ಬೆಳಗಾವಿ. ಎತ್ತ ನೋಡಿದರತ್ತ ಭಂಡಾರ ತೂರಾಟ. ಭಕ್ತಿಯ ಪರಾಕಾಷ್ಠೆ ಮೆರೆದ ಜನ ಸಮೂಹ. ಗ್ರಾಮ ದೇವಿಯ ಮೂತರ್ಿಯನ್ನು ಹೊತ್ತು ಸಾಗುತ್ತಿರುವ ಭಕ್ತರು...! ಅಬ್ಬಾ ಇದೆಲ್ಲವನ್ನು ನೋಡಲು ನಿಜವಾಗಿಯೂ ಎರಡು ಕಣ್ಣು ಸಾಲದು. ಈ ಎಲ್ಲ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮ.!

ಸುತ್ತಲಿನ ಹತ್ತೂರ ಹಳ್ಳಿಗಳ ಒಡೆಯ’ ಎಂದು ಕರೆಯಿಸಿಕೊಳ್ಳುವ ಹಿರೇಬಾಗೇವಾಡಿಯಲ್ಲಿ ಕಳೆದ 25 ವರ್ಷಗಳ ನಂತರ ಗ್ರಾಮದೇವತೆ ಜಾತ್ರೆ ನಡೆಯುತ್ತಿದೆ, ಇದರ ಜೊತೆಗೆ ಫಡೀಬಸವೇಶ್ವರ ಜಾತ್ರೆ ನಡೆಯುತ್ತಿದೆ.
ಕಳೆದ ದಿ 12 ರಿಂದ ಆರಂಭಗೊಂಡ ಈ ಗ್ರಾಮದೇವಿ ಜಾತ್ರೆಯು ಮೇ 3 ರವರೆಗೆ ನಡೆಯಲಿದೆ,
ಈ ಹಿನ್ನೆಲೆಯಲ್ಲಿ ಗ್ರಾಮದೇವತೆಗೆ ಉಡಿತುಂಬುವ ಕಾರ್ಯಕ್ರಮ ಸೇರಿದಂತೆ ನಿತ್ಯ ಒಂದಿಲ್ಲೊಂದು ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿವೆ,
ಗಮನಿಸಬೇಕಾದ ಸಂಗತಿ ಎಂದರೆ ಕಳೆದ ದಿ, 18 ರಿಂದ ಹೊನ್ನಾಟ ನಡೆಯುತ್ತಿದೆ, ]
ಗ್ರಾಮದೇವಿ ಮೂರ್ತಿಯನ್ನು ಊರ ತುಂಬಾ ಮೆರವಣಿಗೆ ಮಾಡಲಾಗುತ್ತಿದೆ. ಭಕ್ತರು ಪರಸ್ಪರ ಭಂಡಾರವನ್ನು ಎರಚಿ ಸಂಭ್ರಮದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.
ಗ್ರಾಮದಲ್ಲಿ ಮೊಟ್ಟಮೊದಲ ಬಾರಿಗೆ ಇಷ್ಟೊಂದು ಅದ್ದೂರಿಯಾಗಿ ಗ್ರಾಮದೇವಿಯ ಜಾತ್ರೆಯನ್ನು ಆಚರಿಸಲಾಗುತ್ತಿದೆ,
ಗ್ರಾಮದಲ್ಲಿ ನಡೆದ ಭಂಡಾರದ ಹೊನ್ನಾಟದಲ್ಲಿ ಯಾವುದೇ ಭೇದಭಾವ ಇಲ್ಲದೆಯೇ ಪರಸ್ಪರ ಭಂಡಾರ ಎರಚುವ ಮೂಲಕ ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ, ಪ್ರತಿ ದಿನ ಒಂದೊಂದು ಓಣಿಯವರು ಗ್ರಾಮದೇವಿಯನ್ನು ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗುತ್ತಿದ್ದಾರೆ.
ಮಹಿಳೆಯರು, ಮಕ್ಕಳೂ ಸಹ ಈ ಉತ್ಸವದಲ್ಲಿ ಸಕ್ರೀಯವಾಗಿ ಭಾಗವಹಿಸುವ ಮೂಲಕ ಹೊಸ ಮೆರಗು ತಂದಿದ್ದಾರೆ. ಯುವಕರು ಇಂತಹ ಹಬ್ಬಗಳನ್ನು ಅದ್ದೂರಿಯಾಗಿ ಆಚರಣೆ ಮಾಡುವ ಮೂಲಕ ಸಂಭ್ರಮಿಸಿರುವುದು ನೋಡುಗರ ಕಣ್ಮನ ಸೆಳೆಯುವಂತಿರುತ್ತದೆ.
ಒಟ್ಟಿನಲ್ಲಿ ಗ್ರಾಮೀಣ ಭಾಗದ ಜಾತ್ರೆ ಅಂದರೆ ನಿಜಕ್ಕೂ ಒಂದು ವಿನೂತನ ರೀತಿಯ ಮೆರಗು ಇದ್ದೇ ಇರುತ್ತದೆ. ಇದಕ್ಕೆ ಹಿರೇಬಾಗೇವಾಡಿ ಗ್ರಾಮದೇವತೆ ಜಾತ್ರೆಯೇ ಸಾಕ್ಷಿ.