ನು ಸವಾಲಾಗಿ ಸ್ವೀಕರಿಸಿದ್ದ ಬಿಜೆಪಿ ಹೊರಡಿಸಿದ್ದ ಮೆರವಣಿಗೆಯಲ್ಲಿ ಸ್ವಯಂ ಸ್ಪೂರ್ತಿಯಾಗಿ ರಾಮಭಕ್ತರು ಸಾಗರೋಪಾದಿಯಲ್ಲಿ ಹರಿದು ಬಂದರು.

oplus_2

ಈ ಜನಸ್ತೋಮವನ್ನು ಕಂಡು ವಿರೋಧಿಗಳು ಹೈರಾಣಾಗಿದ್ದಂತೂ ಸುಳ್ಳಲ್ಲ.
ಈ ಅಭೂತಪೂರ್ವ ಮೆರವಣಿಗೆಗೆ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ, ರಾಜ್ಯದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ,, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಶಾಸಕ ಅನಿಲ ಬೆನಕೆ, ಡಾ., ರವಿ ಪಾಟೀಲ, ಎಂ.ಬಿ ಜಿರಲಿ, ಆರ್,ಎಸ್,. ಮುತಾಲಿಕ ದೇಸಾಯಿ ಸೇರಿದಂತೆ ಮತ್ತಿತರರು ಸಾಕ್ಷಿಯಾದರು,

oplus_2

ನಾಮಪತ್ರ ಸಲ್ಲಿಕೆಗೂ ಮುನ್ನ ದಿ. ಸುರೇಶ ಅಂಗಡಿ ಅವರ ಬಭಾವಚಿತ್ರಕ್ಕೆ ಶೆಟ್ಟರ್ ನಮನ ಸಲ್ಲಿಸಿದರು, ಈ ಸಂದರ್ಭದಲ್ಲಿ ಸಂಸದೆ ಮಂಗಲಾ ಅಂಗಡಿ ಭಾವುಕರಾದರು, ನಂತರ ರಾಮದೇವ ಗಲ್ಲಿಯಲ್ಲಿರುವ ಶ್ರೀರಾಮನ ಮಂದಿರ ಮತ್ತು ಸಮಾದೇವಿ ಮಂದಿರಕ್ಕೆ ಆಗಮಿಸಿ ಮತ್ತೇ ವಿಶೇಷ ಪೂಜೆ ಸಲ್ಲಿಸಿದರು,

Leave a Reply

Your email address will not be published. Required fields are marked *

error: Content is protected !!